ಸುದ್ದಿಮೂಲ ವಾರ್ತೆ
ಕೆಜಿಎಫ್, ಮೇ 4: ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಪರವಾಗಿ ಕೆಜಿಎಫ್ ಜನತೆಗೆ ಹಲುವಾರು
ಕೆಲಸಗಳನ್ನು ಮಾಡಿ ಕ್ಷೇತ್ರದಲ್ಲಿ ನನ್ನ ಕೈಲಾದಷ್ಟು ಸಮಾಜ ಸೇವೆ ಮಾಡಿದ್ದೇನೆ. ಆದರೆ ಪಕ್ಷದ ವರಿಷ್ಠರು ನಾನು ಮಾಡಿರುವಂತಹ ಸಮಾಜ ಸೇವೆಯನ್ನು ಗುರುತಿಸಲಿಲ್ಲ. ಆದುದರಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದೇನೆ ಎಂದು ಬಿ. ಸುರೇಶ್ ಅಸಮಾದಾನ ವ್ಯಕ್ತಪಡಿಸಿದರು.
ಪಟ್ಟಣದ ಸಮೀಪದ ಕಮ್ಮಸಂದ್ರ ಗ್ರಾಮದ ವೇಣುಗೋಪಾಲಸ್ವಾಮಿ ದೇವಸ್ಥಾನದ ಬಳಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಹಗಲು ಇರುಳು ಕೆಲಸ ಮಾಡಿದ್ದೇನೆ. ಗ್ರಾಮೀಣ ಹಾಗೂ ನಗರ
ಭಾಗದಲ್ಲಿ ದೇವಸ್ಥಾನಗಳಿಗೆ ಆರ್ಥಿಕ ಸಹಾಯ, ಒಂ ಶಕ್ತಿ ಮಾಲೆದಾರರಿಗೆ ಉಚಿತ ಬಸ್, ನಗರದಲ್ಲಿ ಆಸ್ಪತ್ರೆಯ ಬಳಿ ಜೈ ಭಾರತ್ ಉಚಿತ ಕ್ಯಾಂಟಿನ್, ಇನ್ನೂ ಮುಂತಾದ ಸಮಾಜ ಸೇವೆ ಮಾಡಿದ್ದೇನೆ, ಆದರೆ ಪಕ್ಷ
ನಾನು ಮಾಡಿರುವ ಕೆಲಸಗಳನ್ನು ಗುರುತಿಸದೇ ಪಕ್ಷದಲ್ಲಿ ಬೇರೆಯವರಿಗೆ ಟಿಕೆಟ್ ನೀಡಿರುವುದು
ಬೇಸರವಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಸಿದ್ದಾಂತಗಳನ್ನು ಮೆಚ್ಚಿ ಮತ್ತು ಕೆಜಿಎಫ್ ಕ್ಷೇತ್ರದಲ್ಲಿ ಶಾಸಕಿ ರೂಪಕಲಾ ಅವರು ಮಾಡಿರುವ ಅಭಿವೃದ್ದಿ ಕಾರ್ಯ ವೈಖರಿಗಳನ್ನು ಮೆಚ್ಚಿ ಈ ದಿನದಂದು ಶಾಸಕರ ನೇತೃತ್ವದಲ್ಲಿ 200 ಜನ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ ಸೇರಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಲಕ್ಷ್ಮೀನಾರಾಯಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣರೆಡ್ಡಿ, ಕೆಪಿಸಿಸಿ ಸದಸ್ಯ ದುರ್ಗಾಪ್ರಸಾದ್, ಕಮ್ಮಸಂದ್ರ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ್, ಗ್ರಾಪಂ ಸದಸ್ಯರಾದ ವಿನುಕಾರ್ತಿಕ್, ಅಯ್ಯಪ್ಪಲ್ಲಿ ಮಂಜುನಾಥ್, ಮುಖಂಡರಾದ ಮುನಿಸ್ವಾಮಿರೆಡ್ಡಿ, ಸುರೇಂದ್ರಗೌಡ, ಒಬಿಸಿ ಮುನಿಸ್ವಾಮಿ, ಬಾರ್ಗವ್ ರಾಮ್, ಗೋಪಾಲ್, ಸೇರಿದಂತೆ ಅನೇಕ ಕಾರ್ಯಕರ್ತರು ಮತ್ತು ಉಪಸ್ಥಿತರಿದ್ದರು.