ಸುದ್ದಿಮೂಲ ವಾರ್ತೆ ಭಾಲ್ಕಿ, ಡಿ.25:
ರಾಜ್ಯದಲ್ಲಿ ಮಕ್ಕಳ ಕುಂದು ಕೊರತೆ, ಸಮಸ್ಯೆೆಗಳನ್ನು ಬಗೆಹರಿಸಲು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅವರು ವಿಶೇಷ ಕಾಳಜಿ, ಮುತುವರ್ಜಿ ವಹಿಸುತ್ತಿಿದ್ದಾರೆ ಎಂದು ಮಾಜಿ ಶಾಸಕ ಪ್ರಕಾಶ ಖಂಡ್ರೆೆ ಹೇಳಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ನಡೆದ ಶತಾಯುಷಿ ಡಾ.ಚನ್ನಬಸವ ಪಟ್ಟದ್ದೇವರ 136ನೆಯ ಜಯಂತ್ಯುತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಹಿಂದೆ ಬಿಜೆಪಿ ಸರಕಾರದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾಗಿ ಶಶಿಧರ ಕೋಸಂಬೆ ನೇಮಕಗೊಂಡು ಕಳೆದ ಎರಡುವರೇ ವರ್ಷಗಳಿಂದ ಮಕ್ಕಳ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿ ಆ ಹುದ್ದೆಗೆ ಗೌರವ ತಂದು ಕೊಡುವ ಕೆಲಸ ಮಾಡುತ್ತಿಿದ್ದಾರೆ.
ಇದೀಗ ಆಯೋಗದ ಅಧ್ಯಕ್ಷರಾಗಿ ಜಿಲ್ಲೆಗೆ ಕೀರ್ತಿ ತಂದು ಕೊಟ್ಟಿಿದ್ದಾರೆ. ಅವರು ರಾಜ್ಯದಾದ್ಯಂತ ಸುತ್ತಾಾಟ ನಡೆಸಿ ವಸತಿ ನಿಲಯ, ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಮಕ್ಕಳಿಗೆ ನ್ಯಾಾಯ ಒದಗಿಸುವ ಕೆಲಸ ಮಾಡುತ್ತಿಿರುವುದು ಖುಷಿ ತಂದು ಕೊಟ್ಟಿಿದೆ ಎಂದು ತಿಳಿಸಿದರು.
ಮಕ್ಕಳ ಕ್ಷೇತ್ರದಲ್ಲಿ ಕೋಸಂಬೆ ಉತ್ತಮ ಕೆಲಸ – ಖಂಡ್ರೆ ಮೆಚ್ಚುಗೆ

