ಸುದ್ದಿಮೂಲ ವಾರ್ತೆ ಬೀದರ್, ನ.17:
ಪಕ್ಷಾತೀತವಾಗಿ ನಡೆಯುತ್ತಿಿರುವ ರೈತರ ಹೋರಾಟದ ವೇದಿಕೆಯಲ್ಲಿ ಮಾಜಿ ಕೇಂದ್ರ ಸಚಿವ ಭಗವಂತ್ ಖುಬಾ ತಮ್ಮ ವಿರುದ್ಧ ವೈಯಕ್ತಿಿಕ ಟೀಕೆ ಮಾಡಿದರೂ ರೈತ ಮುಖಂಡರು ಏಕೆ ಸುಮ್ಭನಿದ್ದೀರಿ ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆೆ ರೈತ ಮುಖಂಡರಿಗೆ ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಗರದಲ್ಲಿ ನಡೆದಿದೆ.
ನಗರದ ಅಂಬೇಡ್ಕರ್ ವೃತ್ತ ಸಮೀಪದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಮುಂದೆ ಪ್ರತಿ ಟನ್ ಕಬ್ಬಿಿಗೆ 3100 ರೂ. ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ನಡೆಸುತ್ತಿಿರುವ ಅಹೋರಾತ್ರಿಿ ಧರಣಿ ಸ್ಥಳಕ್ಕೆೆ ಭೇಟಿ ನೀಡಿ ರೈತರ ಬೇಡಿಕೆ ಆಲಿಸಿದ ಬಳಿಕ ಮಾತನಾಡಿದರು.
ರೈತರ ಹೋರಾಟದಲ್ಲಿ ಬಂದು ರಾಜಕೀಯ ಮಾತನಾಡಿರುವ ಖುಬಾಗೆ ರೈತ ಮುಖಂಡರು ಏಕೆ ತಡೆದಿಲ್ಲ. ನನ್ನ ವಿರುದ್ಧ ಅನಗತ್ಯ ಟೀಕೆ ಮಾಡಲಾಗಿದೆ. ರೈತರ ಬಗ್ಗೆೆ ಖುಬಾಗೆ ಕಾಳಜಿ ಇದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಸಕ್ಕರೆ ಮೇಲಿನ ರ್ತ್ತು ನಿಷೇಧ ತೆಗೆಯುವ ಕೆಲಸ ಮಾಡಲಿ. ಅದು ಬಿಟ್ಟು ರಾಜ್ಯ ಸರ್ಕಾರದ ಮೇಲೆ ಟೀಕೆ ಮಾಡಿರುವುದು ಸರಿಯಲ್ಲ ಎಂದು ಖಾರವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆೆ ಸ್ಥಳದಲ್ಲಿದ್ದ ರೈತ ಮುಖಂಡರು ಏನನ್ನೂ ಹೇಳದೇ ಮೌನಕ್ಕೆೆ ಶರಣಾದರು.
ಪೌರಾಡಳಿತ ಸಚಿವ ರಹೀಮ್ ಖಾನ್, ನಗರಸಭೆ ಅಧ್ಯಕ್ಷ ಮೊಹಮ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಪ್ರದೀಪ್ ಗುಂಟಿ ಮೊದಲಾದವರು ಇದ್ದರು.
ಬಾಕ್ಸ್
ದರ ಹೆಚ್ಚಳ ಅಸಾಧ್ಯ – ಖಂಡ್ರೆೆ
ಸದ್ಯ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪ್ರತಿ ಟನ್ ಕಬ್ಬಿಿಗೆ 2900 ರೂ. ನಿಗದಿಗೊಳಿಸಿರುವುದು ನ್ಯಾಾಯಯುತ ಬೆಲೆಯಾಗಿದೆ, ಇದಕ್ಕಿಿಂತ ಹೆಚ್ಚುವರಿ ಬೆಲೆ ಏರಿಕೆ ಮಾಡುವುದು ಅಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆೆ ಹೇಳಿದ್ದಾರೆ.
ಧರಣಿ ಸ್ಥಳದಲ್ಲಿ ಮಾತನಾಡಿದ ಖಂಡ್ರೆೆ, ರಾಜ್ಯ ಸರ್ಕಾರ ಈಗಾಗಲೇ ಟನ್ ಕಬ್ಬಿಿಗೆ 50 ರೂ. ನೀಡಲು ತೀರ್ಮಾನಿಸಿದೆ. ಇನ್ನೂ ಹೆಚ್ಚಿಿನ ಹಣ ಒದಗಿಸುವುದು ಕಷ್ಟಸಾಧ್ಯ. ಜಿಲ್ಲೆಯ ಕಬ್ಬಿಿನ ರಿಕವರಿ ಕಡಿಮೆ ಇದೆ. ಹಾಗಾಗಿ, ಬೇರೆ ಜಿಲ್ಲೆಯ ಕಬ್ಫಿಿನ ದರದ ಜೊತೆ ಹೋಲಿಕೆ ಮಾಡಬಾರದು ಎಂದು ಹೇಳಿದ್ದಾರೆ.
ಹೋರಾಟ ಮುಂದುವರೆಸುತ್ತೇವೆ
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆೆ ಅವರ ಮೇಲೆ ಜಿಲ್ಲೆಯ ಕಬ್ಬು ಬೆಳೆಗಾರರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ರೈತರ ಬೇಡಿಕೆಗೆ ಸ್ಪಂದಿಸುವ ಭರವಸೆ ಇತ್ತು. ಆದರೆ, ಹೆಚ್ಚಿಿನ ದರ ನೀಡುವುದು ಅಸಾಧ್ಯ ಎಂದು ಸಚಿವ ಖಂಡ್ರೆೆ ಹೇಳಿದ್ದಾರೆ. ಹಾಗಾಗಿ, ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದು ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಾಮಪ್ಪಾಾ ಆಣದೂರೆ ತಿಳಿಸಿದ್ದಾರೆ.

