ಸುದ್ದಿಮೂಲ ವಾರ್ತೆ ರಾಯಚೂರು, ಜ.19:
ಇಲ್ಲಿನ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀೆಡಾ ಇಲಾಖೆಯಿಂದ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ಅಂಗವಾಗಿ ಜನವರಿ 19ರಂದು ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀೆಡಾಂಗಣದಲ್ಲಿ ಖೋಖೋ ಕ್ರೀೆಡಾಕೂಟಕ್ಕೆೆ ಯುವ ಸಬಲೀಕರಣ ಮತ್ತು ಕ್ರೀೆಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಈರೇಶ್ ನಾಯಕ ಅವರು ಚಾಲನೆ ನೀಡಿದರು.
ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಿಂದ ಸುಮಾರು 300ಕ್ಕೂ ಹೆಚ್ಚು ವಿದ್ಯಾಾರ್ಥಿಗಳ ಸುಮಾರು 28ತಂಡಗಳ ಪೈಕಿ ಪುರುಷರ 16 ತಂಡಗಳು ಮತ್ತು 12 ಮಹಿಳೆಯರ ತಂಡಗಳು ಭಾಗಿಯಾಗಿದ್ದವು.
ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ರಂಗಸ್ವಾಾಮಿ, ದೈಹಿಕ ಶಿಕ್ಷಣ ಜಿಲ್ಲಾಧ್ಯಕ್ಷರಾದ ಯಂಕಪ್ಪ ಪಿರಂಗಿ, ರಾಯಚೂರು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಪರಶುರಾಮ, ಯುವ ಸಬಲೀಕರಣ ಮತ್ತು ಕ್ರೀೆಡಾ ಇಲಾಖೆಯ ಸೂಪರಿಡೆಂಟ್ ಸಂತೋಷ್, ಚಂದ್ರಶೇಖರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ ಇದ್ದರು.
ಖೋಖೋ ಕ್ರೀಡೆಯಲ್ಲಿ 28 ತಂಡಗಳು ಭಾಗಿ ರಾಯಚೂರು ಉತ್ಸವ – 2026ರ ಅಂಗವಾಗಿ ಖೋಖೋ ಸ್ಪರ್ಧೆಗೆ ಚಾಲನೆ

