ಸುದ್ದಿಮೂಲ ವಾರ್ತೆ
ಜಮ್ಮು ಮತ್ತು ಕಾಶ್ಮೀರ, ಏ.9: ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರ ಕಾರು ಅಪಘಾತಕ್ಕೆ ಈಡಾಗಿದ್ದು, ಸಚಿವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜಮ್ಮು-ಶ್ರೀನಗರ ಹೆದ್ದಾರಿಯ ರಾಂಬನ್ ಬಳಿ ಸಂಪೂರ್ಣ ಲೋಡ್ ಆಗಿದ್ದ ಟ್ರಕ್ ಅವರ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಕಿರಣ್ ರಿಜಿಜು ಕಾರಿಗೆ ಹಾಗಿಯಾನಿಗೆ ಎನ್ನಲಾಗಿದೆ.
ಕಾನೂನು ಸೇವೆಗಳ ಶಿಬಿರದಲ್ಲಿ ಪಾಲ್ಗೊಳ್ಳಲು ಜಮ್ಮುವಿನಿಂದ ಉಧಮ್ಪುರಕ್ಕೆ ಕೇಂದ್ರ ಸಚಿವ ಕಿರಣ್ ರಿಜಿಜು ಪ್ರಯಾಣಿಸುತ್ತಿದ್ದರು. ಆಗ ಅಪಘಾತ ನಡೆದಿದೆ.
ಅಪಘಾತಕ್ಕೂ ಮುನ್ನ ಉಧಂಪುರದಿಂದ ಶ್ರೀನಗರಕ್ಕೆ ಹೋಗುವ ದಾರಿಯಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಸುರಂಗದ ಮೂಲಕ ತಮ್ಮ ಬೆಂಗಾವಲು ಪಡೆ ಸಾಗುತ್ತಿರುವ ವಿಡಿಯೋವನ್ನು ಕಿರಣ್ ರಿಜಿಜು ಅವರು ಟ್ವೀಟ್ ಮಾಡಿದ್ದರು.