ಸುದ್ದಿಮೂಲ ವಾರ್ತೆ ಕವಿತಾಳ, ಡಿ.21:
ಐದು ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ಕಡ್ಡಾಾಯವಾಗಿ ಎರಡು ಹನಿ ಪಲ್ಸ್ ಪೋಲಿಯೋ ಹಾಕಿಸಿ ಮಗುವನ್ನು ರಕ್ಷಿಸಿ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕಿರಿಲಿಂಗಪ್ಪ ಹೇಳಿದರು.
ಪಟ್ಟಣದ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆೆ ಚಾಲನೆ ನೀಡಿ ಮಗುವಿಗೆ ಲಸಿಕೆ ಹಾಕಿ ಮಾತನಾಡಿದರು.
ಭಾರತದಲ್ಲಿ ಪೋಲಿಯೋ ಮುಕ್ತವಾಗಿದ್ದು ಮತ್ತೊೊಮ್ಮೆೆ ಮುಂಜಾಗ್ರತೆಗಾಗಿ ಸರಕಾರ ಕೈಗೊಂಡಿದೆ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಪೋಲಿಯೋ ಎರಡು ಹನಿ ಲಸಿಕೆ ಹಾಕಿಸಿ ಪೋಲಿಯೋ ಮುಕ್ತ ಭಾರತ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಮಲ್ಲಿಕಾರ್ಜುನ ಗೌಡ, ಲಿಂಗರಾಜ ಕಂದಗಲ್, ಜಿಲ್ಲಾ ಲಸಿಕೆ ಮೇಲ್ವಿಿಚಾರಕ ರಾಘವೇಂದ್ರ, ವೈದ್ಯಾಾಧಿಕಾರಿ ಡಾ.ಪ್ರವೀಣಕುಮಾರ, ಡಾ. ತಬ್ ಸುಮ್ ನಾರಾ, ನರ್ಸಿಂಗ್ ಆಫೀಸ್ ರ ನೀತಾ, ಸೌಭಾಗ್ಯ, ಅರೋಗ್ಯ ನಿರೀಷಹಾಧಿಕಾರಿ ಪ್ರದೀಪಕುಮಾರ, ಪ್ರಾಾಥಮಿಕ ಅರೋಗ್ಯ ಸುರಕ್ಷಾಧಿಕಾರಿಗಳಾದ ಅಂಜನಮ್ಮ, ಸುಮಿತ್ರಾಾ, ಮತ್ತು ಸಿಬ್ಬಂದಿ ವರ್ಗದವರು ಇದ್ದರು.
ಪೋಲಿಯೊ ಲಸಿಕೆ ತಪ್ಪದೇ ಹಾಕಿಸಿ – ಕಿರಿಲಿಂಗಪ್ಪ

