ಸುದ್ದಿಮೂಲ ವಾರ್ತೆ
ದೇವನಹಳ್ಳಿ,ಜು.27 : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ತಾಲೂಕು ಸೊಸೈಟಿ ಆವರಣದಲ್ಲಿ ನೂತನ ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರದ ಉದ್ಘಾಟನೆ ಬೆಂಗಳೂರು ಜಂಟಿ ಕೃಷಿ ನಿರ್ದೇಶಕಿ ಡಾ.ಲಲಿತಾ ರೆಡ್ಡಿ ಮತ್ತು ಬೆಂಗಳೂರು ಎಂಸಿಎಫ್ಎಲ್ ಸಿಇಒ ನಿತಿನ್.ಎಂ.ಕಂಟಕ್ ಉದ್ಘಾಟಿಸಿದರು.
ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಲಿಮಿಟೆಡ್, ದೇವನಹಳ್ಳಿ ಟಿಎಪಿಸಿಎಂಎಸ್ ಮತ್ತು ಕೃಷಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರ ಸಮರ್ಪಣಾ ಸಮಾರಂಭ ಕಾರ್ಯಕ್ರಮ ನಡೆಯಿತು.
ಟಿಎಪಿಸಿಎಂಎಸ್ ಅಧ್ಯಕ್ಷ ದೇವರಾಜ್ ಮಾತನಾಡಿ, ಕಿಸಾನ್ ಸಮೃದ್ಧಿ ಕೇಂದ್ರವು ದೇಶದಾದ್ಯಂತ ಏಕ ಕಾಲದಲ್ಲಿ ಪ್ರಾರಂಭಿಸಲಾಗುತ್ತಿದೆ. ಈ ಕೇಂದ್ರದಲ್ಲಿ ಒಂದೇ ಸೂರಿನಡಿಯಲ್ಲಿ ರೈತರಿಗೆ ಎಲ್ಲಾ ಕೃಷಿ ಪರಿಕರಗಳು, ರಸಗೊಬ್ಬರ, ಯೂರಿಯಾ, ಎಲ್ಲವೂ ಒಂದೇ ಸ್ಥಳದಲ್ಲಿ ದೊರೆಯುತ್ತಿದ್ದು, ಇದರ ಸದುಪಯೋಗವನ್ನು ಪ್ರತಿ ರೈತರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಲಿಮಿಟೆಡ್ ಉಪ ವ್ಯವಸ್ಥಾಪಕ ಉಮೇಶ್, ದೇವನಹಳ್ಳಿ ಕೃಷಿ ಇಲಾಖೆ ನಿರ್ದೇಶಕಿ ಸುಶೀಲಮ್ಮ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಈರಪ್ಪ, ನಿರ್ದೇಶಕರಾದ ರಾಮಮೂರ್ತಿ, ಕಾಮೇನಹಳ್ಳಿ ರಮೇಶ್, ಮಂಜುನಾಥ್, ಗಂಗಾಧರ್, ಶಿವಣ್ಣ, ಭಾಗ್ಯಮ್ಮ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎಚ್.ಎಂ.ರವಿಕುಮಾರ್, ಅಸಂಘಟಿತ ಕಾರ್ಮಿಕ ಪ್ರಕೋಷ್ಠದ ಜಿಲ್ಲಾಧ್ಯಕ್ಷ ನಿಲೇರಿ ಅಂಬರೀಶ್, ದೇ.ಸು.ನಾಗರಾಜ್, ಎಂಸಿಎಫ್ಎಲ್ ಹಿರಿಯ ವ್ಯವಸ್ಥಾಪಕ ನಾಗರಾಜ ಉತ್ತಂಗಿ, ರಿಜನಲ್ ಹೆಡ್ ಶ್ರೀಕಾಂತ ಅಟ್ಟಿನೂರ್, ಉಪವ್ಯವಸ್ಥಾಪಕ ಉಮೇಶ್, ಸಿಬ್ಬಂದಿ ಮತ್ತು ರೈತರು ಇದ್ದರು.