ಸುದ್ದಿಮೂಲವಾರ್ತೆ
ಕೊಪ್ಪಳ.ಅ,27: ಅ.23 ರಂದು ನಡೆಯಬೇಕಾಗಿದ್ದ ವೀರರಾಣಿ ಕಿತ್ತೂರು ಚನ್ನಮ್ಮ ಜಯಂತಿಯನ್ನು ಆಚರಿಸಬೇಕಿತ್ತು. ವಿಜಯ ದಶಮಿಯ ಹಿನ್ನೆಲೆಯಲ್ಲಿ ನ 2 ರಂದು ಸಾಹಿತ್ಯ ಭವನದಲ್ಲಿ ನಡೆಯಲಿದೆ ಎಂದು ಪಂಚಮಸಾಲಿ ಸಮಾಜದ ತಾಲೂಕಾ ಅಧ್ಯಕ್ಷ ಕರಿಯಪ್ಪ ಮೇಟಿ ಹೇಳಿದರು.
ಅವರು ಇಂದು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿ ಕಿತ್ತೂರು ಚನ್ನಮ್ಮ ವೃತ್ತದಿಂದ ಗಡಿಯಾರ ಕಂಬದ ಮೂಲಕ ಸಾಹಿತ್ಯ ಭವನದವರೆಗೂ ಮೆರವಣಿಗೆ ನಡೆಯಲಿದೆ. ಈ ಕಾರ್ಯಕ್ರಮ ದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಗವಿಸಿದ್ದೇಶ್ವರ ಮಹಾವಿದ್ಯಾಲಯದ ಶರಣಪ್ಪ ಬಿಳಿಯೆಲೆ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಕೊಪ್ಪಳ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮಾಡಲಾಗುವುದು ಎಂದು ಅವರು ತಿಳಿಸಿದರು.
ಪಂಚಮಸಾಲಿ ಸಮಾಜದ ಕಲ್ಯಾಣ ಮಂಟಪವನ್ನು ಒಂದೆರೆಡು ವರ್ಷದಲ್ಲಿ ಮುಗಿಸಲಿದ್ದೇವೆ ಎಂದು ತಿಳಿಸಿದರು.
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಯನ್ನು 30 ರವರೆಗೂ ಕೊಪ್ಪಳದ ವೀರರಾಣಿ ಕಿತ್ತೂರು ಚನ್ನಮ್ಮ ಬ್ಯಾಂಕಿನಲ್ಲಿ ಸಲ್ಲಿಸಬಹುದಾಗಿದೆ. ಎಸ್ಎಸ್ ಎಲ್ ಸಿಯಲ್ಲಿ 90 ಹಾಗು ಪಿಯೂಸಿಯಲ್ಲಿ 80 ಅಂಕ ಪಡೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದೆಂದು ಮನವಿ ಮಾಡಿಕೊಂಡರು
ಈ ಸಂದರ್ಭದಲ್ಲಿ ಗವಿಸಿದ್ದಪ್ಪ ಚಿನ್ನೂರು, ಶರಣಪ್ಪ ಕೋಣಿ, ದೇವರಾಜ ಹಾಲಸಮುದ್ರ, ವೀರೇಶ ಬಳಗಾರ ಇದ್ದರು.