ಸುದ್ದಿಮೂಲವಾರ್ತೆ
ಕೊಪ್ಪಳ ಜು 12: ಇಂದು ಸೋಷಿಯಲ್ ಮೀಡಿಯಾ ವೇಗವಾಗಿ ಬೆಳೆಯುತ್ತಿದೆ. ಸೋಷಿಯಲ್ ಮೀಡಿಯಾದ ಸುದ್ದಿಗಳ ಸತ್ಯಾಸತ್ಯತೆ ಅರಿಯುವುದು ಈಗ ಸವಾಲಿನ ಕೆಲಸವಾಗಿದೆ ಎಂದು ಹಿರಿಯ ಪತ್ರಕರ್ತ ಸೋಮರಡ್ಡಿ ಅಳವಂಡಿ ಹೇಳಿದರು.
ಅವರು ಅಳವಂಡಿಯಲ್ಲಿ ಹೊಬಳಿ ಪತ್ರಕರ್ತರು, ಶ್ರೀಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನಿಂದ ಆಯೋಜಿಸಿರು ಪತ್ರಿಕಾ ದಿನಾಚರಣೆ. ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ ಮನುಷ್ಯನ ನಡುವೆ ಸಂವಹನಕ್ಕೆ ಪತ್ರಿಕೆಗಳು ಸಹಕಾರವಾಗಿವೆ. ಇಂದಿನ ದಿನದಲ್ಲಿ ಮೊಬೈಲ್ ನಲ್ಲಿ ಸುದ್ದಿಗಳನ್ನು ಕಳುಹಿಸುವವರು ಸಹ ಪತ್ರಕರ್ತ ಇಂದು ಮಾಧ್ಯಮವು ಜಗತ್ತಿನಲ್ಲಿ ಬೆಳಕಿನ್ನು ಹರಡಬೇಕು. ಸೋಷಿಯಲ್ ಮೀಡಿಯಾ ದುರ್ಬಳಿಕೆಯ ಮೇಲೆ ಕಟ್ಟುನಿಟ್ಟಿನ ಹಿಡಿತವಾಗಬೇಕು ಎಂದರು.
ಕಾರ್ಯಕ್ರಮದ ಸ್ವಾಗತವನ್ನು ನಬಿಸಾಬ ಇನಾಮದಾರ ಮಾಡಿದರು. ಬಿ ಎನ್ ಹೊರಪೇಟೆಯವರು
ಪ್ರಸ್ತಾವಿಕವಾಗಿ ಮಾತನಾಡಿದರು. ಸಾನಿದ್ಯವನ್ನು ವಹಿಸಿ ಮಾತನಾಡಿದ ಅಳವಂಡಿಯ ಶ್ರೀಮರುಳಾರಾಧ್ಯ ಸ್ವಾಮಿಗಳು ಜಗತ್ತಿನಲ್ಲಿ ಸಮಾಜದಲ್ಲಿ ಪ್ರಗತಿಯಲ್ಲಿ ಮಹತ್ತರ ಪಾತ್ರವಾಗಿದೆ. ಸತ್ಯಾಂಶಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ವೇದಿಕೆಯಲ್ಲಿ ಭುಜರಂಗಸ್ವಾಮಿ ಇನಾದಾರ, ಡಾ ಎಂ ಆರ್ ಕುಲಕರ್ಣಿ, ಬೀರಪ್ಪ ಅಂಡಗಿ, ರವೀಂದ್ರ ವಿ ಕೆ, ಪ್ರಮೋದ ಜಿ ಕೆ. ಜೀವನಸಾಬ ಬಿನ್ನಾಳ, ಜಿ ಎಸ್ ಗೋನಾಳ, ಸೋಮರಡ್ಡಿ ಅಳವಂಡಿ, ಗವಿಸಿದ್ದಯ್ಯ ಹಳ್ಳಿಕೇರಿಮಠ, ಷಣ್ಮುಖಯ್ಯ ತೋಟದ, ಹನುಮಂತಪ್ಪ ಅಂಡಗಿ, ಗವಿಸಿದ್ದಪ್ಪ ಶೆಟ್ಟರ,ವಿಜಯ ಠಿಕಾಣಿ, ಹನುಮಂತಪ್ಪ, ಇದ್ದರು.