ಸುದ್ದಿಮೂಲವಾರ್ತೆ
ಕೊಪ್ಪಳ,ಜೂ.15: ರೈತರ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷವನ್ನು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಸಿಎಂ ಇತ್ತೀಚಿಗೆ ಕೃಷಿ ಕಾಯ್ದೆ ಹಿಂಪಡೆಯಬೇಕು ಎಂಬುವುದು ಪರಿಶೀಲನೆ ಮಾಡಲಾಗುತ್ತಿದೆ ಎಂದಿದ್ದಾರೆ. ಇದೇ ಅನುಮಾನ ಹುಟ್ಟಿಸುತ್ತಿದೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಯಲ್ಲಿ ಘೋಷಿಸಿದಂತೆ ಕಾಯ್ದೆಗಳನ್ನು ಹಿಂಪಡೆಯಬೇಕು. ಕೇಂದ್ರ ಸರಕಾರ ಈ ಕಾಯ್ದೆಗಳನ್ನು ಹಿಂಪಡೆದಿದೆ. ಆದರೆ ರಾಜ್ಯದ ಸಿಎಂ ಸಿದ್ದರಾಮಯ್ಯ ಜಾಣತನ ಪ್ರದರ್ಶನ ಮಾಡದೆ ನೇರವಾಗಿ ಕಾಯ್ದೆ ಹಿಂಪಡೆಯಬೇಕೆಂದು ಹೇಳಿದರು.
ಕೃಷಿ ಭೂಮಿಯನ್ನು ವ್ಯಾಪಾರಕ್ಕೆ ಬಳಸಬಾರದು. ಹಿಂದೆ ಅಧಿಕಾರಿಗಳು ಮಾಡಿರುವ ತಪ್ಪು ಮುಂದೆ ಮಾಡಬಾರದು ಎಂದರು.
ಎಪಿಎಂಸಿ ಕಾಯ್ದೆಯಿಂದ ಎಂಪಿಎಂಸಿಗಳಿಗೆ ಆದಾಯ ಕಡಿತವಾಗಿದೆ. ಕೃಷಿ ಮಾರುಕಟ್ಟೆಯನ್ನು ರೈತರೇ ನಿರ್ಧರಿಸಬೇಕು. ಆದರೆ ಮಲ್ಟಿ ನ್ಯಾಷನಲ್ ಕಂಪನಿಗಳಿಗೆ ಅನುಕೂಲವಾಗಲಿದೆ ಎಂದರು.
ಕೇಂದ್ರ ಸರಕಾರ ಹದಿನೈದು ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿದೆ. ಆದರೆ ಅದು ಅವೈಜ್ಞಾನಿಕವಾಗಿದೆ. ರೈತರ ಆದಾಯ ದ್ವಿಗುಣವಾಗುತ್ತದೆ ಎಂದಿದ್ದರು. ಆದರೆ ಇಲ್ಲಿ ರೈತರಿಗೆ ಆಗಿಲ್ಲ. ಬೆಂಬಲ ಬೆಲೆಯನ್ನು ಶಾಸನಬದ್ದ ಜಾರಿಗೊಳಿಸಬೇಕು. ಸ್ವಾಮಿನಾಥನ್ ವರದಿ ಮಾನದಂಡವಾಗಬೇಕೆಂದರು.
ಗೋ ಹತ್ಯೆ ನಿಷೇಧ ಕಾಯ್ದೆಯಲ್ಲಿ ಹಸು ಹಾಲು ಕೊಡುವದನ್ನು ನಿಮಗೆ ಕೊಡುತ್ತೇವೆ. ನೀವೇ ಸಾಕಿ. ರೈತರ ಆದಾಯಕ್ಕೆ ಹಿಂಪಡೆಯಬೇಕು. ಬೇಷರತ್ತಾಗಿ ಹಿಂಪಡೆಯಬೇಕು. ಪರಿಶೀಲನೆ ಶಬ್ದ ಸರಿ ಅಲ್ಲ. ಪರಿಗಣಿಸುತ್ತೇವೆ ಎನ್ನಬೇಕು ಎಂದರು.
ಕಾಯ್ದೆಗಳನ್ನು ಬಿಜೆಪಿ ಹಾಗು ಆರ್ ಎಸ್ಎಸ್ ಹಿಡನ್ ಅಜೆಂಡಾದ ಹಿನ್ನಲೆಯಲ್ಲಿ ಈ ಕಾಯ್ದೆಯನ್ನು 2024 ರ ಚುನಾವಣೆಯವರೆಗೂ ತೆಗೆದುಕೊಂಡು ಹೋಗುತ್ತಾರೆ.
ಬಜೆಟ್ ನಿಧಿಯಲ್ಲಿ ರೈತರಿಗಾಗಿ ಆವರ್ತನ ನಿಧಿ ಪ್ರತ್ಯೇಕವಾಗಿಡಬೇಕೆಂದು ಒತ್ತಾಯಿಸಿದ್ದಾರೆ. ಅವಶ್ಯವಿದ್ದಾಗ ರೈತರಿಗೆ ಅನುಕೂಲವಾಗುವಂತೆ ಈ ನಿಧಿ ಬಳಕೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಹನುಮಂತಪ್ಪ ಹೊಳೆಯಾಚೆ, ಭಕ್ತರಳ್ಳಿ, ರಮೇಶ, ಭೈರೇಗೌಡ ಸಂಗನಗೌಡ ಪಾಟೀಲ. ಶ್ರೀನಿವಾಸ ಬೋವಿ