ಸುದ್ದಿಮೂಲವಾರ್ತೆ
ಕೊಪ್ಪಳ,ಸೆ.2:ಇತ್ತೀಚಿಗೆ ಕೊಪ್ಪಳ ನಗರಕ್ಕೆ ಶಾಲಾ ಮಕ್ಕಳನ್ನು ಕುರಿಗಳಂತೆ ವಾಹನಗಳಲ್ಲಿ ತುಂಬಿಕೊಂಡು ಬರುತ್ತಿದ್ದರು.ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ನಂತರ ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ರತ್ನಂ ಪಾಂಡೆಯಾ ಈ ರೀತಿಯಾಗಿ ಮಕ್ಕಳನ್ನು ಕರೆದುಕೊಂಡು ಬಾರದಂತೆ ಸೂಚನೆ ನೀಡುವುದಾಗಿ ಹೇಳಿಕೆ ನೀಡಿದ್ದರು. ಇದು ಕೇವಲ ಮಾಧ್ಯಮಗಳಿಗೆ ಹೇಳಿಕೆಗೆ ಸೀಮಿತವಾದಂತೆ ಇದೆ.
ಸಿಇಒ ಸೂಚನೆಗೂ ಕ್ಯಾರೆ ಎನ್ನದೆ ಶಿಕ್ಷಕರು.ಮತ್ತೆ ವಿದ್ಯಾರ್ಥಿಗಳನ್ನು ಕುರಿಗಳಂತೆ ತುಂಬಿಕೊಂಡು ಹೋಗುತ್ತಿದ್ದಾರೆ.
ಕೊಪ್ಪಳ ನಗರಕ್ಕೆ ಗ್ರಾಮೀಣ ಭಾಗದಿಂದ ಚಿಕ್ಕ ವಾಹನದಲ್ಲಿ ಮಕ್ಕಳನ್ನು ಕರೆದುಕೊಂಡು ಬರುತ್ತಿರುವ ದೃಶ್ಯ ಕಂಡು ಬಂತು.
ವಲಯ ಮಟ್ಟದ ಕ್ರೀಡಾಕೂಟಕ್ಕಾಗಿ ಗ್ರಾಮೀಣ ಭಾಗದಿಂದ ವಾಹನಗಳಲ್ಲಿ ಮಕ್ಕಳನ್ನು ಕರೆದುಕೊಂಡು ಬಂದು ಸಂಜೆ ವಾಪಸ್ಸಾಗುತ್ತಾರೆ. ಈ ಸಂದರ್ಭದಲ್ಲಿ ಏನಾದರೂ ಹೆಚ್ವು ಕಡಿಮೆಯಾದರೆ ಯಾರೂ ಹೊಣೆ ಎಂಬುವುದು ಜನರ ಅಭಿಪ್ರಾಯವಾಗಿದೆ.
ಈ ಕುರಿತು ಅಂದು ಮಾಧ್ಯಮಗಳಿಗೆ ಹೇಳಿಕೆ ನೀಡುವಾಗಈ ರೀತಿ ಮಕ್ಕಳನ್ನು ಕರೆದುಕೊಂಡು ಬರಬಾರದು.ಸ್ಥಳೀಯ ಮಟ್ಟದಲ್ಲಿಯೇ ಕ್ರೀಡೆಗಳನ್ನು ನಡೆಸಲು ಸೂಚಿಸುವುದಾಗಿ ಹೇಳಿದ್ದ ಕೊಪ್ಪಳ ಜಿಪಂ ಸಿಇಒ ಕೇವಲ ಹೇಳಿಕೆಗೆ ಸೀಮಿತವಾದ ಸೂಚನೆ ನೀಡುವುದಾಗಿ. ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದರು.
ಆದರೆ ಈಗಲೂ ನಿತ್ಯ ಅಪಾಯಕಾರಿ ರೀತಿ ವಾಹನದಲ್ಲಿ ಮಕ್ಕಳನ್ನು ಬರುತ್ತಿರುವ ನಿಂತಿಲ್ಲ.