ಸುದ್ದಿಮೂಲವಾರ್ತೆ
ಕೊಪ್ಪಳ, ಆ.11: ಕಳೆದ ತಿಂಗಳು ಕಲುಷಿತು ನೀರು ಕುಡಿದು ನಾಲ್ಕು ಜನರು ಸಾವನ್ನಪ್ಪಿದ್ದರೂ ಕೊಪ್ಪಳ ಜಿಲ್ಲಾಡಳಿತ ಎಚ್ವೆತ್ತುಕೊಂಡಿಲ್ಲ. ಇದಕ್ಕೆ ಇಂದು ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮಕ್ಕೆ ಇಂದು ಸರಬರಾಜು ಮಾಡಿದ ನೀರು ಕಲುಷಿತವಾಗಿವೆ.
ಕೊಪ್ಪಳ ಜಿಲ್ಲೆಯಲ್ಲಿ ಜೂನ ತಿಂಗಳಲ್ಲಿ ವಾಂತಿ ಭೇದಿಯಿಂದ ನಾಲ್ಕು ಜನರ ಸತ್ತಿದ್ದಾರೆ. ಆದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ. ಜಿಲ್ಲೆಯಲ್ಲಿ ಕುಡಿವ ನೀರು ಕಲುಷಿತವಾಗಿವೆ. ಶುದ್ದ ನೀರು ನೀಡಲು ಜಿಲ್ಲಾಡಳಿತ ವಿಫಲವಾಗಿದೆ.
ಇಂದು ಬೆಟಗೇರಿ ಗ್ರಾಮಕ್ಕೆ ಬಿಟ್ಟ ನೀರು ಕಲುಷಿತವಾಗಿರುವುದು ಕಂಡು ಬಂದಿದೆ.
ಇಂದು ಮುಂಜಾನೆ ಮನೆಮನೆಗೆ ನಲ್ಲಿಯ ಮೂಲಕ ಬಂದ ನೀರು ನೋಡಿದ ಜನ ಈ ನೀರನ್ನು ತುಂಬಿಕೊಳ್ಳದೆ ಚೆಲ್ಲಿದ್ದೆ ಹೆಚ್ಚು. ಬೆಟಗೇರಿ ಗ್ರಾಮಕ್ಕೆ ತುಂಗಭದ್ರಾ ನೀರು ಹನಕುಂಟಿ ಮೂಲಕ ಸರಬರಾಜಾಗುತ್ತಿದೆ. ಸರಬರಾಜು ಮಾಡುವ ಟ್ಯಾಂಕ ಸ್ವಚ್ಛತೆ ನೀರು ಸರಬರಾಜು ಮಾಡುವ ಪೈಪಲೈನ್ ಒಡೆದಿರುವ ಕಾರಣಕ್ಕೆ
ನದಿ ಮೂಲಕ ಬಿಟ್ಟಿರುವ ನೀರು
ಕಲುಷಿತವಾಗಿ, ಇದೇ ನೀರು ಸರಬರಾಜು ಆಗುತ್ತಿದೆ. ಗ್ರಾಮದಲ್ಲಿ ವಾಂತಿ ಭೇದಿಯಾಗುವ ಮುನ್ನ ಗ್ರಾಮ ಪಂಚಾಯತಿ ಎಚ್ಚೆತ್ತುಕೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.