ಸುದ್ದಿಮೂಲವಾರ್ತೆ
ಕೊಪ್ಪಳ,ಜೂ.21:ವಿಶ್ವಕ್ಕೆ ಭಾರತ ನೀಡಿರುವ ಯೋಗ. ಯೋಗವನ್ನು ವಿಶ್ವಸಂಸ್ಥೆ ಒಪ್ಪಿಕೊಂಡು ವಿಶ್ವ ಯೋಗ ದಿನಾಚರಣೆಯನ್ನಾಗಿ ಘೋಷಣೆ ಮಾಡಿದೆ. ಇಂದು 9 ನೆಯ ಅಂತರಾಷ್ಟ್ರೀಯ ಯೋಗ ದಿನಾಚರಣೆ, ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಾದ್ಯಂತ ಯೋಗ ಮಾಡುವ ಮೂಲಕ ಆಚರಿಸಿದರು.
ಕೊಪ್ಪಳ ಜಿಲ್ಲಾಡಳಿತ. ಆಯುಷ ಇಲಾಖೆಯು ಕೊಪ್ಪಳದ ತಾಲೂಕಾ ಕ್ರೀಡಾಂಗಣದಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದರು. ಬೆಳಗ್ಗೆ ಸಂಸದ ಸಂಗಣ್ಣ ಕರಡಿ, ಜಿಲ್ಲಾಧಿಕಾರಿ ಸುಂದರೇಶಬಾಬು. ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಯಶೋಧಾ ವಂಟಿಗೋಡ ಸೇರಿ ಹಲವಾರು ಹಿರಿಯ ಅಧಿಕಾರಿಗಳು. ಜನಪ್ರತಿನಿಧಿಗಳು ಭಾಗಿದ್ದಾರೆ. ವಿವಿಧ ಶಾಲಾ ಮಕ್ಕಳು ಸಹ ಯೋಗಾಭ್ಯಾಸದಲ್ಲಿ ತೊಡಗಿದ್ದರು.
ಇನ್ನೊಂದು ಕಡೆ ಕೊಪ್ಪಳದ ಗವಿಮಠದ ಆವರಣದಲ್ಲಿ ಪತಾಂಜಲಿ ಯೋಗ ತಂಡ, ಶ್ರೀಗವಿಶಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದ ಸಹಯೋಗದಲ್ಲಿಯೂ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇಲ್ಲಿಯೂ ಸಾವಿರಾರು ಜನರು ಭಾಗಿಯಾಗಿದ್ದರು.
ನಿತ್ಯ ಜೀವನಕ್ಕಾಗಿ ಯೋಗ ಅವಶ್ಯವಾಗಿದ್ದು. ಈ ಹಿನ್ನೆಲೆ ದೈಹಿಕ, ಮಾನಸಿಕ ನೆಮ್ಮದಿ, ಶಾಂತತೆಗಾಗಿ ಯೋಗ ಅವಶ್ಯವಾಗಿದೆ. ಸಾವಿರಾರು ಜನರು ಯೋಗದ ವಿವಿಧ ಭಂಗಿಗಳನ್ನು ಹಾಕಿ ಯೋಗ ಪ್ರದರ್ಶನ ಮಾಡಿದರು. ಇದು ಕೇವಲ ಒಂದು ದಿನವಾಗಿರದೆ ಪ್ರತಿನಿತ್ಯಯೂ ಯೋಗಾಭ್ಯಾಸ ಅವಶ್ಯ ಎಂಬ ಸಂದೇಶ ಸಾರಲಾಯಿತು.