ಸುದ್ದಿಮೂಲವಾರ್ತೆ,
ಕೊಪ್ಪಳ ಏ ೦೫: ಮೇ ೧೦ ರಂದು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತದೆ. ಸುವ್ಯವಸ್ಥಿತ, ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗವು ಬಿಗಿ ಭದ್ರತೆಗಾಗಿ ಪ್ಯಾರಾ ಮಿಲಿಟರಿ ತುಕಡಿಗಳು. ಜಿಲ್ಲೆಯ ವಿವಿಧ ಪೊಲೀಸ್, ಹೋಂ ಗಾರ್ಡ್ ಗಳನ್ನು ಬಳಸಿಕೊಳ್ಳಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಚುನಾವಣೆಯ ಭದ್ರತೆ ಗೆ ಆಗಮಿಸಿದ ಸಿಬ್ಬಂದಿಯನ್ನು ಕೊಪ್ಪಳ ನಗರದ ಜನತೆ ಅದ್ದೂರಿಯಾಗಿ ಸ್ವಾಗತಿಸಿದರು. ಹೂ ಮಳೆಗೆರೆದು. ಭದ್ರತೆಯ ಸಿಬ್ಬಂದಿಗೆ ಗೌರವ ಪೂರ್ವಕವಾಗಿ ಕೈ ಮುಗಿದು ಸ್ವಾಗತಿಸಿದರು. ಇನ್ನೂ ೩೫ ದಿನದಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತದೆ. ಚುನಾವಣೆಗೆ ರಾಜಕೀಯ ಪಕ್ಷಗಳು ಒಂದು ರೀತಿಯಲ್ಲಿ ಸಿದ್ದತೆ ಮಾಡಿಕೊಂಡಿವೆ. ಇನ್ನೂ ಸುಗಮ, ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗವು ಸಹ ಸಿದ್ದತೆ ಮಾಡಿಕೊಂಡಿದೆ. ಚುನಾವಣೆಯಲ್ಲಿ ಭದ್ರತೆ ಗಾಗಿ ಪ್ಯಾರಾ ಮಿಲಿಟರಿ ತುಕಡಿಗಳು ಸಹ ಆಗಮಿಸಿವೆ.
ತಲಾ ೯೦ ಜನರನ್ನು ಹೊಂದಿರುವ ೩ ಪ್ಯಾರಾ ಮಿಲಿಟರಿ ಪಡೆಗಳು ಈಗಾಗಲೇ ಕೊಪ್ಪಳಕ್ಕೆ ಆಗಮಿಸಿವೆ. ಇದೇ ತಂಡದೊAದಿಗೆ ಕೆಎಸ್ ಆರ್ಪಿ, ಡಿಆರ್, ಸಿವಿಲ್ ಪೊಲೀಸರು ಸೇರಿ ಇಂದು ಕೊಪ್ಪಳದಲ್ಲಿ ಪಥ ಸಂಚಲನ ಮಾಡಿದರು.ಸುಮಾರು ನೂರಾರು ಭದ್ರತಾ ಸಿಬ್ಬಂದಿ ಇಂದು ತಮ್ಮ ಸಶಸ್ತ್ರಗಳೊಂದಿಗೆ ಪ್ರಮುಖ ಬೀದಿಯಲ್ಲಿ ಸಂಚರಿಸಿದರು. ಕೊಪ್ಪಳದ ಬಸ್ ನಿಲ್ದಾಣದ ಮುಂದಿನಿಂದ ಆರಂಭವಾದ ಪಥ ಸಂಚಲನವು ಆರಂಭವಾಗಿ ಅಶೋಕಾ ವೃತ್ತ, ಗಡಿಯಾರ ಕಂಬ, ಜವಾಹಾರ ರಸ್ತೆ, ಸಾಲರಜಂಗ್ ರಸ್ತೆ ಮೂಲಕ ಈಶ್ವರ ಪಾರ್ಕವರೆಗೂ ಪಥ ಸಂಚಲನ ನಡೆಯಿತು.
ನಗರದ ಪ್ರಮುಖ ಬೀದಿಯಲ್ಲಿ ಪಥ ಸಂಚಲನ ಹೊರಟಾಗ ಹರ್ಷ ಕಟ್ಟಿಮನಿ ಎಂಬ ಬಾಲಕ ಭದ್ರತಾ ಸಿಬ್ಬಂದಿಗೆ ಕೈಕುಲುಕಿ ಸ್ವಾಗತಿಸಿದರು. ಜವಾಹಾರ ರಸ್ತೆಯಲ್ಲಿ ಹಲವರು ಹೂವುವನ್ನು ರಸ್ತೆಯುದ್ದಕ್ಕೂ ಹಾಗು ಸಿಬ್ಬಂದಿಗಳ ಮೇಲೆ ಎಸೆದು ಸ್ವಾಗತಿಸಿದರು. ಕೆಲವರು ಅವರಿಗೆ ಗೌರವ ಪೂರ್ವಕವಾಗಿ ಕೈ ಮುಗಿದು ಸ್ವಾಗತಿಸಿದ್ದು ಒಂದು ಕಡೆಯಾದರೆ ಕೆಲವರು ಹೂವು ಮಾಲೆ ಮಿಲಿಟರಿಯನ್ನು ಸ್ವಾಗತಿಸಿದರು.
ಪಥ ಸಂಚಲನದಲ್ಲಿ ಜಿಲ್ಲಾಧಿಕಾರಿ ಸುಂದರೇಶ ಬಾಬು, ಜಿಲ್ಲಾ ಪಂಚಾಯತ್ ಸಿಇಒ ರಾಹುಲ ರತ್ನಂ ಪಾಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಿಗೋಡಿ ಭಾಗವಹಿಸಿದ್ದರು. ಚುನಾವಣೆಯಲ್ಲಿ ಅಕ್ರಮ ತಡೆಯಲು. ಕಾನೂನು ಉಲ್ಲಂಘನೆ ಮಾಡುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಜನರು ನಿರ್ಭೀತಿಯಿಂದ ಮತದಾನ ಮಾಡಿ ಎಂಬ ಸಂದೇಶ ಸಾರಿದರು.