ಸುದ್ದಿಮೂಲ ವಾರ್ತೆ
ಕೊಪ್ಪಳ ಮೇ 22: ತೋಟಗಾರಿಕೆ ಇಲಾಖೆಯಿಂದ ಕೊಪ್ಪಳ ಮಾವು ಮೇಳ-2023 ನ್ನು ಮೇ 23ರಿಂದ ಮೇ 31ರವರೆಗೆ ನಗರದ ತೋಟಗಾರಿಕೆ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಉದ್ಘಾಟನಾ ಕಾರ್ಯಕ್ರಮವು ಮೇ 23ರ ಬೆಳಿಗ್ಗೆ10 ರಿಂದ 10.30ರವರೆಗೆ ನಡೆಯಲಿದೆ.
ಮಾವು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಕೊಪ್ಪಳ ಕೇಸರ್ ಮಾವು ಹಾಗೂ ದೇಶಿ ಮತ್ತು ವಿದೇಶಿ ಮಾವುತಳಿಗಳ ಪ್ರದರ್ಶನ ಇರಲಿದೆ. ನೈಸರ್ಗಿಕವಾಗಿ ಮತ್ತು ವೈಜ್ಞಾನಿಕವಾಗಿ ಮಾಗಿಸಿದ ಮಾವಿನ ಹಣ್ಣು, ವಿವಿಧ ಮಾವಿನ ತಳಿಗಳ ರುಚಿಯನ್ನು ಸವಿಯಿರಿ, ರೈತರಿಂದ ನೇರವಾಗಿ ಗ್ರಾಹಕರಿಗೆ, ರೈತರಿಂದ ಖರೀದಿಸಿ ರೈತರನ್ನು ಪ್ರೋತ್ಸಾಹಿಸಿ, ಎಂಬ ಉದ್ದೇಶಗಳೊಂದಿಗೆ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಯೋಜನೆ ಮಾಡಲಾಗಿದೆ.
ಮಾವು ಮೇಳದಲ್ಲಿ ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮದ ಲಾಭ ಪಡೆಯುವುದರ ಜೊತೆಗೆ ರೈತರಿಗೆ ಪ್ರೋತ್ಸಾಹಿಸುವಂತೆ ಕೊಪ್ಪಳ ತೋಟಗಾರಿಕೆ ಉಪ ನಿರ್ದೇಶಕರಾದ ಕೃಷ್ಣ ಸಿ ಉಕ್ಕುಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.