ಸುದ್ದಿಮೂಲವಾರ್ತೆ
ಕೊಪ್ಪಳ,ಆ.2: ಸ್ವತಂತ್ರ್ಯ ಭಾರತದ ಅಮೃತ ಮಹೋತ್ಸವದ ಹಿನ್ನೆಲೆ. ಈಗಿರುವ ರೈಲು ನಿಲ್ದಾಣಗಳ ಪುನರ್ ಅಭಿವೃದ್ದಿ ಯೋಜನೆ ಮಾಡಲು ಕೇಂದ್ರ ಸರಕಾರ ನಿರ್ಧರಿಸಿದ್ದು. ಈ ಯೋಜನೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಎರಡು ರೈಲು ನಿಲ್ದಾಣಗಳು ಆಯ್ಕೆಯಾಗಿವೆ.
ಕೇಂದ್ರ ಸರಕಾರವು ದೇಶದ ಐದನೂರು ರೈಲು ನಿಲ್ದಾಣಗಳ ಪುನರ್ ಅಭಿವೃದ್ದಿಗಾಗಿ ಒಟ್ಟು 20 ಸಾವಿರ ಕೋಟಿ ರೂಪಾಯಿಯನ್ನು ಮಿಸಲಿಟ್ಟಿದೆ. ಈ ಹಣದಲ್ಲಿ ಈಗಿರುವ ರೈಲು ನಿಲ್ದಾಣಗಳ ಅಭಿವೃದ್ದಿ ಪಡಿಸಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿಯ 40 ರೈಲು ನಿಲ್ದಾಣಗಳ ಅಭಿವೃದ್ದಿ ಪಡಿಸಲು ನಿರ್ಧರಿಸಲಾಗಿದೆ. ಅದರಲ್ಲಿ ದೊಡ್ಡಬಳ್ಳಾಪುರ, ಕೆ ಆರ್ ಪುರ. ಮಂಡ್ಯ, ಬಳ್ಳಾರಿ, ಗದಗ, ಬಾಗಲಕೋಟೆ, ಕೊಪ್ಪಳ, ಹೊಸಪೇಟೆ ಸೇರಿ 40 ರೈಲು ನಿಲ್ದಾಣಗಳಿವೆ.
ಈ ಯೋಜನೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಕೊಪ್ಪಳ ಹಾಗು ಮುನಿರಾಬಾದ್ ರೈಲು ನಿಲ್ದಾಣಗಳು ಸೇರಿವೆ. ಹಳೆಯದಾಗಿರುವ ಈ ಎರಡು ರೈಲು ನಿಲ್ದಾಣಗಳನ್ನು ಈಗಿನ ಕಟ್ಟಡದೊಂದಿಗೆ ಇನ್ನಷ್ಟು ಕಟ್ಟಡ, ಮೂಲಭೂತ ಸೌಲಭ್ಯ ಹೆಚ್ಚಳ. ಈಗಿರುವ ಕಟ್ಟಡ ಹಳೆಯ ಗೋಡೆಗಳನ್ನು ತೆಗೆದು ಹೊಸದಾಗಿ ನಿರ್ಮಿಸಲಾಗುವುದು ಅಲ್ಲದೆ ರೈಲು ನಿಲ್ದಾಣಗಳ ಮೇಲ್ತಂಸ್ತು ನಿರ್ಮಾಣ ಸೇರಿ ವಿವಿಧ ಯೋಜನೆಗಳು ಪಾರ್ಕಿಂಗ್ ಉತ್ತಮ ಪಡಿಸುವ ಯೋಜನೆ ಸೇರಿದೆ.
ಕೊಪ್ಪಳ ಹಾಗು ಮುನಿರಾಬಾದ್ ರೈಲು ನಿಲ್ದಾಣಕ್ಕೆ ತಲಾ 20 ಕೋಟಿ ರೂಪಾಯಿ ಮಂಜೂರಾಗಿದೆ. ಈ ಹಣದಲ್ಲಿ ರೈಲು ನಿಲ್ದಾಣಗಳನ್ನು ಅಮೂಲಾಗ್ರವಾಗಿ ಬದಲಾವಣೆ ಮಾಡುವ ಯೋಜನೆ ಜಾರಿಯಾಗಲಿದೆ.
ಆಗಷ್ಟ 6 ರಂದು ದೇಶದಾದ್ಯಂತ ಏಕಕಾಲಕ್ಕೆ ಅಭಿವೃದ್ದಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಅಂದು ದೆಹಲಿಯಿಂದ ನಡೆಯುವ ಕಾರ್ಯಕ್ರಮವು ಆಯಾಯ ಸ್ಟೇಷನ್ ನಲ್ಲಿ ಆನ್ ಲೈನ್ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಹಿನ್ನೆಲೆ ಈಗಾಗಲೇ ಸಿದ್ದತೆ ಭರದಿಂದ ನಡೆದಿದೆ.
ಕೊಪ್ಪಳ ಹಾಗು ಮುನಿರಾಬಾದ್ ರೈಲು ನಿಲ್ದಾಣಗಳು ನಿಜಾಂ ಸರಕಾರದಲ್ಲಿ ನಿರ್ಮಾಣವಾಗಿವೆ. 2011 ರಲ್ಲಿ ಆದರ್ಶ ರೈಲು ನಿಲ್ದಾಣ ಯೋಜನೆಯಲ್ಲಿ ಕೊಪ್ಪಳ ರೈಲು ನಿಲ್ದಾಣವನ್ನು ಅಭಿವೃದ್ದಿ ಪಡಿಸಲಾಗಿತ್ತು. ಈಗ ಕೊಪ್ಪಳ ರೈಲು ನಿಲ್ದಾಣ ಸುಂದರ ಹಾಗು ಅಧುನಿಕರಣಗೊಳ್ಳುತ್ತಿರುವುದು ಜನರಲ್ಲಿ ಆಶಾಭಾವನೆ ಮೂಡಿದೆ.
ಕೊಪ್ಪಳ ರೈಲು ನಿಲ್ದಾಣದ ಮೂಲಕ ಈಗ ಸುಮಾರು 40 ಪ್ಯಾಸೆಂಜರ್ ರೈಲುಗಳು ಹಾಗು ಹಾಗು ಸಾಕಷ್ಟು ಸರಕು ಸಾಗಾಣಿಕಾ ರೈಲುಗಳು ಓಡಾಡುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ರೈಲು ನಿಲ್ದಾಣದಲ್ಲಿ ಎಕ್ಸಲೇಟರ್, ಲಿಫ್ಟ್ ಸೌಲಭ್ಯ, ಪ್ರಯಾಣಿಕರ ವಿಶ್ರಾಂತಿ ಗೃಹ ಹೀಗೆ ಹಲವು ಸೌಲಭ್ಯಗಳು ಸಿಕ್ಕಿವೆ. ಈ ಮಧ್ಯೆ ಕೇಂದ್ರ ಸರಕಾರ ಮತ್ತೆ ಅಭಿವೃದ್ದಿಗಾಗಿ ಕೊಪ್ಪಳ ರೈಲು ನಿಲ್ದಾಣ ಆಯ್ಕೆ ಮಾಡಿಕೊಂಡಿದೆ.
ಶಕ್ತಿ ದೇವತೆ ಶ್ರೀಹುಲಿಗೆಮ್ಮ ದೇವಸ್ಥಾನದ ಬಳಿ ಇರುವ ಮುನಿರಾಬಾದ್ ರೈಲು ನಿಲ್ದಾಣಕ್ಕೆ ಈಗ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದೆ. ಈ ರೈಲು ನಿಲ್ದಾಣದಲ್ಲಿ ಸಾಕಷ್ಟು ಮೂಲಭೂತ ಸೌಲಭ್ಯ ಒದಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಅಮೃತ ಭಾರತ ಸ್ಟೇಷನ್ ಯೋಜನೆಯಲ್ಲಿ ಮುನಿರಾಬಾದ್ ರೈಲು ನಿಲ್ದಾಣ ಸೇರಿಸಿದೆ.
ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದ ಸಂಗಣ್ಣ ಕರಡಿ ಮುತುವರ್ಜಿಯಿಂದ ಈ ಯೋಜನೆಗಳು ಮಂಜೂರಾಗಿವೆ. ಮೋದಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಎರಡನೆಯ ಅವಧಿಯ ಕೊನೆಯ ವರ್ಷ ಚಾಲನೆ ನೀಡಲಿರುವ ಯೋಜನೆಯು ಸಕಾಲಕ್ಕೆ ಆರಂಭವಾಗಿ ಪೂರ್ಣಗೊಂಡರೆ ಜನರಿಗೆ ಅನುಕೂಲವಾಗಲಿದೆ ಎಂಬ ಭಾವನೆ ಜನರಲ್ಲಿದೆ.