ಸುದ್ದಿಮೂಲವಾರ್ತೆ
ಕೊಪ್ಪಳ,ಸೆ.28: ಇಂದು ನಾಡಿನಲ್ಲೆಡೆ ಮಹ್ಮದ್ ಪೈಗಂಬರರ 1498 ಜಯಂತಿ ಈದ್ ಮಿಲಾದ್ ಆಚರಿಸುತ್ತಿದ್ದಾರೆ. ಈದ್ ಹಬ್ಬದ ಹಿನ್ನೆಲೆಯಲ್ಲಿ ಭವ್ಯ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಕೊಪ್ಪಳ ಮತ್ತೊಮ್ಮೆ ಭಾವೈಕ್ಯತೆಗೆ ಸಾಕ್ಷಿಯಾಯಿತು.
ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಕೊಪ್ಪಳದ ಗಲ್ಲಿ ಗಲ್ಲಿಗಳಿಂದ ಮುಸ್ಲಿಂ ಬಾಂಧವರು ಭವ್ಯ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ದಾರಿಗುಂಟ ಹಿಂದು ಜನಾಂಗದವರು ಮುಸ್ಲಿಂ ಬಾಂಧವರಿಗೆ ನೀರು. ಜ್ಯೂಸ್ ಹಾಗು ಟಿಫಿನ್ ನೀಡಿದರು.
ಈದ್ ಹಬ್ಬದಂದು ಹಿಂದೂ,ಮುಸ್ಲಿಂ ಭಾವೈಕ್ಯತೆ ಸಾಕ್ಷಿಯಾಗಿ ಹಿಂದೂ ಮಹಾ ಮಂಡಳಿಯಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ಮಾಡಿದ್ದರು.ಕೊಪ್ಪಳ ನಗರದ ಅಶೋಕ್ ಸರ್ಕಲ್ ಬಳಿ ವಿತರಣೆ ಮಾಡಿದರು.
ಧರ್ಮ ಭೇದ ಮರೆತು ಭಾವೈಕ್ಯತೆಯಿಂದ ಮೆರವಣಿಗೆಯಲ್ಲಿ ಭಾಗವಹಿಸುವ ಮುಸ್ಲಿಂ ಬಾಂಧವರಿಗೆ ಅನ್ನ ಸಂತರ್ಪಣೆ ಮಾಡಿದರು.ಧರ್ಮ ಧರ್ಮಗಳ ಸಂಘರ್ಷದ ಮದ್ಯೆ,ಭಾವೈಕ್ಯತೆ ಸಾಕ್ಷಿಯಾಯಿತು. ಪರಸ್ಪರ ಸಿಹಿ ತಿಂಡಿ ವಿತರಿಸಿ ಈದ್ ಮುಬಾರಕ್ ಶುಭಾಶಯ ಕೋರಿದ ಹಿಂದೂ, ಮುಸ್ಲಿಮರು ಹಿಂದೂಗಳ ಕಾರ್ಯಕ್ಕೆಮುಸ್ಲಿಂ ಬಾಂಧವರುವ ಹರುಷ ವ್ಯಕ್ತಪಡಿಸಿರು.
ಇದೇ ವೇಳೆ ನಿನ್ನೆ ಗಣೇಶ ವಿಸರ್ಜನೆಯ ವೇಳೆಯೂ ಯುವಕರು ಸಂಹಿಮ ಪ್ರದರ್ಶಿಸಿದರು.ಜಾಮೀಯಾ ಮಸೀದಿ ಬಳಿ ಡಿಜೆ ಬಂದ್ ಮಾಡಿ ಸಾಮರಸ್ಯ ಮೆರೆದರು.
ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನಿನ್ನೆ ರಾತ್ರಿ ನಡೆದ ವಿಸರ್ಜನಾ ಮೆರವಣಿಗೆಯು ತೆಗ್ಗಿನ ಓಣಿಯ ಗಜಾನನೋತ್ಸವ ಸಮಿತಿಯ ಗಣೇಶಮೂರ್ತಿ ವಿಸರ್ಜನೆ ನಡೆಯುತ್ತಿತ್ತು.ಮೆರವಣಿಗೆಯಲ್ಲಿ ಡಿಜೆಯೊಂದಿಗೆ ಅದ್ದೂರಿ ಮೆರವಣಿಗೆ ನಡೆದಿರುವಾಗ ಮೆರವಣಿಗೆಯ ಮಾರ್ಗದಲ್ಲಿ ಜಾಮಿಯಾ ಮಸೀದಿ ಬಳಿ ಢಿಜೆ ಸೌಂಡ್ ಬಂದ್ ಮಾಡಿ ಮೆರವಣಿಗೆ ಸಾಗಿತು.