ಸುದ್ದಿಮೂಲ ವಾರ್ತೆ ಮೈಸೂರು, ನ.22:
ಇನ್ನೆೆರಡು ದಿನಗಳಲ್ಲಿ ಹೈಕಮಾಂಡ್ ತನ್ನ ನಿರ್ಧಾರವನ್ನು ಪ್ರಕಟಿಸಿ ಗೊಂದಲ ಬಗೆಹರಿಸುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಸ್ಪೋೋಟಕ ಹೇಳಿಕೆ ನೀಡಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ಮೊದಲೇ ತನ್ನ ನಿಲುವನ್ನು ಸ್ಪಷ್ಟ ಪಡಿಸಬೇಕಿತ್ತು, ಆದರೆ ಅದು ತಡವಾಗಿದೆ. ಅದು ಅಪಾಯಕಾರಿ ಹಂತ ತಲುಪುವ ಲಕ್ಷಣಗಳು ಕಾಣುತ್ತಿಿದೆ. ಹೀಗಾಗಿ ಹೈಕಮಾಂಡ್ ತನ್ನ ನಿರ್ಧಾರ ಹೇಳಲಿದೆ ಎಂದು ತಿಳಿಸಿದರು.
ಒಪ್ಪಂದ ಆಗಿದೆಯೋ ಇಲ್ಲವೊ ಎಂಬ ಗೊಂದಲ ಎರಡುವರೆ ವರ್ಷಗಳಿಂದ ಮುಂದುವರೆದಿದೆ. ಈ ಎಲ್ಲಾ ಬೆಳವಣಿಗೆಯಿಂದ ಪಕ್ಷಕ್ಕೇನು ನಷ್ಟ ಇಲ್ಲ. ಅದರೆ ಗೊಂದಲ ಇರಬಾರದಿತ್ತು. ಯಾರು ಮಾತು ಕೊಟ್ಟಿಿದ್ದಾರೆ ಯಾರು ಮಾತು ಕೊಟ್ಟಿಿಲ್ಲ ಯಾರು ಮಾತು ತಪ್ಪಿಿದ್ದಾರೆ, ಇದೆಲ್ಲವೂ ಮಾತುಕತೆ ನಡೆದಾಗ ಇದ್ದಂತವರಿಗೆ ಮಾತ್ರ ಗೊತ್ತು ಎಂದು ಹೇಳಿದರು.
ಡಿಕೆಶಿ ಪರ ಬ್ಯಾಾಟಿಂಗ್
ಕಾಂಗ್ರೆೆಸ್ ಶಾಸಕರ ಮುಂದೆ ಅಧಿಕಾರ ಹಂಚಿಕೆಯ ಸೂತ್ರ ನಡೆದಿಲ್ಲ. ಹೀಗಾಗಿ ಅಲ್ಲಿ ಏನಾಗಿದೆ ಎಂಬುದು ನಮಗೆ ಏನು ಗೊತ್ತಿಿಲ್ಲ. ನನ್ನ ಮೇಲೆ ಡಿ ಕೆ ಶಿವಕುಮಾರ್ ಋಣ ಇದೆ. ರಾಜಕೀಯವಾಗಿ ನನ್ನನ್ನು ಬೆಳೆಸಿದ್ದು ಡಿ.ಕೆ. ಶಿವಕುಮಾರ್ ಎಂದು ಅವರ ಪರ ಬ್ಯಾಾಟಿಂಗ್ ಮಾಡಿದರು.
ನಾನು ಲಾಭ ನಷ್ಟದ ಬಗ್ಗೆೆ ಯೋಚನೆ ಮಾಡುವುದಿಲ್ಲ. ಇರುವ ಸತ್ಯವನ್ನೇ ಹೇಳುತ್ತಿಿದ್ದೇನೆ. ಸಿದ್ದರಾಮಯ್ಯ ಅವರ ಮೇಲೆಯೂ ನನಗೆ ಪ್ರೀೀತಿ ಇದೆ. ನಾನೂ ಕೂಡ ಸಚಿವ ಸ್ಥಾಾನದ ಆಕಾಂಕ್ಷಿಯಾಗಿದ್ದೇನೆ ಎಂದು ಪುನರುಚ್ಚರಿಸಿದರು.

