ಸುದ್ದಿಮೂಲ ವಾರ್ತೆ ರಾಯಚೂರು, ಡಿ.30:
ಹಿಂದುಳಿದ ಜಾತಿ ಸಮುದಾಯದವರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಸದೃಢರಾಗಲು ಸಂಘಗಳ ಅವಶ್ಯಕತೆ ಇದೆ ಎಂದು ವರ್ತಕ ಎಂ.ಬಾಬಣ್ಣ ಮಂದಕಲ್ ಹೇಳಿದರು.
ನಗರದ ರಾಜೇಂದ್ರ ಗಂಜ್ನ ರೈತ ಭವನದಲ್ಲಿ ಹಮ್ಮಿಿಕೊಂಡ ಕಲ್ಯಾಾಣ ಕರ್ನಾಟಕ ಕ್ರಾಾಂತಿವೀರ ಸಂಗೊಳ್ಳಿಿ ರಾಯಣ್ಣ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಾಟಿಸಿ ಮಾತನಾಡಿದರು.ಸಂಘದ ಪದಾಧಿಕಾರಿಗಳು ಸಮಾಜದ ಸರ್ವತೋಮುಖ ಅಭಿವೃದ್ಧಿಿಗೆ ಶ್ರಮಿಸಿ ಸಮಾಜವನ್ನು ಉನ್ನತ ಸ್ಥಾಾನಕ್ಕೆೆ ಕೊಂಡೊಯ್ಯಲು ಮುಂದಾಗಿ ಎಂದು ಹೇಳಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಾಧ್ಯಕ್ಷ ಎಂ ಈರಣ್ಣ ಮಾತನಾಡಿ ರಾಯಚೂರು ಜಿಲ್ಲೆಯಲ್ಲಿ ಕುರುಬ ಸಮಾಜವನ್ನು ಬಲಿಷ್ಠವಾಗಿ ಮಾಡಲು ಹಲವಾರು ಸಂಘಟನೆಗಳು ಶ್ರಮಿಸುತ್ತಿಿವೆ. ಇಂದು ಕಲ್ಯಾಾಣ ಕರ್ನಾಟಕ ಸಂಗೊಳ್ಳಿಿ ರಾಯಣ್ಣ ಟ್ರಸ್ಟ ಮಾಡಿಕೊಂಡು ಉತ್ತಮ ಸಂಘಟನೆ ಮಾಡಲು ಮುಂದಾಗಿರುವುದನ್ನು ಶ್ಲಾಾಘಿಸಿದರು. ಸಮಾಜದ ಯುವ ಜನರನ್ನು ,ಮಹಿಳೆಯರನ್ನು ಸಂಘಟನೆಯ ಮುಖ್ಯವಾಹಿನಿಗೆ ತರಲು ಸಲಹೆ ನೀಡಿದರು.
ಟ್ರಸ್ಟ್ನಿಂದ ವಿದ್ಯಾಾರ್ಥಿಗಳಿಗೆ ರಾಯಣ್ಣ ನಿಧಿ ಮೂಲಕ ಧನ ಸಹಾಯ, ಪ್ರತಿಭಾ ಪುರಸ್ಕಾಾರ ಜಿಲ್ಲಾ ಮಟ್ಟದ ಕ್ರೀೆಡಾಕೂಟವನ್ನು ಆಯೋಜನೆ ಸೇರಿ ನಾನಾ ಕಲ್ಯಾಾಣ, ಉತ್ತಮ ಕಾರ್ಯಕ್ರಮ ಮಾಡ ಲಾಗುವುದು ಎಂದು ರಮೇಶ್ ಉಪ್ರಾಾಳ ತಿಳಿಸಿದರು.
ಗೌರವಾಧ್ಯಕ್ಷರಾಗಿ ಬಿ.ಬಸವರಾಜ, ಸಲಹೆಗಾ ರರಾಗಿ ರಾಜಶೇಖರ ದಿನ್ನಿಿಘಿ, ಅಧ್ಯಕ್ಷರಾಗಿ ಅಯ್ಯಣ್ಣ ವಡವಟ್ಟಿಿಘಿ, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಶ್ರೀನಿವಾಸ ಸೇರಿ ವಿವಿಧ ಪದಾಧಿಕಾರಿಗಳು, ಸದಸ್ಯರು ಪದಗ್ರಹಣ ಮಾಡಿದರು.
ವೇದಿಕೆಯಲ್ಲಿ ಸಾನ್ನಿಿಧ್ಯವನ್ನು ಶಿವಾನಂದ ಮಠದ ಮಟಮಾರಿಯ ಶ್ರೀ ಜ್ಞಾನಾನಂದ ಮಹಾರಾಜರು ವಹಿಸಿದ್ದರು. ಕೆಕೆಆರ್ಟಿಸಿ ಮುಖ್ಯ ಲೆಕ್ಕಾಾಧಿಕಾರಿ ಶ್ರೀದೇವಿ ಆನಂದ್, ಕುರುಬ ಸಂಘದ ಹಿರಿಯ ಉಪಾಧ್ಯಕ್ಷ ಕೆ ಪಂಪಾಪತಿ, ಉದ್ಯಮಿ ಜ್ಯೋೋತಿ ಗೋಪಾಲ್, ಕೆ ಮುನಿಸ್ವಾಾಮಿ, ಬೇವಿನ ಬೂದೆಪ್ಪ ಕಲ್ಮಲಾ, ರಮೇಶ್ ಮೂಡಲದಿನ್ನಿಿ, ಶಾಮ ಮೂರ್ತಿ, ಸಿದ್ದಪ್ಪ ರಾಂಪುರ, ಮಲ್ಲಿಕಾರ್ಜುನ್ ಜಕ್ಕಲದಿನ್ನಿಿ ಕುರುಬ ಸಮಾಜದ ನೂರಾರು ಮುಖಂಡರು ಕಾರ್ಯಕರ್ತರು ಉಪಸ್ಥಿಿತರಿದ್ದರು.
ಕ್ರಾಾಂತಿವೀರ ಸಂಗೊಳ್ಳಿ ರಾಯಣ್ಣ ಪದಾಧಿಕಾರಿಗಳ ಪದಗ್ರಹಣ ಹಿಂದುಳಿದ ಸಮುದಾಯದ ಸರ್ವಾಂಗೀಣ ಅಭಿವೃದ್ದಿಗೆ ಸಂಘಗಳ ಅಗತ್ಯವಿದೆ – ಬಾಬಣ್ಣ

