ಸುದ್ದಿಮೂಲ ವಾರ್ತೆ ರಾಯಚೂರು , ಡಿ.10:
ಕೃಷಿ ವಿಜ್ಞಾಾನಗಳ ವಿಶ್ವ ವಿದ್ಯಾಾಲಯದ ಅಂತರ ಮಹಾ ವಿದ್ಯಾಾಲಯಗಳ ಗುಂಪು ಪಂದ್ಯಾಾವಳಿ ವಿಜೇತರಿಗೆ ಪ್ರಶಸ್ತಿಿ ನೀಡಿ ಗೌರವಿಸಲಾಯಿತು.
ಕೃಷಿ ವಿವಿ ಆವರಣದಲ್ಲಿ ಜರುಗಿದ ಅಂತರ ಮಹಾ ವಿದ್ಯಾಾಲಯಗಳ ಟೇಬಲ್ ಟೆನ್ನಿಿಸ್, ಕಬಡ್ಡಿಿ, ವಾಲಿಬಾಲ್ ಮತ್ತು ಖೋ-ಖೋ ಸ್ಪರ್ಧೆಗಳು ಯಶಸ್ವಿಿಯಾಗಿ ನೆರವೇರಿದವು.
ಟೇಬಲ್ ಟೆನ್ನಿಿಸ್ ಪುರುಷರ ವಿಭಾಗದಲ್ಲಿ ಕೃಷಿ ವಿವಿಯ ಸ್ನಾಾತಕೋತ್ತರ ವಿಭಾಗ ಪ್ರಥಮ, ಭೀಮರಾಯನಗುಡಿಯ ಕೃಷಿ ಮಹಾವಿದ್ಯಾಾಲಯದ ತಂಡ ದ್ವಿಿತೀಯ ಸ್ಥಾಾನ ಪಡೆದರೆ ಮಹಿಳೆಯರ ವಿಭಾಗದಲ್ಲಿ ರಾಯಚೂರಿನ ಕೃಷಿ ತಾಂತ್ರಿಿಕ ಮಹಾವಿದ್ಯಾಾಲಯ ಪ್ರಥಮ, ಗಂಗಾವತಿಯ ಕೃಷಿ ಮಹಾವಿದ್ಯಾಾಲಯ ದ್ವಿಿತೀಯಸ್ಥಾಾನ ಪಡೆದರು.
ಪುರುಷರ ಕಬಡ್ಡಿಿ ಪಂದ್ಯಾಾವಳಿಯಲ್ಲಿ ರಾಯಚೂರಿನ ಕೃಷಿ ಮಹಾದ್ಯಾಾಲಯ ಪ್ರಥಮ, ಗಂಗಾವತಿಯ ಕೃಷಿ ಮಹಾವಿದ್ಯಾಾಲಯದ ತಂಡ ದ್ವಿಿತೀಯ ಸ್ಥಾಾನ ಪಡೆಯಿತು.
ಪುರುಷರ ವಾಲಿಬಾಲ್ ರಾಯಚೂರಿನ ಸ್ನಾಾತಕೋತ್ತರ ಕೃಷಿ ಮಹಾವಿದ್ಯಾಾಲಯದ ತಂಡ ಗೆದ್ದರೆ,ಕೃಷಿ ತಾಂತ್ರಿಿಕ ಮಹಾವಿದ್ಯಾಾಲಯ ರನ್ನರ್ಅಪ್ ಆಗಿದೆ.
ಮಹಿಳೆಯರ ವಾಲಿಬಾಲ್ ನಲ್ಲಿ ಕೃಷಿ ಮಹಾವಿದ್ಯಾಾಲಯ ಗಂಗಾವತಿಯ ಬಾಲಕಿಯರ ತಂಡ ಪ್ರಥಮ ಸ್ಥಾಾನ ಪಡೆದು ಗೆದ್ದರೆ, ಕಲಬುರಗಿಯ ಮಹಾವಿದ್ಯಾಾಲಯದ ತಂಡ ರನ್ನರ್ಅಪ್ ಆಗಿದೆ.
ಪುರುಷರ ಖೋ-ಖೋ ಪಂದ್ಯಾಾವಳಿಯಲ್ಲಿ ರಾಯಚೂರಿನ ಕೃಷಿ ತಾಂತ್ರಿಿಕ ಮಹಾ ವಿದ್ಯಾಾಲಯದ ತಂಡ ಪ್ರಥಮ, ಕೃಷಿ ಮಹಾವಿದ್ಯಾಾಲಯ ತಂಡ ದ್ವಿಿತೀಯ ಸ್ಥಾಾನ ಪಡೆದಿದೆ.
ಮಹಿಳೆಯರ ಖೋ-ಖೋ ಪಂದ್ಯದಲ್ಲಿ ಕಲಬುರಗಿಯ ಕೃಷಿ ಮಹಾ ವಿದ್ಯಾಾಲಯದ ತಂಡ ಪ್ರಥಮ, ರಾಯಚೂರು ಕೃಷಿ ಮಹಾವಿದ್ಯಾಾಲಯದ ಬಾಲಕಿಯರ ತಂಡ ದ್ವಿಿತೀಯ ಸ್ಥಾಾನ ಪಡೆಯಿತು.
ಈ ಪಂದ್ಯಾಾವಳಿಗಳಲ್ಲಿ ಒಟ್ಟು ಏಳು ಕೃಷಿ, ಸ್ನಾಾತಕೋತ್ತರ ಮಹಾದ್ಯಾಾಲಯಗಳಿಂದ 320 ವಿದ್ಯಾಾರ್ಥಿ ಮತ್ತು 200 ಜನ ವಿದ್ಯಾಾರ್ಥಿನಿಯರು ಭಾಗವಹಿಸಿದ್ದರು.
ವಿಜೇತ ತಂಡಗಳಿಗೆ ಕುಲಪತಿ ಡಾ.ಎಂ.ಹನುಮಂತಪ್ಪ ಅವರು ಪ್ರಶಸ್ತಿಿ ನೀಡಿ ಅಭಿನಂದಿಸಿದರು.
ಈ ಸಮಾರಂಭದಲ್ಲಿ ಅಧಿಕಾರಿಗಳಾದ ಡಾ. ಕೆ.ನಾರಾಯಣರಾವ್ , ಡಾ. ಎಮ್.ಎಸ್. ಅಯ್ಯನಗೌಡರ್, ಡಾ.ಯು. ಸತೀಶ ಕುಮಾರ್, ಡಾ. ಜಾಗೃತಿ ಬಿ.ದೇಶಮಾನ್ಯ, ಡಾ. ರಾಜಣ್ಣ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿಿತರಿದ್ದರು.
ಕೃಷಿ ವಿವಿ ಅಂತರ್ ಕಾಲೇಜುಗಳ ಕ್ರೀಡಾಕೂಟ ಸಮಾರೋಪ ಪ್ರಶಸ್ತಿ ಪಡೆದ ತಂಡಗಳಿಗೆ ಟ್ರೋಫಿ ಹಸ್ತಾಾಂತರ

