ಸುದ್ದಿಮೂಲ ವಾರ್ತೆ,
ಜೇವರ್ಗಿ : ರಾಜಕೀಯದವರು ನನ್ನ ಜೊತೆ ಪುಟ್ಬಾಲ್ ತರಹ ಆಟವಾಡಿದರೆ ಎಲ್ಲಾ ಪಕ್ಷಗಳನ್ನು ಪುಟ್ ಬಾಲ್ ನಂತೆ ಒಡೆದುಡಿಸಬೇಕಾಗಿದೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಪಟ್ಟಣದ ದತ್ತ ನಗರದ ಎದುರುಗಡೆ ಗೋಗಿ ಲೇಔಟ್ ನಲ್ಲಿ ಕೆ.ಆರ್. ಪಿ ಪಕ್ಷದ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, 2008 ರ ಚುನಾವಣೆಯಲ್ಲಿ ದಿ. ಧರ್ಮಸಿಂಗ್ ಅವರಿಗೆ ಸೋಲುಣಿಸಲು ಮುಖ್ಯ ಕಾರಣೀಕರ್ತರಲ್ಲಿ ನಾನು ಒಬ್ಬ ಎಂದರು. ಜೇವರ್ಗಿ ಕ್ಷೇತ್ರವು ಅಭಿವೃದ್ಧಿ ವಂಚಿತ ಮತ್ತು ಹಿಂದುಳಿದ ತಾಲೂಕು. ಈ ಕ್ಷೇತ್ರದಿಂದ ಹಲವಾರು ಸಚಿವ ಖಾತೆ, ಮುಖ್ಯಮಂತ್ರಿ ಸ್ಥಾನದ ವೆರೆಗೆ ಹೋದರು ಅಭಿವೃದ್ಧಿ ಹೊಂದಿಲ್ಲ ಎಂದು ಹೇಳಿದರು. ರಾಜಕೀಯ ಎಂದರೆ ತಂತ್ರ, ಕುತಂತ್ರ, ದ್ವೇಷ, ಇನ್ನೊಬರನ್ನು ತುಳಿದು ಮಾಡುವದು ನನಗೆ ಗೊತ್ತಿಲ್ಲ, ನಾನು ಪ್ರವಾಸೋದ್ಯಮ ಸಚಿವ ನಿದಾಗ ಹಲವಾರು ಯೋಜನೆಗಳು ಹಾಕಿಕೊಂಡು ದೇಶ ವಿದೇಶದಿಂದ ಬರುವ ಪ್ರಯಾಣಿಕರಿಗೆ ಕೇವಲ 3 ದಿನದಲ್ಲಿ ಕರ್ನಾಟಕ ಸಂಚರಿಸಿ ನೋಡುವಂತೆ ಮಾಡಿದ್ದೆ ಎಂದು ಹೇಳಿದರು.
ಮೂಲಭೂತ ಸಚಿವನಿದಾಗ ಹಲವಾರು ವಿಮಾನ ಶ್ರೇಯ ಮದಿದ್ದು, ಅದರಲ್ಲಿ ಕಲಬುರಗಿಯೂ ಒಂದು ಬಡಜನರ ಜಮೀನು ಹೆಚ್ಚಿನ ಆದಾಯ, ಯುವಕರಿಗೆ ಉದೋಗ, ಕೈಗಾರಿಕೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು ಮಾಡುತ್ತಿದ್ದ ನನಗೆ ರಾಜಕೀಯ ಶತ್ರುಗಳ ಜೊತೆ ಸೇರಿಕೊಂಡು ನನನ್ನು 12 ವರ್ಷ ಜೈಲು ವಾಸ ಮಾಡುವಂತೆ ಮಾಡಿದರು.
ಒಬ್ಬ ಮನುಷ್ಯ ಇನೊಬ್ಬ ಮನುಷ್ಯನನ್ನು ಕೆಡವಲು ಸಾಧ್ಯವಿಲ್ಲ ಎಲ್ಲಾ ದೇವರ ಹಿಚ್ಛೆ ಎಂದರು.13 ಜಿಲ್ಲೆಯಲ್ಲಿ ಪ್ರಭಾವ ಹೊಂದಿರುವ ಕಾರಣ ನನನ್ನು ಬಳ್ಳಾರಿಯಿಂದ ದೂರ ಇಟ್ಟರು. ನನ್ನ 12 ವರ್ಷ ಅಮೂಲ್ಯ ಕ್ಷಣಗಳು ಕಳೆದುಕೊಂಡಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಮ್ಮ ಪಕ್ಷ ನೊಂದವರ ಮತ್ತು ಅಭಿವೃದ್ಧಿ ಹಿತದೃಷ್ಟಿಯಿಂದ ಪ್ರಾದೇಶಿಕ ಪಕ್ಷ ಕಟ್ಟಿದ್ದು ಈ ಪಕ್ಷಕ್ಕೆ ಜನರ ಆಶೀರ್ವಾದದಿಂದ ಈ ಚುನಾವಣೆಯಲ್ಲಿ 30 ಸ್ಥಾನ ಪಡೆದುಕೊಳುವದು ಖಚಿತ ಎಂದು ಹೇಳಿದರು.
ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರೈತರು ಬಡತನ ರೇಖೆಗಿಂತ ಕಡಿಮೆ ಇದ್ದಾರೆ ಮಾಸಿಕ 15 ಸಾವಿರ, 9ಗಂಟೆಗಳ ಕಾಲ ವಿದ್ಯುತ್ ಉಚಿತ, ರೈತರಿಗೆ ಪ್ರತಿಗ್ರಾಮದಲ್ಲಿ ರಸಗೊಬ್ಬರ, ಬಿತ್ತನೆಬೀಜ ಉಚಿತವಾಗಿ ನಿಡುತೇವೆ ಎಂದು ಘೋಷಣೆ ಮಾಡಿದರು. ಅಶೋಕ ಸಾಹು ಗೋಗಿ ಮಾತನಾಡಿ, ಬಿಜೆಪಿ ಈ ಕೆ. ಆರ್. ಪಿ ಪಕ್ಷ ಅಭಿವೃದ್ಧಿ ಪಕ್ಷವಾಗಿದ್ದು, ನೊಂದವರ ಬೆಂದವರ ಹಿತದೃಷ್ಟಿಗಾಗಿ ಈ ಬಾರಿ ಪಕ್ಷಕ್ಕೆ ಜನರ ಆಶೀರ್ವಾದ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಮಹಿಳಾ ಘಟಕದ ರಾಜ್ಯಾಧ್ಯಕ್ಷ ಹೇಮಲತಾ, ಕರೆಪ್ಪಗೌಡ ಮುರ್ಗನೂರ್, ಮಲ್ಲಿಕಾರ್ಜುನ್ ನಾಟಿಕಾರ್, ಮಲ್ಲಿಕಾರ್ಜುನ ಉಗ್ಗಿ, ಶರಣಗೌಡ ವಾಸ್ತರಿ, ಶಿವಲಿಂಗಪ್ಪ ಸಾಹು ಬಸ್ಗಿ, ದೇವಿಂದ್ರಪ್ಪಗೌಡ ಪೊಲೀಸ್ ಪಾಟೀಲ, ಮಹಾಂತಗೌಡ ಕಲ್ಲೂರ್, ವೆಂಕಟೇಶ ಗುತ್ತೇದಾರ, ಶಾಬೋದಿನ ಪಟೇಲ್ ಯಾಳವಾರ, ಪ್ರಶಾಂತ ಆಂದೋಲ, ಶಭೀರ್ ಎಂ. ಹಿಪ್ಪರಗಿ, ವಿಷ್ಣುಕಾಂತ ಬಿರೇದಾರ, ಮಹಾಂತಗೌಡ ಹಳ್ಳಿ, ಭಗವಂತರಾಯ ವಾಸ್ತರಿ, ರೇವಣಸಿದ್ದಪ್ಪ ಸುಂಬುಡ್, ದೇವಿಂದ್ರ ಈ ತಳವಾರ, ಸಂಗನಗೌಡ ಹಿರೇಗೌಡರ, ಸಿದ್ದು ಸಾಹುಕಾರ ಸೇರಿದಂತೆ ಅಭಿಮಾನಿಗಳು ಮತ್ತು ಕಾರ್ಯಕರ್ತರು ಇದ್ದರು.