ಸುದ್ದಿಮೂಲ ವಾರ್ತೆ
ಯಾದಗಿರಿ,ಮೇ 26:ಅಖಿಲ ಭಾರತ ಕೋಲಿ ಸಮಾಜದ ಕರ್ನಾಟಕ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕು.ಲಲಿತಾ ಮೌಲಾಲಿ ಅನಪುರ ನೇಮಕವಾಗಿದ್ದಾರೆ.
ಅಖಿಲ ಭಾರತ ಕೋಲಿ ಸಮಾಜದ ಸಂಘಟನೆಯನ್ನು ಚಟುವಟಿಕೆಗಳನ್ನು ಇನ್ನಷ್ಟು ಚುರಕುಗೊಳಿಸಲು ಪೋಷಕ ಸಂಘಟನೆಯ ಕರ್ನಾಟಕ ರಾಜ್ಯ ಮಹಿಳಾ ಘಟಕ ಅಧ್ಯಕ್ಷ ಸ್ಥಾನಕ್ಕೆ ಇವರನ್ನು ನೇಮಕ ಮಾಡಲಾಗಿದೆ ಎಂದು ಗುಜರಾತ್ ಕ್ಯಾಬಿನೇಟ್ ಮಂತ್ರಿ ಅಖಿಲ ಭಾರತೀಯ ಕೋಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷರಾದ ಕುನ್ವರ್ಜಿಭಾಯಿ ಬಾವ್ಲಿಯಾ ಅವರು ಆದೇಶ ಹೊರಡಿಸಿದ್ದಾರೆ.
ಸಂವಿಧಾನದ ಪ್ರಕಾರ ಸಮಾಜದ ರಾಜ್ಯ ಅಧ್ಯಕ್ಷರೊಂದಿಗೆ ಸಮನ್ವಯದಿಂದ ಕಾರ್ಯ ನಿರ್ಹಹಿಸಿ, ಸಕ್ರೀಯ ಸಹಕಾರವನ್ನು ನೀಡುವ ಮೂಲಕ ಜವಬ್ದಾರಿಯನ್ನು ಪೂರೈಸಿ, ಸಂಸ್ಥೆಯ ಘನತೆ ಹೆಚ್ಚಿಸಬೇಕೆಂದು ಅವರು ತಿಳಿಸಿದ್ದಾರೆ. ಲಲಿತ ಅನಪುರ್ ಅವರು ಗುರುಮಠಕಲ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು.