ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.23:
ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟದ ವಿಚಾರದಲ್ಲಿ ನಾವು ಹಿಂದೆ ಸರಿಯಲ್ಲ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಾಮೀಜಿ ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಮೀಸಲಾತಿ ಹೋರಾಟ ಆರಂಭವಾದ ದಿನದಿಂದಲೇ ರೈತ ದಿನ ಹಾಗೂ ನಮ್ಮ ಜನ್ಮ ದಿನವನ್ನು ಹೋರಾಟದ ಭಾಗವಾಗಿ ಆಚರಿಸಿಕೊಂಡು ಬರುತ್ತಿಿದ್ದೇವೆ. ರಕ್ತ ಕೊಟ್ಟೇವು, ಆದರೆ ಮೀಸಲಾತಿ ಬಿಡುವುದಿಲ್ಲ ಎಂಬ ಸಂಕಲ್ಪದೊಂದಿಗೆ ಸಮಾಜ ಹೋರಾಟ ನಡೆಸುತ್ತಿಿದೆ ಎಂದು ಸ್ವಾಾಮೀಜಿ ತಿಳಿಸಿದರು.
ಮೀಸಲಾತಿ ವಿಚಾರದಲ್ಲಿ ಹಿಂದೆ ಮಾತನಾಡುತ್ತಿಿದ್ದ ಇಂದಿನ ಇಬ್ಬರು ಸಚಿವರಲ್ಲಿ ಒಬ್ಬರು ರಾಜಕೀಯ ಕಾರಣಗಳಿಂದ ಈಗ ಮೌನವಾಗಿದ್ದಾಾರೆ. ಮತ್ತೊೊಬ್ಬ ಸಚಿವರು ನಮ್ಮ ಸಮಾಜದ ಕುರಿತು ಒಂದೇ ಮಾತು ಕೂಡ ಆಡಿಲ್ಲ ಎಂದು ಸ್ವಾಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಮೀಸಲಾತಿ ಹೋರಾಟದ ಲವಾಗಿ ಕೆಲವರು ಶಾಸಕ ಸ್ಥಾಾನ ಪಡೆದುಕೊಂಡಿದ್ದಾಾರೆ. ಹೋರಾಟದಿಂದ ಬೇರೆ ಬೇರೆ ಸಮಾಜದವರು ಲಾಭ ಪಡೆದಿದ್ದಾಾರೆ. ಆದರೆ ಅಧಿಕಾರದಲ್ಲಿದ್ದಾಾಗ ಮಾತನಾಡದವರು, ಅಧಿಕಾರ ಕಳೆದುಕೊಂಡ ನಂತರ ಮಾತನಾಡುತ್ತಿಿರುವುದು ಸಹಜ ಎಂದು ಸ್ವಾಾಮೀಜಿ ಹೇಳಿದರು.
ರಾಜಕೀಯ ಲಾಭಕ್ಕಾಾಗಿ ನಮ್ಮ ಸಮಾಜ ಕಡೆಗಣಿಸಲಾಗುತ್ತಿಿದೆ ಎಂದರು.
ಮೀಸಲಾತಿ ಹೋರಾಟದಿಂದ ಹಿಂದೆ ಸರಿಯಲ್ಲ : ಕೂಡಲ ಸಂಗಮ ಸ್ವಾಮೀಜಿ

