ಸುದ್ದಿಮೂಲ ವಾರ್ತೆ ಲಿಂಗಸೂಗೂರು, ಡಿ.20:
ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಾಣ ಇಲಾಖೆಯಲ್ಲಿ ತಾಲೂಕಿನ ಅಂಗನವಾಡಿ ಕೇಂದ್ರಗಳ ಕುಂದು-ಕೊರತೆ ಸಭೆಯಲ್ಲಿ ವಿವಿಧ ಸಮಸ್ಯೆೆಗಳ ಕುರಿತು ಶನಿವಾರ ಚರ್ಚಿಸಲಾಯಿತು. ಈ ವೇಳೆ ತಾಲೂಕಿನ ಅಂಗನವಾಡಿಗಳು ಎದುರಿಸುತ್ತಿಿರುವ ಹಲವಾರು ಸಮಸ್ಯೆೆಗಳನ್ನು ಸರಿಪಡಿಸುವಂತೆ ಅಂಗನವಾಡಿ ಕಾರ್ಯಕರ್ತೆಯರು ಸಭೆಯಲ್ಲಿ ತಮ್ಮ ಅಹವಾಲು ತೋಡಿಕೊಂಡರು.
ಸಿಡಿಪಿಓ ನಾಗರತ್ನ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಳೆದ ಮೂರು ತಿಂಗಳಿ ನಿಂದ ಮೊಟ್ಟೆೆಯ ಬಿಲ್ ಮಾತೃವಂದನ ಪ್ರೋೋತ್ಸಾಾಹಧನ, ಸಿಲಿಂಡರಗಳಿಗೆ ಹಣ ಬಿಡು ಗಡೆಯಾಗಿಲ್ಲ, ಗುಣಮಟ್ಟದ ಆಹಾರ ಪೊರೈಕೆ ಕೇಂದ್ರಗಳಲ್ಲಿ ಸಹಾಯಕಿಯರ ಹುದ್ದೆೆ ಖಾಲಿ ಹುದ್ದೆೆ ಭರ್ತಿ, ಸೇರಿದಂತೆ ಹಲವಾರು ಸಮಸ್ಯೆೆಗಳ ಕುರಿತು ಅಂಗನವಾಡಿ ಕಾರ್ಯ ಕರ್ತೆಯರು ಮಾಹಿತಿ ನೀಡಿದರು. ಸರಸ್ವತಿ ಈಚನಾಳ, ಲಕ್ಷ್ಮೀ ನಗನೂರು, ಮಹೇಶ್ವರಿ ಹಟ್ಟಿಿ, ಸಂಗಯ್ಯಸ್ವಾಾಮಿ ಚಿಂಚರಕಿ, ಮಲ್ಲನಗೌಡ ಮುದಗಲ್ ಸೇರಿ ಇತರರಿದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕುಂದು-ಕೊರತೆ ಸಭೆ

