ಸುದ್ದಿಮೂಲ ವಾರ್ತೆ ಸಿರವಾರ, ೆ.1:
ತಾಲೂಕಿನ ಕುರುಕುಂದಾ ಗ್ರಾಾಮದ ಆರಾಧ್ಯ ದೈವ ಶ್ರೀರೇಣುಕಾ ಯಲ್ಲಮ್ಮದೇವಿ ರಥೋತ್ಸವ ಭಾರತ ಹುಣ್ಣುಮೆ ಅಂಗವಾಗಿ ಪ್ರತಿವರ್ಷದಂತೆ ರವಿವಾರ ಅದ್ದೂರಿಯಾಗಿ ಬಾಜಿ, ಡೊಳ್ಳು ಕುಣಿತ, ಭಕ್ತರ ಜಯಘೋಷದೊಂದಿಗೆ ಜರುಗಿತು.
ಭಕ್ತರು ಯಲ್ಲಮ್ಮದೇವಿಗೆ ವಿಶೇಷವಾದ ಪೂಜೆ, ಹರಕೆ ಪೂರೈಕೆ ಮಾಡಿದರು. ಇದರಲ್ಲಿ ಶಾಸಕರ ಪುತ್ರ ಶಿವರಾಜ ನಾಯಕ ವಕೀಲ ಬಲ್ಲಟಗಿ, ದೇವರಾಜ ನಾಯಕ ಕುರುಕುಂದಾ, ಡಿ.ಅರುಣ ನಾಯಕ ಬಲ್ಲಟಗಿ, ಮಲ್ಲಿಕಾರ್ಜುನಗೌಡ, ಸೇರಿದಂತೆ ಮಹಿಳೆಯರು, ಯುವಕರು, ಮಕ್ಕಳು ಅನೇಕ ಭಕ್ತರು ಭಾಗವಹಿಸಿದ್ದರು. ಸಿಪಿಐ ಎಂ.ಶಶಿಕಾಂತ ನೇತೃತ್ವದಲ್ಲಿ ಪೊಲೀಸ್ ಬಂದೋಬ್ತ್ ಮಾಡಲಾಗಿತ್ತು.
ಕುರುಕುಂದಾ : ಅದ್ದೂರಿ ಯಲ್ಲಮ್ಮದೇವಿ ರಥೋತ್ಸವ

