ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.25:
ರಾಷ್ಟ್ರೀಯ ಸ್ವಾಾಭಿಮಾನ ಆಂದೋಲನ, ನಿರ್ಮಲ ತುಂಗಭದ್ರಾಾ ಅಭಿಯಾನ ಸಮಿತಿ, ಪರ್ಯಾವರಣ ಟ್ರಸ್ಟ್ ಸಂಯುಕ್ತಾಾಶ್ರಯದಲ್ಲಿ ನಡೆಯುತ್ತಿಿರುವ ನಿರ್ಮಲ ತುಂಗಭದ್ರಾಾ ಅಭಿಯಾನ 3ನೇ ಹಂತದ ಜಾನಜಾಗೃತಿ ಪಾದಯಾತ್ರೆೆಯ ತಾಲೂಕಿನ ಸಾರ್ವಜನಿಕರು ಹೆಚ್ಚಿಿನ ಸಂಖ್ಯೆೆಯಲ್ಲಿ ಭಾಗವಹಿಸಬೇಕು ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮನವಿ ಮಾಡಿದ್ದಾಾರೆ.
ತುಂಗಭದ್ರಾಾ ಜಲಾಶಯದ ನೀರು ಹಾಗೂ ಕಾಲುವೆ ನೀರು ಸಂಪೂರ್ಣ ಕಲುಷಿತವಾಗಿರುವುದರಿಂದ ಕುಡಿಯಲು ಯೋಗ್ಯವಾಗಿಲ್ಲ. ಜಲ ಜಾಗೃತಿ ಹಾಗೂ ಜನ ಜಾಗೃತಿ ಉದ್ದೇಶದಿಂದ ನಿರ್ಮಲ ತುಂಗಭದ್ರಾಾ ಅಭಿಯಾನ ಆಂದೋಲನ ನಡೆಯುತ್ತಿಿದೆ. ಡಿ-28 ರಂದು ಅಭಿಯಾನ ಸಿಂಧನೂರು ತಾಲೂಕಿಗೆ ಪ್ರವೇಶ ಮಾಡಲಿದೆ. ಅಂಬಾಮಠ, ಗೊರೇಬಾಳ, ಸಿಂಧನೂರು, ಜವಳಗೇರಾದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ಸಿಂಧನೂರು ತಾಲೂಕಿನ ವಿದ್ಯಾಾರ್ಥಿಗಳು, ಯುವ ಜನರು, ಸಂಘ ಸಂಸ್ಥೆೆಗಳ ಮುಖಂಡರು, ವ್ಯಾಾಪಾರಿಗಳು, ನ್ಯಾಾಯವಾದಿಗಳು, ಉಪನ್ಯಾಾಸಕರು ಸೇರಿದಂತೆ ಸಾರ್ವಜನಿಕರು ಹೆಚ್ಚಿಿನ ಸಂಖ್ಯೆೆಯಲ್ಲಿ ಭಾಗವಹಿಸಬೇಕು ಎಂದು ಪತ್ರಿಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾಾರೆ.
ನಿರ್ಮಲ ತುಂಗಭದ್ರಾ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲು – ಕೆವಿ ಮನವಿ

