ಸುದ್ದಿಮೂಲ ವಾರ್ತೆ ಬೆಂಗಳೂರು, ನ.23:
ನಮ್ಮ ಸಮಾಜದಲ್ಲಿ ಅಳುವ ಮಕ್ಕಳಿಗೆ ಮೊದಲು ಸಿಹಿ, ಮೊಬೈಲ್ ನೀಡುವ ಮೂಲಕ ಅವರ ದೈಹಿಕ, ಮಾನಸಿಕ ಆರೋಗ್ಯ ಹದಗೆಡಿಸುವ ಕೆಲಸವನ್ನು ನಾವೇ ಮಾಡುತ್ತೇವೆ. ಆರೋಗ್ಯವಂತ ಸಮಾಜ ಮನೆಯಿಂದಲೇ ನಿರ್ಮಾಣವಾಗಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ರಾಘವಿ ಚಾರಿಟೇಬಲ್ ಟ್ರಸ್ಟ್ ಮತ್ತು ಸೇವಾ ೌಂಡೇಷನ್ನಿಂದ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸೇವಾ ವಲಯದಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು, ತಜ್ಞ ವೈದ್ಯರು, ಅರೆ ವೈದ್ಯಕೀಯ ಮತ್ತು ಇತರೆ 100ಕ್ಕೂ ಅಧಿಕ ಆರೋಗ್ಯ ಸಿಬ್ಬಂದಿಗೆ ರಾಜ್ಯಮಟ್ಟದ 2 ನೇ ವರ್ಷದ ಆರೋಗ್ಯ ಜ್ಯೊೊತಿ ಪ್ರಶಸ್ತಿಿ ಪ್ರದಾನ ಮಾಡಿ ಮಾತನಾಡಿದರು.
ಜಪಾನ್ನಲ್ಲಿ ಶೇ. 4 ರಷ್ಟು ಮಂದಿಗೆ ಮಾತ್ರ ಬೊಜ್ಜಿಿನ ಸಮಸ್ಯೆೆ ಇದೆ. ಅಲ್ಲಿ ಶಾಲಾ ಮಕ್ಕಳಿಗೆ ಪೌಷ್ಟಿಿಕ ಆಹಾರ ನೀಡಲಾಗುತ್ತದೆ. ಆದರೆ ನಮ್ಮಲ್ಲಿ ಎಲ್ಲವೂ ತದ್ವಿಿರುದ್ಧ. ಜಪಾನ್ ನಲ್ಲಿ ಜಗತ್ತಿಿನಲ್ಲಿಯೇ ಅತಿ ಹೆಚ್ಚು ಶತಾಯುಶಿಗಳಿದ್ದು, ಅವರು ದೈಹಿಕ ಕಸರತ್ತು, ದೇಹಾರೋಗ್ಯ ಕಾಪಾಡುವ ಕಸರತ್ತು, ಆಹಾರ, ವಿಹಾರಗಳಿಗೆ ಆದ್ಯತೆ ನೀಡುತ್ತಾಾರೆ ಎಂದರು.
ಆರೋಗ್ಯ ಕ್ಷೇತ್ರದಲ್ಲಿ ತುರ್ತು ಪರಿಸ್ಥಿಿತಿ ಇದ್ದೇ ಇರುತ್ತದೆ. ಅಂತಹ ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ಸ್ಪಂದಿಸಿದರೆ ಜೀವ ಉಳಿಸಲು ಸಾಧ್ಯ. ಸಹಾಯ ಮಾಡಲು, ಸೇವೆ ಸಲ್ಲಿಸಲು ಹಣ ಇರಲೇಬೇಕು ಎಂಬುದು ಸರಿಯಲ್ಲ. ಸೇವೆ ಸಲ್ಲಿಸುವ ಮನೋಭಾವನೆ ಇರಬೇಕು. ನಂಬಿಕೆ, ತತ್ವ ಸಿದ್ಧಾಾಂತ ಏನೇ ಇದ್ದರೂ ವಿಜ್ಞಾನದಲ್ಲಿ ಎಲ್ಲದಕ್ಕೂ ಪರಿಹಾರವಿದೆ. ಏನಾದರೂ ಹೆಚ್ಚು ಕಡಿಮೆ ಆದರೆ ದೇವರ ಬಳಿ ಅಲ್ಲ, ಎಲ್ಲರೂ ವೈದ್ಯರ ಬಳಿ ಹೋಗುತ್ತಾಾರೆ ಎಂದರು.
ಮಾಜಿ ಮುಖ್ಯಮಂತ್ರಿಿ ಡಿ.ವಿ. ಸದಾನಂದ ಗೌಡ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಕೇಂದ್ರ ರಾಸಾಯನಿಕ, ರಸಗೊಬ್ಬರ ಸಚಿವರಾಗಿದ್ದಾಗ ತಾವು ಇಡೀ ದೇಶಕ್ಕೆೆ ಔಷಧಗಳನ್ನು ಪೂರೈಸುವ ಜವಾಬ್ದಾಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದೆ. ಆ ಸಂದರ್ಭದಲ್ಲಿ ಆರೋಗ್ಯ ವಲಯದ ಕೊಡುಗೆ, ಸೇವೆಯನ್ನು ಕಣ್ಣಾಾರೆ ಕಂಡಿದ್ದೆ. ಆಪತ್ಕಾಾಲದಲ್ಲಿ ಆರೋಗ್ಯ ಸಿಬ್ಬಂದಿ ಅನನ್ಯ ಕೊಡುಗೆ ನೀಡಿದೆ ಎಂದರು.
ಅರಣ್ಯ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ, ಅರುಣ್ ಗುರೂಜಿ, ರಾಘವಿ ಚಾರಿಟಬಲ್ ಟ್ರಸ್ಟ್ ಮತ್ತು ಸೇವಾ ೌಂಡೇಷನ್ ಅಧ್ಯಕ್ಷ ರಾಘವೇಂದ್ರ ಸುಂಟ್ರಹಳ್ಳಿಿ, ಚಿತ್ರನಟಿಯರಾದ ಸುಧಾರಾಣಿ, ಕಾರುಣ್ಯ ರಾಮ್ ಗೌಡ, ಟ್ರಸ್ಟ್ ರಘು, ನಳಿನಿ, ಶ್ವೇತಾ ಜಾಧವ್ ಮತ್ತು ಶ್ವೇತಾಗೌಡ ಮತ್ತಿಿತರರು ಉಪಸ್ಥಿಿತರಿದ್ದರು.

