ಸುದ್ದಿಮೂಲ ವಾರ್ತೆ
ಹೊಸಕೋಟೆ,ಆ.13: ಅಧಿಕಾರಿಗಳ ನಿರ್ಲಕ್ಷಕ್ಕೆ ಬೆಸ್ಕಾಂ ಕೂಲಿ ಕಾರ್ಮಿಕ ಸಾವನ್ನಪ್ಪಿರುವಂತಹ ಘಟನೆ ಹೊಸಕೋಟೆ ಮಾಲೂರು ಮುಖ್ಯರಸ್ತೆಯ ವಿಜಯನಗರ ಗೇಟ್ನಲ್ಲಿ ನಡೆದಿದೆ. ಕೋಲಾರ ಮೂಲದ ಅನಿಲ್ ಮೃತ ಕಾರ್ಮಿಕನಾಗಿದ್ದು ಕೆಲಸ ಮಾಡುವಾಗ ಕರೆಂಟ್ ಶಾಕ್ ಹೊಡೆದು ವಿದ್ಯುತ್ ಕಂಬದ ಮೇಲೆ ಮೃತಪಟ್ಟಿದ್ದಾನೆ.
ಚೆನ್ನೈ ಸೂಪರ್ ಎಕ್ಸ್ಪ್ರೆಸ್ ಕಾಮಗಾರಿ ಹಿನ್ನೆಲೆ ಹೊಸಕೋಟೆ ಮಾಲೂರು ಮುಖ್ಯರಸ್ತೆಯಲ್ಲಿ ನ ವಿದ್ಯುತ್ ಕಂಬವನ್ನು ಬದಲಾವಣೆ ಮಾಡುವ ಕೆಲಸವನ್ನು ನಾಲ್ಕೈದು ಜನ ಗುತ್ತಿಗೆ ನೌಕರರು ಮಾಡುತ್ತಿದ್ದರು. ವಿದ್ಯುತ್ ಕಂಬದ ಮೇಲೆ ಅನಿಲ್ ಕೆಲಸ ಮಾಡುತ್ತಿದ್ದ ಈ ವೇಳೆ ಬೆಸ್ಕಾಂ ನವರು ದಿಢೀರ್ ವಿದ್ಯುತ್ ಸಂಪರ್ಕವನ್ನು ಆನ್ ಮಾಡಿದ್ದಾರೆ ಇದರಿಂದಾಗಿ ಕಂಬದ ಮೇಲೆ ಕೆಲಸ ಮಾಡುತ್ತಿದ್ದ ಅನಿಲ್ ಶಾಕ್ ಒಡೆದು ಅಲ್ಲೇ ಮೃತಪಟ್ಟಿದ್ದಾನೆ. ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ಅಮಾಯಕ ಕಾರ್ಮಿಕ ಬಲಿಯಾಗಿದ್ದಾನೆ ಹೊಸಕೋಟೆ ಪೊಲೀಸರು ಸ್ಥಳಕ್ಕೆ ಭೇಟಿಯನ್ನು ನೀಡಿ ಪರಿಶೀಲನೆಯನ್ನು ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.