ಸುದ್ದಿಮೂಲ ವಾರ್ತೆ ರಾಯಚೂರು , ಡಿ.22:
ಕೇಂದ್ರದ ವಿಕಸಿತ ಭಾರತ ಗ್ಯಾಾರಂಟಿ ಾರ್ ರೋಜಗಾರ ಮತ್ತು ಅಜೀವಿಕಾ ಮಿಷನ್ ಗ್ರಾಾಮೀಣ ಮಸೂದೆ ತಿರಸ್ಕಾಾರ ಮಾಡುವಂತೆ ಆಗ್ರಹಿಸಿ ಗ್ರಾಾಕೂಸ್ ನೇತೃತ್ವದಲ್ಲಿ ಕೂಲಿ ಕಾರ್ಮಿಕರು ಪ್ರತಿಭಟನಾ ಧರಣಿ ನಡೆಸಿದರು.
ನಗರದ ಟಿಪ್ಪುು ಸುಲ್ತಾಾನ ಉದ್ಯಾಾನವನದಲ್ಲಿ ಗ್ರಾಾಮೀಣ ಮಹಿಳಾ ಕೂಲಿಕಾರ್ಮಿಕರು ಕೇಂದ್ರದ ಹೊಸ ಮಸೂದೆಯನ್ನು ವಿರೋಧಿಸಿದರು ನಂತರ ಸಂಸದರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಗ್ರಾಾಮೀಣ ಭಾಗದಲ್ಲಿ ಬಡವರ ಬದುಕು ಕಟ್ಟಿಿಕೊಳ್ಳುವ ಅತ್ಯಂತ ಮಹತ್ವದ ಯೋಜನೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಾಮೀಣ ಉದ್ಯೋೋಗ ಖಾತ್ರಿಿ ಯೋಜನೆಯನ್ನು ವಿಕಸಿತ ಭಾರತ ಉದ್ಯೋೋಗ ಖಾತ್ರಿಿ ಮತ್ತು ಜೀವನೋಪಾಯ ಮಿಷನ್ ( ವಿಬಿ-ಜಿ ರಾಮ್ ಜೀ ) ಯೋಜನೆಯಾಗಿ ಬದಲಾವಣೆ ಮಾಡುವ ಮೂಲಕ ಕೇಂದ್ರ ಸರ್ಕಾರ ಯೋಜನೆಯ ಮೂಲ ಸ್ವರೂಪವನ್ನೆೆ ಬದಲಿಸಿ ಉದ್ಯೋೋಗ ಹಕ್ಕನ್ನು ಕಸಿದುಕೊಂಡಿದೆ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
125 ದಿನಗಳಿಗೆ ಕೂಲಿ ಹೆಚ್ಚಿಿಸಿದ ಕೇಂದ್ರ ಸರ್ಕಾರ ಅನುದಾನ ಕಡಿತಗೊಳಿಸಿದ್ದು ಈ ಮೊದಲು ಶೇ.90ರಷ್ಟು ರಾಜ್ಯದಿಂದ ಶೇ.10ರಷ್ಟು ಅನುದಾನದಲ್ಲಿ ಜಾರಗೆ ತಂದಿದ್ದ ಈ ಯೋಜನೆ ಈಗ 60 ;40 ರ ಅನುಪಾತದಲ್ಲಿ ಜಾರಿಗೆ ಮುಂದಾಗಿದೆ. 100 ದಿನಗಳಿದ್ದಾಾಗಲೇ 60 ದಿನ ಕೂಲಿ ಕೊಡಲಾಗಿಲ್ಲ ಈಗ ಎಷ್ಟರ ಮಟ್ಟಿಿಗೆ ಕೂಲಿ ನೀಡುತ್ತಾಾರೆ ಎಂದು ಪ್ರಶ್ನಿಿಸಿ ಆಕ್ರೋೋಶ ವ್ಯಕ್ತಪಡಿಸಿದರು.
ವಿರೋಧ ಪಕ್ಷದಲ್ಲಿರುವ ಕಾಂಗ್ರೆೆಸ್ನವರು ಇದನ್ನು ಪ್ರಶ್ನಿಿಸಬೇಕಿತ್ತುಘಿ.ಅಲ್ಲದೆ, ಕೂಲಿಕಾರರಿಗೆ ಆಗುತ್ತಿಿರುವ ಅನ್ಯಾಾಯದ ಬಗ್ಗೆೆ ಮಾತನಾಡಬೇಕಿತ್ತುಘಿ. ಆದರೆ, ಕೇವಲ ಮಹಾತ್ಮಗಾಂಧಿ ಹೆಸರು ಕೈ ಬಿಡಲಾಗಿದೆ ಎಂದು ಪ್ರತಿಭಟಿಸುತ್ತಿಿದ್ದಾಾರೆ ವಿನಃ ಕೂಲಿ ಕಾರ್ಮಿಕರ ಬಗ್ಗೆೆ ಅವರಿಗೆ ಕಾಳಜಿಯೇ ಇಲ್ಲ ಎಂದು ಖಂಡಿಸಿದರು.
ಕೇಂದ್ರ ಸರ್ಕಾರ ಸೂಚಿಸಿದ ಪ್ರದೇಶದ ವಾಸಿಗಳಿಗೆ ಮಾತ್ರ ಸೀಮಿತಗೊಳಿಸಿದ್ದು ಸರಿಯಲ್ಲಘಿ, ರಾಜ್ಯವಾರು ಬಜೆಟ್ ಹಂಚಿಕೆ ಮೂಲಕ ಮಾನವ ದಿನಗಳ ನಿರ್ಧರಿಸುವುದು, ಬಜೆಟ್ ಮೀರಿದರೆ ಅದಕ್ಕೆೆ ರಾಜ್ಯ ಸರ್ಕಾರಗಳೆ ಹೊರೆ ಭರಿಸಬೇಕೆಂಬ ನಿಯಮವೇ ಸರಿಯಲ್ಲಘಿ, ಪಂಚಾಯತಿಗಳ ಹಕ್ಕುಘಿ, ಕೂಲಿಕಾರರ ಕೆಲಸ ಕಸಿದು ಗ್ರಾಾಮ ಸಭೆಗಳ ದುರ್ಬಲಗೊಳಿಸಿ ವಿಕೇಂದ್ರೀಕರಣದ ಹಕ್ಕು ಕಸಿಯಲಾಗಿದೆ ಎಂದು ಆಪಾದಿಸಿದರು.
ತಕ್ಷಣ ಇಂತಹ ಮಸೂದೆಯನ್ನು ಜಾರಿಗೆ ತರಬಾರದು, ತಕ್ಷಣ ಹಿಂಪಡೆಯಲು ಪ್ರಧಾನಿಗೆ ಸಂಸದರು ಒತ್ತಾಾಯಿಸಬೇಕು, ರಾಜ್ಯ ಸರ್ಕಾರಗಳು ವಿರೋಧಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಚಾಲಕರಾದ ಗುರುರಾಜ, ಕೃಷ್ಣಪ್ರಸಾದ, ಸುಮಲತಾ, ಗೋವಿಂದು, ವಿದ್ಯಾಾಪಾಟೀಲ, ಸುಮಲತಾ, ಪಾರ್ವತಿ, ಬಸಮ್ಮಘಿ, ಮಾರೆಮ್ಮಘಿ, ರೂಪಾ, ಹುಚ್ಚಮ್ಮ ಸೇರಿ ಅನೇಕರು ಭಾಗವಹಿಸಿದ್ದರು.
ಕೇಂದ್ರದ ನಡೆ ವಿರುದ್ಧ ಕೂಲಿಕಾರರ ಪ್ರತಿಭಟನೆ ವಿಬಿ – ಜಿ ರಾಮ್ ಜೀ ಮಸೂದೆ ಹಿಂಪಡೆಯಲು ಆಗ್ರಹ

