ಕಲಬುರಗಿ,ಫೆ.18: ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿ 14 ಜನ ಮುಸ್ಲಿಂ ಮುಖಂಡರು ಉರುಸ್ ನೆರವೇರಿಸಿದರು. ಅದೇರೀತಿ ದರ್ಗಾದಲ್ಲಿನ ರಾಘವ ಚೈತನ್ಯ ಲಿಂಗಕ್ಕೆ 15 ಜನರ ಹಿಂದೂ ಮುಖಂಡರು ಪೂಜೆ ಸಲ್ಲಿಸಿದರು. ಈ ಮೂಲಕ ವಕ್ಫ್ ಟ್ರಿಬಿನಲ್ ಬೋರ್ಡ್ ಆದೇಶದಂತೆ ಎರಡು ಸಮುದಾಯದ ಮುಖಂಡರು ಶಾಂತ ರೀತಿಯಲ್ಲಿ ಸಹಕರಿಸಿದರು.
ಮಹಾ ಶಿವರಾತ್ರಿ ಹಿನ್ನಲೆಯಲ್ಲಿ ಕಳೆದ ವರ್ಷ ಜನೇವರಿಯಲ್ಲಿ ನಡೆದ ಘಟನೆ ಹಿನ್ನಲೆಯಲ್ಲಿ ಶನಿವಾರ ಪಟ್ಟಣವು ಸಂಪೂರ್ಣ ಬಂದ ಆಗಿತ್ತು. ಕಳೆದ 4-5 ದಿನಗಳಿಂದ ಇಲ್ಲಿಯೇ ಇದ್ದ ಎಸ್.ಪಿ ಇಶಾ ಪಂತ ಅವರು ಘಟನೆ ಪೂರ್ವ ಮಾಹಿತಿ ಗೊತ್ತು ಇದ್ದ ಪ್ರಯುಕ್ತ ಈ ಭಾರೀ ಯಾವುದೇ ತರಹದ ಅಹಿತಕರ ಘಟನೆ ನಡೆಯದಂತೆ, ಮುಜಾಗೃತವಾಗಿ ಎರಡು ಸಮೂದಾಯದವರ ಪೂಜೆ ಯಶ್ವಸಿಯಾಗಿ ನಡೆಯಿತು.
ಪಟ್ಟಣದಲ್ಲಿ ಮುಂಜಾನೆ 8.30ಕ್ಕೆದರ್ಗಾ ಕಮೀಟಿಯ 14 ಜನರಾದ ಆಸೀಫ ಅನ್ಸಾರಿ, ಮೋಹಿಜ ಕಾರಭಾರಿ, ನೂರೋದ್ದಿನ, ರಿಜವಾನ ಅನ್ಸಾರಿ, ಸಾಧಿಕ ಅನ್ಸಾರಿ, ಶಕೀಲ ಫಯಾಜ, ಮೀನಾಜ ಫರಾಸ , ಮೀನಾಜ ಗಣಿ, ಫರವೇಜ ಅನ್ಸಾರಿ, ಇದ್ರೀಸ ಅನ್ಸಾರಿ, ಮೋಸಾ ಅನ್ಸಾರಿ, ರಬ್ಬಾನಿ ಅನ್ಸಾರಿ ಸೇರಿ ದರ್ಗಾದಲ್ಲಿ ಇರುವ ಸೂಪಿ ಸಂತ ಲಾಡ್ಲೇಶ ಮಶಾಕಗೆ ಪೂಜೆ ಸಲ್ಲಿಸಿ 11.30ಕ್ಕೆ ಹೊರ ಬಂದರು.
ನಂತರ ಮಾತನಾಡಿದ ಕಮೀಟ ಮೋಹಿಜ ಕಾರಭಾರಿ ಮಾತನಾಡಿ ಹಿಂದೂ –ಮುಸ್ಲಿಂ ನವರ ಆಳಂದಲ್ಲಿ ಸಹೋದರಂತೆ ಬಾಳುತ್ತಿದ್ದೇವೆ, ನಮ್ಮಲ್ಲಿ ಯಾವುದೇ ತರಹರ ಜಾತಿ ಭೇದವಿಲ್ಲ, ನಾವು ಪೂಜೆ ಸಲ್ಲಿಸಿದ ತರಹದ ರಾಘವ ಚೇತನ್ಯ ಲಿಂಗಕ್ಕೆ ಹಿಂದೂ ಸಹೋದರರರು ಪೂಜೆ ಸಲ್ಲಿಸಿದರೆ ಅದು ನಮ್ಮಗೂ ಸಲ್ಲುತ್ತದೆ ಅಲ್ಲದೇ ಇಲ್ಲಿ ರಾಜಕೀಯ ಮಾಡುತ್ತಿದ್ದಾರೆ ಅಣ್ಣ ತಮ್ಮರಂತೆ ಇದ್ದವರನ್ನು ರಾಜಕೀಯ ಲಾಭಕ್ಕಾಗಿ ಉಪಯೋಗಿಸುತ್ತಿದ್ದಾರೆ, ನಾವು ನ್ಯಾಯಾಲಯದ ಆದೇಶವನ್ನು ಮಾನ್ಯ ಮಾಡಿದ್ದೇವೆ ಎಂದರು.
ಮಧ್ಯಾಹ್ನ 3 ಗಂಟೆಗೆ ಆಂದೋಲ ಶ್ರೀಗಳ ನೇತೃತ್ವದಲ್ಲಿ ಕಡಗಂಚಿ ಶ್ರೀಗಳು, ಶಾಸಕ ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮೂಡ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಬಿಜೆಪಿ ಮುಖಂಡ ಚಂದ್ರ ಪಾಟೀಲ್, ಬಿಜೆಪಿ ಮಂಡಲ ಅಧ್ಯಕ್ಷ ಆನಂದರಾವ ಪಾಟೀಲ್ ಮತ್ತು ಮಹೇಶ ಗೌಳಿ, ನಾಗನಾಥ ಏಟೆ, ಶಿವಪುತ್ರ ನಡಗೇರಿ,ಮಹೇಶ ಗೊಬ್ಬರ, ಮುರಾರಿ ಮಹಾರಾಜ ಸೇರಿದಂತೆ 15 ಜನರ ತಂಡ ದರ್ಗಾದಲ್ಲಿ ಇರುವ ರಾಘವ ಚೇತನ್ಯ ಲಿಂಗಕ್ಕೆ ರುದ್ರಭಾಷೇಕ, ಸಹಸ್ರಬಿಲಾವರ್ಚನೆ ಮಾಡಿ ಪೂಜೆ ಸಲ್ಲಿಸಿದರು.
ಆಂದೋಲಾ ಕರುಣೇಶ್ವರ ಮಠ ಶ್ರೀ ಸಿದ್ಧಲಿಂಗ ಸ್ವಾಮೀಜಿ ಪೂಜೆ ಸಲ್ಲಿಸಿ ಮಾತನಾಡಿ,
ಆಳಂದ ಲಾಡ್ಲೇಮಶಾಕ ದರ್ಗಾದಲ್ಲಿ ರಾಘವ ಚೇತನ್ಯ ಲಿಂಗವಿದ್ದು, ಅದನ್ನು ಯಾವುದೇ ಕಾರಣಕ್ಕೂ ಹಾಳಾಗುವುದಕ್ಕೆ ಬೀಡುವುದಿಲ್ಲ, ಮುಂದಿನ ರಾಘವ ಚೇತನ್ಯ ಲಿಂಗ ಇದ್ದ ಸ್ಥಳದಲ್ಲಿ ಸುಜೀತವಾದ ಮಂದಿರ ನಿರ್ಮಾಣ ಮಾಡಲು ಸರಕಾರಕ್ಕೆ ಹಾಗೂ ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಶಾಸಕ ಸುಭಾಷ್ ಗುತ್ತೇದಾರ್ ಮಾತನಾಡಿ,
ಆಳಂದ ದರ್ಗಾದಲ್ಲಿ ಇರುವ ರಾಘವ ಚೇತನ್ಯ ಲಿಂಗದಲ್ಲಿ ಜೀವಂತ ಸಮಾಧಿಯಾದ ಸಿದ್ಧಿ ಪುರುಷ ಸ್ಥಳವಿದೆ, ದರ್ಗಾ ಹುಟ್ಟು ಮೊದಲೇ ಇಲ್ಲಿ ಲಿಂಗವಿತ್ತು ಎಂದು ಜಗತ್ತು ಜಾಹೀರವಾಗಿದೆ, ಅದಗೋಸರವೆ ವಿಧಾನಸಭೆ ಬೆಳಗಾವ ಅಧಿವೇಶನದಲ್ಲಿ ರಾಘವ ಚೇತನ್ಯದಲ್ಲಿ ಹೊಲಸು ಮಾಡಿದಕ್ಕೆ ಅಧಿವೇಶನದಲ್ಲಿ ಪ್ರಸ್ಥಾಪಿಸಿದೇ ಅದು ಧರ್ಮಕ್ಕೆ ಆದ ಅನ್ಯಾಯ ಬಗ್ಗೆ ಯಾವುದೇ ರಾಜಕ್ಕೀಯಗೋಸ್ಕರ ಅಲ್ಲ, ಹಿಂದೂ ಆದವರೂ ಧರ್ಮಕ್ಕೆ ಸಂಕಷ್ಟ ಬಂದಾಗ ಸಮಾಜ ಜತೆ ಕೈಜೋಡಿಸಬೇಕು ಎಂದರು.
ಮಹಾಶಿವರಾತ್ರಿ ಮಹಾಸಂಗಮ :
ರಾಘವ ಚೇತನ್ಯ ಲಿಂಗಕ್ಕೆ ಪೂಜೆ ಸಲ್ಲಿಕೆಗೆ ತೆರಳುವ ಮುನ್ನ ಪಟ್ಟಣದ ಹೊರ ವಲಯದ ಪ್ರಗತಿ ಬಡವಾಣೆಯಲ್ಲಿ ಮಧ್ಯಾಹ್ನ 12.30 ರ ಸುಮಾರಿಗೆ ಲಿಂಗ ಬಿಲ್ವಾಚನೆ ಪೂಜೆಯಲ್ಲಿ ಮಾಡಲಾಯಿತು.
ರಾತ್ರೋರಾತ್ರಿ 144 ಕಲಂ ಜಾರಿ :
ದರ್ಗಾದಲ್ಲಿ ಪೂಜೆ ಸಲ್ಲಿಸುವ ಪ್ರಯುಕ್ತ ಇಂದಿನ ರಾತ್ರಿ 10 ಗಂಟೆತನಕ ಯಾವುದೇ ತರಹದ ಮಾಹಿತಿ ಇಲ್ಲದೇ 144ಕಲಂ ಜಾರಿ ಹಿನ್ನಲೆಯಲ್ಲಿ ಸಾರ್ವಜನಿಕರು ಮಹಾ ಶಿವರಾತ್ರಿ ಇದ್ದ ಪ್ರಯುಕ್ತ ಪೂಜೆ ಸಾಮಾನುಗಳು, ಹಣ್ಣು ಹಂಪಲುಗಳು ಸಿಗದೇ ಪರದಾಡುವ ವ್ಯವಸ್ಥೆ ಎದ್ದು ಕಾಣುತ್ತಿತ್ತು. ಹಾಗು ಸಾರ್ವಜನಿಕರು ಬಸ್ಸಿ ವ್ಯವಸ್ಥೆ ಸಂಪೂರ್ಣವಾದ ಬಂದ ಪ್ರಯುಕಲ್ತ ಪುಣೆ, ಸೋಲಾಪೂರ, ಲಾತೂರ ಉಮರ್ಗಾ ಸುತ್ತಮುತ್ತಲಿನ ಹಳ್ಳಿಗಳ ಪ್ರಯಾಣಿಕರು ಜಿಲ್ಲಾ ಆಡಳಿತ ವಿರುದ್ದ ಆಕ್ರೋಶ ವ್ಯಕ್ತ ಪಡಿಸುವ ಪರಿಸ್ಥಿತಿ ಕಂಡು ಬಂತು.
ಜಿಲ್ಲಾಧಿಕಾರಿ ಯಶ್ವಂತ ಗುರುಕರ, ಸಹಾಯಕ ಆಯುಕ್ತ ಮಮತಾಕುಮಾರಿ, ಐಜಿ ಅನುಪಮ ಅಗರವಾಲ್, ಎಸ್ಪಿ ಇಶಾ ಪಂತ, ಹೆಚ್ಚುವರಿ ಎಸ್ಪಿ ಎನ್. ಶ್ರೀನಿಧಿ, ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ಡಿವೈಎಸ್ಪಿ ಗೋಪಿ ಎ ಆರ್, ಸಿಪಿಐ ಬಾಸು ಚವ್ಹಾಣ, ಪಿಐ ಮಹಾದೇವ ಪಂಚಮುಖಿ, ಪಿಎಸ್ಐದಳಾದ ತಿರುಮಲೇಶ ಕುಂಬಾರ ಆಳಂದ ದಿನೇಶ ಟಿ, ನರೋಣಾ, ಭೀಮರಾವ ಬಂಕ್ಲಿ ನಿಂಬರ್ಗಾ, ಪರಶುರಾವ ಮಾದನ ಹಿಪ್ಪರಗಾ ಹಾಗೂ ಸುಮಾರು1800 ಕ್ಕೂ ಹೆಚ್ಚು ಪೋಲಿಸ ಸಿಬ್ಬಂದಿಗಳು ಭದ್ರತಾ ವ್ಯವಸ್ಥೆಗೆ ನಿಯೋಜಿಸಲಾಗಿತ್ತು.