ಸುದ್ದಿಮೂಲ ವಾರ್ತೆ ರಾಯಚೂರು, ಜ.27:
ಆಲಮಟ್ಟಿಿ ಜಲಾಶಯದ ಆಣೆಕಟ್ಟಿಿನ ಎತ್ತರ ಹೆಚ್ಚಳ ಹಾಗೂ ಬಚಾವತ್ ಆಯೋಗ ತೀರ್ಪು ಅನುಷ್ಠಾಾನಗೊಳಿಸುವಂತೆ ಒತ್ತಾಾಯಿಸಿ ೆ.9 ರಂದು ರೈತರ ನಡೆ ಆಲಮಟ್ಟಿಿ ಜಲಾಶಯದ ಕಡೆ ಎಂಬ ಹೋರಾಟ ಹಮ್ಮಿಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತಸೇನೆ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಎ.ಪಾಟೀಲ್ ಮದ್ದರಕಿ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಉತ್ತರ ಕರ್ನಾಟಕದ ರೈತರ ಹಿತದೃಷ್ಟಿಿಯಿಂದ ಈ ಹೋರಾಟ ಆಯೋಜಿಸಲಾಗಿದ್ದು, ವಿವಿಧ ಜಿಲ್ಲೆಗಳ ರೈತರು ಹೆಚ್ಚಿಿನ ಸಂಖ್ಯೆೆಯಲ್ಲಿ ಆಗಮಿಸಿ ಪಾಲ್ಗೊೊಳ್ಳುವಂತೆ ಮನವಿ ಮಾಡಿದರು.
ಯೋಜನೆಯ 3ನೇ ಹಂತದಲ್ಲಿ ಆಲಮಟ್ಟಿಿ ಜಲಾಶಯದ ಎತ್ತರ 14 ಅಡಿ ಹೆಚ್ಚಿಿಸಲು ಅವಕಾಶವಿದ್ದರೂ ಜಾರಿಗೆ ತಾರದ ಕಾರಣ 150 ಟಿಎಂಸಿ ನೀರು ಸಂಗ್ರಹಿಸಿ ಬಳಸುವ ಅವಕಾಶ ಕೈ ತಪ್ಪಿಿದ್ದು ರೈತರಿಗೆ ಅಪಾರ ನಷ್ಟ ಉಂಟಾಗಿದೆ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಮೂರನೇ ಹಂತದಲ್ಲಿ ಒಟ್ಟು 9 ಉಪಯೋಜನೆಗಳಿದ್ದು, ವಿಜಯಪುರ, ಬಾಗಲಕೋಟೆ, ರಾಯಚೂರು, ಕಲಬುರ್ಗಿ, ಯಾದಗಿರಿ, ಕೊಪ್ಪಳ ಮತ್ತು ಗದಗ ಜಿಲ್ಲೆಗಳ ಸುಮಾರು 5 ಲ 49 ಸಾವಿರ ಹೆಕ್ಟೆೆರ್ ಭೂಮಿ ನೀರಾವರಿ ಸೌಲಭ್ಯ ಒದಗಿಸುವ ಗುರಿ ಹೊಂದಿದೆ. ಆದರೆ ಆಲಮಟ್ಟಿಿ ಜಲಾಶಯ ಎತ್ತರ ಹೆಚ್ಚಳಕ್ಕೆೆ ಸಂಬಂಧಿಸಿದ ಆಂಧ್ರ ಸರ್ಕಾರ ತಗಾದೆ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇದ್ದು ಯೋಜನೆ ಇತ್ಯರ್ಥವಾಗದೆ ಉತ್ತರ ಕರ್ನಾಟಕದ ಶೇ.11ರಷ್ಟು ರೈತರಿಗೆ ಅನ್ಯಾಾಯವಾಗುತ್ತಿಿದೆ ಎಂದು ವಿವರಿಸಿದರು. ಹೀಗಾಗಿ, ಇಲ್ಲಿಂದ ವಾಹನಗಳ ಮೂಲಕ ಸಾಗಿ, ಆಲಮಟ್ಟಿಿ 2ಕಿಮೀ ಇರುವಂತಲೇ ಕಾಲ್ನಡಿಗೆ ಮೂಲಕ ಸಾಗಿ ಹೋರಾಟ ಮಾಡಲಾಗುವುದು ಈ ಹೋರಾಟದಲ್ಲಿ ಹೆಚ್ಚಿಿನ ಸಂಖ್ಯೆೆಯಲ್ಲಿ ಭಾಗವಹಿಸುವಂತೆ ಕೋರಿದರು.
ಸುದ್ದಿಗೋಷ್ಠಿಿಯಲ್ಲಿ ಜಿಲ್ಲಾಧ್ಯಕ್ಷ ಇಂದ್ರಜಿತ್ ಯಾದವ್, ಮುಜಾಹಿದ್ ಮರ್ಚೆಡ್, ಮಲ್ಲಿಕಾರ್ಜುನ ಪಾಟೀಲ್, ಮಹಾದೇವ ಯಾದವ್, ಸುರೇಶ್ ಪೂಜಾರಿ ಮರ್ಚೆಡ್, ಆನಂದ ಕುಮಾರ, ಮೂಕಪ್ಪ ಮನ್ಸಲಾಪೂರು, ಯಲ್ಲಪ್ಪ ಅಂಬಿಗರ, ಗಂಗಪ್ಪ ತಿಮ್ಮಾಾಪುರ, ಯಂಕಣ್ಣ, ಬಸವರಾಜ್ ಕರಿಕಾಳ ಇತರರಿದ್ದರು.

