ಸುದ್ದಿಮೂಲ ವಾರ್ತೆ ರಾಯಚೂರು, ಜ.06:
ಸ್ಥಳೀಯ ಯುವಕರಿಗೆ ಕೈಗಾರಿಕೆಗಳಲ್ಲಿನ ಉದ್ಯೋೋಗಗಳಿಗಾಗಿನ ಕೌಶಲ್ಯ ತರಬೇತಿ ಕೇಂದ್ರ ಸ್ಥಾಾಪಿಸಲು ಚಿಂತನೆ ನಡೆದಿದೆ ಎಂದು ರಾಯಚೂರು ಕಾಟನ್ ಮಿಲ್ಲರ್ಸ್ ಅಸೋಸಿಯೇಶನ್ ಅಧ್ಯಕ್ಷ ವಿ.ಲಕ್ಷ್ಮೀರೆಡ್ಡಿಿ ತಿಳಿಸಿದರು.
ನಗರದ ಸಂಘದ ಕಚೇರಿಯಲ್ಲಿ ಸಂಘದ ವರ್ಷದ ಕ್ಯಾಾಲೆಂಡರ್ ಬಿಡುಗಡೆ ಮಾಡಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದರು. ನಮ್ಮ ಜಿಲ್ಲೆೆಯ ಯುವಕರು ಕೈಗಾರಿಕೆ ಪ್ರದೇಶಗಳಲ್ಲಿ ಅರ್ಹತೆ ಇದ್ದರೂ ಕೆಲಸ ಮಾಡಲು ಮುಜುಗರ, ತಾತ್ಸಾಾರ ಮಾಡುತ್ತಿಿರುವುದರಿಂದ ಹೊರ ಜಿಲ್ಲೆೆ, ಪರ ರಾಜ್ಯದವರನ್ನೆೆ ಆಶ್ರಯಿಸುವಂತಾಗಿದೆ. ಸ್ಥಳೀಯ ಯುವಕರು ಐಟಿಐನ ವಿವಿಧ ಭಾಗದಲ್ಲಿ ಕೋರ್ಸ್ ಕಲಿತರೂ ಉದ್ಯೋೋಗ ಅರಸಿಕೊಂಡು ಕಡಿಮೆ ವೇತನಕ್ಕೆೆ ಬೆಂಗಳೂರು, ಮುಂಬೈಗೆ ವಲಸೆ ಹೋಗುತ್ತಿಿದ್ದಾಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಹೀಗಾಗಿ, ನಮ್ಮ ಯುವಕರು ಹಿಂಜರಿಯಬಾರದು ಎಂಬ ಉದ್ದೇಶದಿಂದ ತಮ್ಮ ಸಂಘದಿಂದ ಕೈಗಾರಿಕೆ ಪ್ರದೇಶದಲ್ಲಿ ಮಂಜೂರಾಗಿರುವ ನಿವೇಶನದಲ್ಲಿ ಕೌಶಲ್ಯ ತರಬೇತಿ ಕೇಂದ್ರ ಆರಂಭಿಸಲು ನಿರ್ಧರಿಸಿದ್ದೇವೆ. ಈಗಾಗಲೇ ಕೈಗಾರಿಕೆ ಇಲಾಖೆಯೊಂದಿಗೆ ಚರ್ಚಿಸಿ ತರಬೇತಿ ನೀಡಲು ಕೋರಿದ್ದೇವೆ ಎಂದರು.
ನಮ್ಮ ವಿವಿಧ ಕೈಗಾರಿಕೆ, ಮಿಲ್ಗಳಲ್ಲಿ ಎಲೆಕ್ಟ್ರಿಿಶಿಯನ್, ಫಿಟ್ಟರ್, ಲಘು ತಾಂತ್ರಿಿಕ ಕೆಲಸಗಳಿವೆ ಆದರೆ ಯಾರೂ ಲಭ್ಯವಾಗುತ್ತಿಿಲ್ಲ ಹೀಗಾಗಿ ಈ ಯೋಚನೆ ಮಾಡಿದ್ದಾಾಗಿ ಹೇಳಿದರು.
ರಾಯಚೂರಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಾಪಿಸಲು ಉದ್ದೇಶಿಸಿದ್ದ ಜವಳಿ ಪಾರ್ಕ್ಗೆ ಯಾರೂ ಟೆಂಡರ್ದಾರರು, ಉದ್ಯಮಿಗಳು ಆಸಕ್ತಿಿ ತೋರದ ಕಾರಣ ಸರ್ಕಾರವೇ ನಿರ್ವಹಿಸಲು ಕೋರಿದ್ದು ಅದಕ್ಕೆೆ ಜಿಲ್ಲೆೆಯ ಸಚಿವರು ಸರ್ಕಾರದ ಗಮನ ಸೆಳೆದು ಖಾಸಗಿ ಸಹಭಾಗಿತ್ವ ಕೈ ಬಿಡುವಂತೆ ಮಾಡುವಲ್ಲಿ ಯಶಸ್ವಿಿಯಾಗಿದ್ದು ಆದೇಶ ಮಾಡುವುದೊಂದೆ ಬಾಕಿ ಇದೆ ಎಂದ ಅವರು, ಇದರಿಂದ ಸುಮಾರು 5 ಸಾವಿರ ಉದ್ಯೋೋಗ ಲಭಿಸಲಿದೆ ಎಂದು ತಿಳಿಸಿದರು.
ಇ-ಖಾತಾ ನೀಡುವ ಸಮಸ್ಯೆೆ ಇತ್ಯರ್ಥ ಪಡಿಸಲು ಜಿಲ್ಲಾಾಧಿಕಾರಿ 15 ದಿನಗಳಲ್ಲಿ ಸಮಸ್ಯೆೆ ಪರಿಹಾರಕ್ಕೆೆ ಮುಂದಾಗುವುದಾಗಿ ಭರವಸೆ ನೀಡಿದ್ದಾಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಿಯಲ್ಲಿ ಸಂಘದ ಶೈಲೇಶ್ ಕುಮಾರ ಧೋಕಾ, ಸಿದ್ದನಗೌಡ ಗಾರಲದಿನ್ನಿಿಘಿ, ವಿಜಯಕುಮಾರರೆಡ್ಡಿಿ ಇದ್ದರು.
ಸ್ಥಳೀಯ ಯುವಕರಿಗೆ ಕೌಶಲ್ಯಕ್ಕಾಗಿ ತರಬೇತಿ ಕೇಂದ್ರ ಆರಂಭಕ್ಕೆ ಚಿಂತನೆ – ಲಕ್ಷ್ಮೀರೆಡ್ಡಿ

