ಸುದ್ದಿಮೂಲ ವಾರ್ತೆ ರಾಯಚೂರು, ೆ.09:
ಜಿಲ್ಲೆಯಲ್ಲಿ ಕುರುಬ ಸಮಾಜದ ವಸತಿ ನಿಲಯ ನಿರ್ಮಾಣಕ್ಕೆೆ 14 ಗುಂಟೆ ಭೂಮಿ, ಕನಕ ಭವನಕ್ಕೆೆ ಎಕರೆ ಭೂಮಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಂಜೂರು ಮಾಡಿದೆ ಎಂದು ಶ್ರೇಷ್ಠ ಕನಕದಾಸ ವೃತ್ತ ಉದ್ಯಾಾವನ ಸಮಿತಿ ಅಧ್ಯಕ್ಷ ಕೆ. ಆಂಜನೇಯ್ಯ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಮುಖ್ಯಮಂತ್ರಿಿ ಸಿದ್ದರಾಮಯ್ಯನವರಿಗೆ ಈ ಕುರಿತಂತೆ ಮನವಿ ಸಲ್ಲಿಸಿದ ಮೇರೆಗೆ ಸರ್ಕಾರ ಕುರುಬ ಸಮಾಜಕ್ಕೆೆ ಭೂಮಿಯನ್ನು ಮಂಜೂರು ಮಾಡಿದೆ. ಅಲ್ಲದೆ, ಕನಕಭವನ ನಿರ್ಮಾಣಕ್ಕೂ ಭೂಮಿ ಮಂಜೂರಾಗಿದೆ. ಸುಮಾರು 1 ಕೋ 50 ಲಕ್ಷ ರಸ್ತೆೆ ನಿರ್ಮಾಣಕ್ಕೆೆ ಅನುದಾನ ನೀಡಿದ್ದಾಾರೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ, ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರುಗಳು ಬೆಂಬಲಿಸಿದ್ದರಿಂದ ಮಂಜೂರಿಗೆ ಕಾರಣವಾಗಿದೆ. ಶೀಘ್ರದಲ್ಲಿಯೇ ಕನಕ ಭವನ ಹಾಗೂ ರಾಕೇಶ ಸಿದ್ದರಾಮಯ್ಯ ವಸತಿ ನಿಲಯ ಕಟ್ಟಡ ಶಂಕುಸ್ಥಾಾಪನೆ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದರು.
ಅಲ್ಲದೇ ಸಿರವಾರ ಮತ್ತು ದೇವದುರ್ಗ ತಾಲೂಕಿನಲ್ಲಿ ದಾಸಶ್ರೇೇಷ್ಠ ಕನಕದಾಸರ ಕಂಚಿನ ಪ್ರತಿಮೆ ನಿರ್ಮಾಣ ಮಾಡಲು 50 ಲಕ್ಷ ರೂ ನೀಡಿದ್ದಾಾರೆ ಈ ಹಿನ್ನೆೆಲೆಯಲ್ಲಿ ಸರ್ಕಾರದ ಸಚಿವರು ಸೇರಿದಂತೆ 111 ಜನರಿಗೆ ಕಂಬಳಿ ಹಾಕಿ ಸನ್ಮಾಾನಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಿಯಲ್ಲಿ ಅಶೋಕಕುಮಾರ, ಆಂಜಿನೇಯ್ಯ ಇದ್ದರು.

