ಸುದ್ದಿಮೂಲ ವಾರ್ತೆ ರಾಯಚೂರು, ಜ.03:
ರಾಯಚೂರು ನಗರದ ನೀರಬಾವಿ ಕುಂಟಾ ಕೆರೆಗೆ ಸೇರಿದ ಜಮೀನು ಸಮೀಕ್ಷೆೆಗೆ ಮುಂದಾದ ಅಧಿಕಾರಿಗಳಿಗೆ ತಲೆ ಎತ್ತಿಿದ ಅನಧಿಕೃತ ಲೇಔಟ್ಗಳ ಗೊಂದಲ ಸೃಷ್ಟಿಿಸಿವೆ.
ಕಳೆದ ಮೂರು ದಿನಗಳ ಹಿಂದೆ ಸ್ಥಳಕ್ಕೆೆ ತೆರಳಿದ್ದ ಮಹಾನಗರ ಪಾಲಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ನೀರಬಾವಿ ಕುಂಟಾ ಕೆರೆಯ ಅಭಿವೃದ್ದಿ ಹಿನ್ನೆೆಲೆಯಲ್ಲಿ ಜಂಟಿಯಾಗಿ ಸರ್ವೆ ಆರಂಭಿಸಲು ಮುಂದಾದರು. ಆಗ ಅಲ್ಲಿನ ನಿವಾಸಿಗಳು, ಸಂಘಟನೆ ಪ್ರತಿನಿಧಿಗಳು ಸರ್ವೆಗೆ ಆಕ್ಷೇಪಿಸಿದರು.
ಈಗಾಗಲೇ ಇಲ್ಲಿ ಕೆಲವರು ಮನೆಗಳ ಕಟ್ಟಿಿದ್ದಾಾರೆ, ಬಡಾವಣೆ ನಿರ್ಮಾಣವಾಗಿದೆ, ಅಂಬೇಡ್ಕರ್ ಭವನ, ಗಾಂಧಿ ಭವನಕ್ಕೂ ಜಾಗ ಹಂಚಿಕೆ ಮಾಡಲಾಗಿದೆ. ಈಗ ಸಮೀಕ್ಷೆೆಗೆ ತೆರಳಿದ ಎರಡೂ ಇಲಾಖೆಯ ಅಧಿಕಾರಿಗಳು ಇಕ್ಕಟ್ಟಿಿಗೆ ಸಿಲುಕುವಂತಾಯಿತು.
ಸರ್ವೆ ನಂ 22ರಲ್ಲಿ ಸುಮಾರು 16 ಎಕರೆ ಜಮೀನಿನಲ್ಲಿ ಒತ್ತುವರಿ ಆಗಿರುವುದು ಗಮನಕ್ಕೆೆ ಬಂದಿದೆ. ತಮಗೆ ಹಂಚಿಕೆಯಾಗಿರುವ ಜಾಗ ಬಿಟ್ಟು ಸಮೀಕ್ಷೆೆ ಮಾಡಲು ನಿವಾಸಿಗಳು, ದಲಿತ ಪರ ಸಂಘಟನೆಕಾರರು ಒತ್ತಾಾಯಿಸಿದಾಗ ಗೊಂದಲಕ್ಕೆೆ ಬಿದ್ದ ಸಿಬ್ಬಂದಿ ಗುರುತು ಹಾಕಲು ಆಗದೆ ಮರಳಿದ್ದಾಾರೆ.
ಈಗಾಗಲೇ ಸರ್ವೆ ಆಗಿದ್ದು ಜಂಟಿ ಸಮೀಕ್ಷೆೆ ವರದಿ ಸಲ್ಲಿಕೆಯಾಗಬೇಕಾಗಿದೆ. ಆದರೆ, ಇಲ್ಲಿಯೇ ಕೆರೆ ನಿರ್ಮಿಸುವ ಸಿದ್ದತೆ ನಡೆದಿದ್ದು ಇತ್ತೀಚೆಗೆ ಸಚಿವ ಎನ್.ಎಸ್.ಬೋಸರಾಜ್ ಅವರು ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದಾಾರೆ. ಇದೀಗ ಇಲ್ಲಿ ಇಷ್ಟೆೆಲ್ಲ ಗೊಂದಲಗಳ ಮಧ್ಯೆೆ ಕಾಮಗಾರಿ ಆರಂಭಿಸಲು ಸಾಧ್ಯವೆ ಎಂಬ ಪ್ರಶ್ನೆೆಗೆ ಉತ್ತರ ಸಿಗಬೇಕಿದೆ.
ನೀರಬಾವಿಕುಂಟಾ ಬಳಿ ಜಮೀನು ಸರ್ವೆ, ಗೊಂದಲ

