ಸುದ್ದಿಮೂಲ ವಾರ್ತೆ
ನೆಲಮಂಗಲ, ಅ. 10 : ಶಿಕ್ಷಣ ಫೌಂಡೇಶನ್ ವತಿಯಿಂದ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಡಿ ಸಂಪೂರ್ಣ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮಕ್ಕೆ ಜಿಲ್ಲಾ ಸಂಯೋಜಕರಾದ ಗಂಗಾಧರ್ ಚಾಲನೆ ನೀಡಿದರು.
ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಗ್ರಾಮದಲ್ಲಿ ಸಂಪೂರ್ಣ ತಂತ್ರಜ್ಞಾನ ಸಾಕ್ಷರತೆ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ 16 ರಿಂದ 60 ವರ್ಷದಲ್ಲಿನ ಸಮುದಾಯದವರಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಶಿಬಿರದಲ್ಲಿ ಬೇಸ್ಲೈನ್ ಸರ್ವೇಯನ್ನು ಮಾಡಿ ಅವರಿಗೆ ಸ್ಮಾರ್ಟ್ ಫೋನ್, ಡಿಜಿಟಲ್ ಡಿವೈಸ್, ಇಂಟರ್ನೆಟ್ ಹಾಗೂ ನಾಗರಿಕರಿಗೆ ಬೇಕಾದ ಪ್ರಾಥಮಿಕ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ.
ಜಾಗೃತಿ ಶಿಬಿರದಲ್ಲಿ.ಪಿ.ಡಿ.ಓ. ಶೀಲಾ, ಜಿಲ್ಲಾ ಸಂಯೋಜಕರು ಕುಮಾರನಾಯ್ಕ, ತಾಲೂಕು ಸಂಯೋಜಕ ನವೀನ್ ಕುಮಾರ್, ಗ್ರಂಥ ಪಾಲಕರ ಚಿಕ್ಕನರಸಿಂಹಯ್ಯ, ಸಂತೋಷ್, ಪಂಚಾಯಿತಿ ಸಿಬ್ಬಂದಿಗಳು ಹಾಗೂ ಸಮುದಾಯದವರು ಭಾಗವಹಿಸಿದ್ದರು.