ಬೇತಮಂಗಲ,ಜೂ.19 : ಗ್ರಾಮಗಳ ಅಬಿವೃದ್ದಿಯ ಮೇಲೆ ವ್ಯಾಪಕವಾಗಿ ಕೇಂದ್ರಿಕರಿಸುವ ಗ್ರಾಮೀಣ ಅಭಿವೃದ್ದಿ ಕಾರ್ಯಕ್ರಮವಾಗಿದ್ದು, ಸಾಮಾಜಿಕ, ಸಾಂಸ್ಕೃತಿಕವಾಗಿ ಹಳ್ಳಿ ಸಮುದಾಯದ ಜನರಲ್ಲಿ ಸಾಮಾಜಿಕ ಚಲನಶೀಲತೆ ಪ್ರೇರಿಪಿಸುತ್ತದೆ ಎಂದು ಸಂಸದ ಎಸ್. ಮುನಿಸ್ವಾಮಿ ಹೇಳಿದರು.
ಪಟ್ಟಣದ ಸಮೀಪದ ಕ್ಯಾಸಂಬಳ್ಳಿ ಗ್ರಾಮದಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅಸ್ತಿತ್ವದಲ್ಲಿರುವ ಯೋಜನೆಗಳ ಅನುಷ್ಠಾನದ ಮೂಲಕ ಆದರ್ಶ ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ದಿ ಪಡೆಸಿ ಮಾದರಿ ಗ್ರಾಮಗಳನ್ನಾಗಿ ಪರಿವರ್ತಿಸುವುದಾಗಿದೆ. ಸರ್ಕಾರದಲ್ಲಿರುವ ಪ್ರತಿಯೊಂದು ಇಲಾಖೆಯಲ್ಲಿ ಲಭ್ಯವಿರುವ ಮೂಲಭೂತ ಸೌಲಭ್ಯಗಳನ್ನು ಜನರಿಗೆ ತಲುಪಿಸುವುದರ ನಿಟ್ಟಿನಲ್ಲಿ ಆದರ್ಶ ಗ್ರಾಮವನ್ನು ಕಾಣಲು ಸಾದ್ಯ ಎಂದರು.
ಈ ಕಾರ್ಯಕ್ರಮದಲ್ಲಿ ಸುಮಾರು 35ಕ್ಕೂ ಆಧಿಕ ಇಲಾಖೆಗಳು ಪಾಲ್ಗೊಂಡಿದ್ದವು. , ಆಯಾ ಇಲಾಖೆಗೆ ಸಂಬಂದ ಪಟ್ಟ ಸೌಲಭ್ಯಗಳನ್ನು ಜನರಿಗೆ ತಲುಪಿಸಬೇಕೆಂದು ಇಲಾಖೆಯ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಮಹಿಳೆಯರಿಗೆ ಉಚಿತ ಟೈಲರಿಂಗ್ ಮಿಷನ್, ಅಂಗವಿಕಲರಿಗೆ ಉಚಿತ ವೀಲ್ಚೇರ್ ಮ ತ್ತು ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಕ್ರೀಡಾಕಿಟ್, ಮಹಿಳೆಯರಿಗೆ 33 ಲಕ್ಷ ರೂ. ಸಾಲ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮುಖ್ಯ ಕಾರ್ಯನಿರ್ವಹಕ ರಿತೇಶ್ಕುಮಾರ್, ಮಾಜಿ ಶಾಸಕ ವೈ,ಸಂಪಂಗಿ, ಜಿಪಂ ಮಾಜಿ ಸದಸ್ಯ ಜಯಪ್ರಕಾಶ್ ನಾಯ್ಡು, ವೈ,ಎಸ್. ಅಶ್ವಿನಿ ಸಂಪಂಗಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮಹೇಶ್, ಗ್ರಾಪಂ ಅಧ್ಯಕ್ಷೆ ವಿಜಿಯಮ್ಮ, ಉಪಾದ್ಯಕ್ಷೆ ಅಂಜಲಿ ಪ್ರತಾಪ್, ಸೇರಿದಂತೆ ಆಯಾ ಇಲಾಖೆಯ ಅಧಿಕಾರಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ಫೋಟೋ – ಬೇತಮಂಗಲದ ಸಮೀಪದ ಕ್ಯಾಸಂಬಳ್ಳಿ ಗ್ರಾಮದಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.