ಬೆಂಗಳೂರು, ಜು, ೨೩; ದೋಷರಹಿತ ಕರಕುಶಲತೆ, ಅತ್ಯಾಧುನಿಕ ವಿನ್ಯಾಸಗಳು, ಸುಸ್ಥಿರ ನಾವೀನ್ಯತೆಯನ್ನು ಸಂಯೋಜಿಸುವ ಕ್ರಾಂತಿಕಾರಕವಾಗಿ ಪ್ರಯೋಗಾಲಯದ ಮೂಲಕ ಉತ್ಪಾದಿಸುವ ಇಡಿಸಿ ಬ್ರ್ಯಾಂಡ್ ನ ವಜ್ರಾಭರಣ ಇದೀಗ ಮಾರುಕಟ್ಟೆ ಪ್ರವೇಶಿಸಿದೆ. ಇದಕ್ಕಾಗಿ ಎಥಿಕಲ್ ಡೈಮಂಡ್ ಕಂಪೆನಿ ಅಸ್ಥಿತ್ವಕ್ಕೆ ಬಂದಿದೆ.
ವಜ್ರಾಭರಣ ವಲಯದಲ್ಲಿ ಉತ್ತಮ ಜಗತ್ತನ್ನು ರೂಪಿಸಲು ಕಂಪೆನಿ ಸನ್ನದ್ಧವಾಗಿದ್ದು, ವಿವೇಚನೆಯುಳ್ಳ ಗ್ರಾಹಕರಿಗೆ ಪ್ರಯೋಗಾಲಯದಲ್ಲಿ ಉತ್ಪಾದಿಸಿದ ವಜ್ರಗಳಲ್ಲಿ ಉತ್ತಮ, ಸೊಗಸಾದ ಶ್ರೇಣಿಯನ್ನು ನೀಡುವ ನಿಟ್ಟಿನಲ್ಲಿ ಇಡಿಸಿ ಮುಂಚೂಣಿಯಾಗಿ ಹೊರ ಹೊಮ್ಮಿದೆ.
ಆಭರಣಗಳ ಅನಾವರಣ ಕಾರ್ಯಕ್ರಮದಲ್ಲಿ ಬ್ರಿಕ್ಸ್ ರಾಷ್ಟ್ರಗಳ ಸಿ.ಕೆ.ಪಿ.ಸಿ ಗ್ರೂಪ್ ನ ಅಧ್ಯಕ್ಷ ಡಾ. ಕೆ.ಜೆ. ಪುರುಷೋತ್ತಮ್, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಎಸ್. ಮುರುಗನ್, ಸ್ಯಾಂಡಲ್ ವುಡ್ ನಟಿ ಆದಿತಿ ಪ್ರಭುದೇವ, ಸಂಸ್ಥೆಯ ಮುಖ್ಯಸ್ಥರಾದ ಅಭಯ್ ರಂಕಾ, ಅಮೃತ್ ಮೆಹ್ತಾ, ಪೂಜಾ ಮೆಹ್ತಾ ಅವರ ಸಮ್ಮುಖದಲ್ಲಿ ನಗರದ ಯಟಿಸಿ ಗಾರ್ಡೇನಿಯಾದಲ್ಲಿ ಮಾಡೆಲ್ ಗಳು ಆಧುನಿಕ ಪ್ರಯೋಗಾಲಯದ ವಜ್ರಗಳನ್ನು ಧರಿಸಿ ಗಮನ ಸೆಳೆದರು.
ಅತ್ಯಾಧುನಿಕ ತಂತ್ರಜ್ಞಾನದ ಶಕ್ತಿಯನ್ನು ಬಳಸಿಕೊಂಡು ಆಭರಣಗಳ ಸಂಗ್ರಹವನ್ನು ರಚಿಸಿದೆ. ಇದು ನೈಸರ್ಗಿಕ ವಜ್ರಗಳಂತೆಯೇ ಪ್ರಭಾವ ಹೊಂದಿದ್ದು, ಅದೇ ತೇಜಸ್ಸು, ಸ್ಪಷ್ಟತೆ ಮತ್ತು ಸೌಂದರ್ಯವನ್ನು ಇವು ಪ್ರತಿಫಲಿಸುತ್ತವೆ. ಆರಂಭಿಕವಾಗಿ ಮದುವೆ ನಿಶ್ಚಿತಾರ್ಥದ ಉಂಗುರ, ಕಿವಿಯೋಲೆ, ನಕ್ಲೆಸ್ ಮತ್ತು ಬ್ರೇಸ್ ಲೇಟ್ ಗಳಲ್ಲಿ ಸೊಬಗು ಮತ್ತು ಉತ್ಕೃಷ್ಟತೆಯನ್ನು ಸಾಕಾರಗೊಳಿಸಿದೆ. ನುರಿತ ಕುಶಲ ಕರ್ಮಿಗಳು ಸಮಕಾಲೀನ ವಿನ್ಯಾಸದೊಂದಿಗೆ ಸಾಂಪ್ರದಾಯಿಕ ತಂತ್ರಗಳನ್ನು ಸಹ ಅನುಸರಿಸಲಾಗಿದೆ. ಗ್ರಾಹಕರು ಕೈಗೆಟುಕುವ ಬೆಲೆಯಲ್ಲಿ ಐಶಾರಾಮಿ ಆಭರಣಗಳನ್ನು ಹೊಂದಬಹುದಾಗಿದೆ.
ಸಂಸ್ಥೆಯ ಮುಖ್ಯಸ್ಥರಾದ ಅಭಯ್ ರಂಕಾ ಮಾತನಾಡಿ, ನಮ್ಮ ಬ್ರ್ಯಾಂಡ್ ಅನ್ನು ಜಗತ್ತಿಗೆ ಅನಾವರಣಗೊಳಿಸಲು ಇಡಿಸಿ ಉತ್ಸುಕವಾಗಿದೆ. ಶ್ರೀಮಂತ ಭವಿಷ್ಯದ ಅನ್ವೇಷಣೆಗಾಗಿ ಉತ್ಸಾಹಿಗಳು, ಟ್ರೆಂಡ್ ಸೆಟ್ಟರ್ ಗಳು ಮತ್ತು ಜಾಗೃತ ಗ್ರಾಹಕರನ್ನು ಆಹ್ವಾನಿಸುತ್ತಿರುವುದಾಗಿ ಹೇಳಿದರು.
ಅಮೃತ್ ಮೆಹ್ತಾ ಮಾತನಾಡಿ, ಗ್ರಾಹಕರು ಪ್ರಯೋಗಾಲಯದಲ್ಲಿ ಉತ್ಪಾದಿಸಿದ ವಜ್ರಾಭರಣಗಳನ್ನು ಮಳಿಗೆಯಲ್ಲಿ ವೀಕ್ಷಿಸಿ ಅದರ ಸಾಚಾತನವನ್ನು ಪರೀಕ್ಷಿಸಬಹುದು. ಯುವ ಸಮೂಹಕ್ಕೆ ಇದು ಹೆಚ್ಚು ಆಕರ್ಷಣೀಯವಾಗಿದೆ. ಇದರ ನೈಜ ಮತ್ತು ಅಸಲಿತನ ಮನವರಿಕೆಯಾದ ನಂತರ ತಮಗೆ ಒಪ್ಪುವ ಮತ್ತು ಕೈಗೆಟುವ ದರದಲ್ಲಿ ಖರೀದಿಸಬಹುದಾಗಿದೆ ಎಂದರು.
ಪೂಜಾ ಮೆಹ್ತಾ ಮಾತನಾಡಿ, ಉಂಗುರ, ಮದುವೆ ಆಭರಣಗಳು ಲಭ್ಯವಿದೆ. ನಿರ್ದಿಷ್ಟವಾಗಿ ಇಂತಹದ್ದೇ ವಜ್ರಾಭರಣ ಬೇಕು ಎಂದರೆ ತಯಾರಿಸಿ ಕೊಡುತ್ತೇವೆ ಎಂದರು.
ಚಿತ್ರನಟಿ ಆದಿತಿ ಪ್ರಭುದೇವ ಮಾತನಾಡಿ, ಇಡಿಸಿ ಕಂಪೆನಿಯ ಪ್ರಯೋಗಾಲಯದಲ್ಲಿ ತಯಾರಿಸಿದ ವಜ್ರಾಭರಣಗಳನ್ನು ನೇರವಾಗಿ ಗ್ರಾಹಕರಿಗೆ ಬೆಲೆ ಕಡಿಮೆಯಾಗಲಿದ್ದು, ಸುಲಭ ದರದಲ್ಲಿ ಲಭ್ಯವಾಗಲಿದೆ ಎಂದು ಹೇಳಿದರು.