ಸುದ್ದಿಮೂಲ ವಾರ್ತೆ ನವದೆಹಲಿ, ಡಿ.09:
ಸುಪ್ರೀೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದಿದ್ದ ವಕೀಲ ರಾಕೇಶ್ ಕಿಶೋರ್ ಮೇಲೆ ಬುಧವಾರ ದೆಹಲಿಯಲ್ಲಿ ವ್ಯಕ್ತಿಿಯೊಬ್ಬರು ಚಪ್ಪಲ್ಲಿಯಿಂದ ಹೊಡೆದಿದ್ದಾರೆ.
ದೆಹಲಿಯ ಕರ್ಕರ್ದೂಮ ಕೋರ್ಟ್ ಆವರಣದಲ್ಲಿ ಕೆಲವರು ರಾಕೇಶ್ ಮೇಲೆ ಚಪ್ಪಲಿಯಿಂದ ಹೊಡೆದಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿಿದೆ.
ಚಪ್ಪಲಿಯಿಂದ ಹೊಡೆದ ವ್ಯಕ್ತಿಿ ಮೇಲೆ ರಾಕೇಶ್ ಕಿಶೋರ್ ಕೂಡ ಮರು ಹಲ್ಲೆ ನಡೆಸಲು ಮುಂದಾಗಿರುವ ದೃಶ್ಯ ವಿಡಿಯೋದಲ್ಲಿ ಇದೆ. ರಾಕೇಶ್ ಕಿಶೋರ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಿಯ ಗುರುತು ಇನ್ನು ಪತ್ತೆೆಯಾಗಿಲ್ಲ ಎಂದು ತಿಳಿದು ಬಂದಿದೆ.
ಸುಪ್ರೀೀಂಕೋರ್ಟ್ ಮುಖ್ಯ ನ್ಯಾಾಯಮೂರ್ತಿಯಾಗಿದ್ದ ಬಿ. ಆರ್. ಗವಾಯಿ ಅವರ ಮೇಲೆ ಕಲಾಪದ ವೇಳೆಯೇ ರಾಕೇಶ್ ಕಿಶೋರ್ ಶೂ ಎಸೆದಿದ್ದರು. ಇದು ದೇಶ ವ್ಯಾಾಪಿ ವ್ಯಾಾಪಕ ಟೀಕೆಗೆ ಕಾರಣವಾಗಿತ್ತು. ಅಲ್ಲದೆ ರಾಕೇಶ್ ವಿರುದ್ಧ ಇಡೀ ರಾಷ್ಟ್ರದಲ್ಲಿ ಪ್ರತಿಭಟನೆ ನಡೆದಿತ್ತು.
ಮುಖ್ಯ ನ್ಯಾಾ. ಬಿ.ಆರ್.ಗವಾಯಿ ಅವರು ಈಗ ನಿವೃತ್ತರಾಗಿದ್ದಾರೆ.

