ಸುದ್ದಿಮೂಲ ವಾರ್ತೆ ಮಾನ್ವಿ, ನ.04:
ವಕೀಲರು ಹಾಗೂ ನ್ಯಾಾಯಾಧೀಶರು ದೇಶದ ಕಾನೂನು ಹಾಗೂ ಸಂವಿಧಾನದ ಜ್ಞಾನ ಹೊಂದುವುದು ಅಗತ್ಯವಾಗಿದೆ ಎಂದು ಮಾನ್ವಿಿ ನ್ಯಾಾಯಾಲಯದ ಹಿರಿಯ ಶ್ರೇೇಣಿ ಸಿವಿಲ್ ನ್ಯಾಾಯಧೀಶರಾದ ಶಿವರಾಜ ವಿ. ಸಿದ್ದೇಶ್ವರ ಹೇಳಿದರು.
ಬುಧವಾರ ವಕೀಲರ ಸಂಘದ ಸಭಾಂಗಣದಲ್ಲಿ ಹಮ್ಮಿಿಕೊಂಡಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡುತ್ತಿಿದ್ದರು.
ಭಾರತ ದೇಶದ ಪ್ರಥಮ ರಾಷ್ಟ್ರಪತಿಗಳಾಗಿದ್ದ ಡಾ.ರಾಜೇಂದ್ರ ಪ್ರಸಾದ ಅವರು ವಕೀಲರಾಗಿದ್ದರು. ಆದ್ದರಿಂದ ಅವರ ಜನ್ಮದಿನವನ್ನು ವಕೀಲರ ದಿನಾಚರಣೆಯನ್ನಾಾಗಿ ಆಚರಿಸಲಾಗುತ್ತಿಿದೆ. ಜಗತ್ತಿಿನಲ್ಲಿ ಜ್ಞಾನಕ್ಕಿಿಂತಲೂ ಮಿಗಿಲಾದದು ಯಾವುದು ಇಲ್ಲ. ನ್ಯಾಾಯವಾದಿಗಳು ಕಾನೂನಿನ ಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ತಮ್ಮಲ್ಲಿಗೆ ಬರುವ ಕಕ್ಷಿದಾರರಿಗೆ ನ್ಯಾಾಯ ಸಿಗುವಂತೆ ಪ್ರಾಾಮಾಣಿಕ ಪ್ರಯತ್ನ ಮಾಡಬೇಕು. ವಕೀಲರು ಕಾನೂನಿನ ಜ್ಞಾನದ ಜೊತೆಗೆ ಬದುಕಿನ ಜ್ಞಾನವನ್ನು ಪಡೆದುಕೊಂಡಲ್ಲಿ ಜೀವನದಲ್ಲಿ ಪ್ರಬುದ್ದರಾಗಿ ಬದುಕುವುದಕ್ಕೆೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಿವಿಲ್ ನ್ಯಾಾಯಾಧೀಶರಾದ ಆನಂದ ಹೆಚ್.ಕಣ್ಣೂರ್ ಮಾತನಾಡಿ ವಕೀಲ ವೃತ್ತಿಿ ಅತ್ಯಂತ ಶ್ರೇೇಷ್ಟವಾದ ವೃತ್ತಿಿಯಾಗಿದೆ. ದೇಶ ಕಟ್ಟುವಲ್ಲಿ ವಕೀಲರ ಪಾತ್ರ ಮಹಾತ್ವದಾಗಿದೆ. ವಕೀಲರು ನಿರಂತರವಾಗಿ ಅಧ್ಯಯನ ಶೀಲರಾಗಿ ಪ್ರಾಾಮಾಣಿಕತೆ ಮತ್ತು ಶಿಸ್ತು ಬದ್ದ ವಕೀಲ ವೃತ್ತಿಿ ನಡೆಸಬೇಕು ಎಂದು ತಿಳಿಸಿದರು.
ವಕೀಲ ವೃತ್ತಿಿಯಲ್ಲಿ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿಿರುವ ಹಿರಿಯ ವಕೀಲರನ್ನು ಸನ್ಮಾಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾನ್ವಿಿ ವಕೀಲರ ಸಂಘದ ಅಧ್ಯಕ್ಷರಾದ ರವಿಕುಮಾರ ಪಾಟೀಲ್, ಸಹಾಯಕ ಸರ್ಕಾರಿ ಅಭಿಯೋಜಕರಾದ ಅರ್ಚನಾ ಹನುಮೇಶ, ವಕೀಲರ ಸಂಘದ ಉಪಾಧ್ಯಕ್ಷರಾದ ವಿಶ್ವನಾಥ ರಾಯಪ್ಪ ,ಶಿವಪ್ಪ ನಾಯಕ ಸುಂಕನೂರು, ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಹಿರೇಬಾದರದಿನ್ನಿಿ, ಚಂದ್ರಕಲಾ, ಗೂಗಲ್ ನಾಗರಾಜ, ಸ್ಟೆೆಲ್ಲಾ ಶಾರ್ಲೆಟ್, ಹಿರಿಯ ನ್ಯಾಾಯವಾದಿಗಳಾದ ಎ.ಬಿ.ಉಪ್ಪಳಮಠ, ಶೇಖರಪ್ಪ ಪಾಟೀಲ್, ಬಿ.ಚನ್ನನಗೌಡ ಪಾಟೀಲ್, ಬಿ.ಕೆ.ಅಮರೇಶಪ್ಪ, ಮಲ್ಲಿಕಾರ್ಜುನ ಪಾಟೀಲ್, ಸೇರಿದಂತೆ ಮುಂತಾದವರು ಉಪಸ್ಥಿಿತರಿದ್ದರು.
ಮಾನ್ವಿಯಲ್ಲಿ ವಕೀಲರ ದಿನಾಚರಣೆ ವಕೀಲರು ದೇಶದ ಕಾನೂನು ಹಾಗೂ ಸಂವಿಧಾನದ ಜ್ಞಾನ ಹೊಂದುವುದು ಅಗತ್ಯ- ನ್ಯಾ. ಶಿವರಾಜ ವಿ.ಸಿದ್ದೇಶ್ವರ

