ಸುದ್ದಿಮೂಲ ವಾರ್ತೆ ರಾಯಚೂರು, ಜ.10:
ಕ್ರೀಡೆಯಲ್ಲಿ ಗೆಲುವು ಸೋಲು ಮುಖ್ಯವಲ್ಲ ಕ್ರೀಡಾ ಸ್ಪೂರ್ತಿಯೊಂದಿಗೆ ಭಾಗವಹಿಸುವುದು ಮುಖ್ಯ ಎಂದು ಜಿಲ್ಲಾ 1ನೇ ಪ್ರಧಾನ ಸತ್ರ ನ್ಯಾಾಯಾಧೀಶ ಗುಜ್ರಾಾಲ್ ಮಹಾವರ್ಕರ ಹೇಳಿದರು.
ಗಣರಾಜ್ಯೋೋತ್ಸವ ದಿನಾಚರಣೆ ಅಂಗವಾಗಿ ರಾಯಚೂರು ನ್ಯಾಾಯವಾದಿ ಸಂಘ ಆಶ್ರಯದಲ್ಲಿ ಹಮ್ಮಿಿಕೊಂಡಿದ್ದ ಜಿಲ್ಲಾ ಮಟ್ಟದ ವಕೀಲರ ಕ್ರಿಿಕೆಟ್ ಟೂರ್ನಾಮೆಂಟ್ ಉದ್ಘಾಾಟಿಸಿ ಮಾತನಾಡಿದರು. ವಕೀಲರು ತಮ್ಮ ದಿನನಿತ್ಯ ವೃತ್ತಿಿಯಲ್ಲಿ ನಿರಂತರ ಕೆಲಸ ಮಾಡುತ್ತಾಾರೆ. ಆದರೆ, ಬಿಡುವಿನ ವೇಳೆ ಈ ಕ್ರಿಿಕೆಟ್ ಪಂದ್ಯಾಾವಳಿ ವಕೀಲರಿಗಾಗಿ ಏರ್ಪಡಿಸಿದ್ದು ತಾಲೂಕಿನ ಎಲ್ಲ ವಕೀಲರು ಭಾಗವಹಿಸಿದ್ದು ಸಂತೋಷ ವಿಷಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಿರಿಯ ಸಿವಿಲ್ ನ್ಯಾಾಯಾಧೀಶ ಚನ್ನಬಸಪ್ಪ ಆರ್ ಕೊಡಿ, ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಕಾರ್ಯದರ್ಶಿ ಲಕ್ಷ್ಮಣ್ ಭಂಡಾರಿ, ವಕೀಲರಾದ ಎನ್ ಶಿವಶಂಕರ, ಅಂಬಾಪತಿ ಪಾಟೀಲ್, ರಾಘವೇಂದ್ರ, ಮುನ್ನಕುಮಾರ,ಬಸವರಾಜ, ಪ್ರಕಾಶ, ಕೆ.ಸಿ ವೀರೇಶ ,ರಾಮು, ಲೋಕೇಶ್, ಹನುಮಂತ್ ರೆಡ್ಡಿಿ ಮಲ್ಲಪ್ಪ , ಚನ್ನಪ್ಪ ಮುಂತಾದವರಿದ್ದರು.
ವಕೀಲರು ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ-ನ್ಯಾ.ಗುಜ್ರಾಲ್ ಮಹಾವರ್ಕರ್

