ಸುದ್ದಿಮೂಲ ವಾರ್ತೆ
ಬೇತಮಂಗಲ: ಎನ್ ಜಿ ಹುಲ್ಕೂರು ಗ್ರಾಮ ಪಂಚಾಯಿತಿಗೆ ನೂತನ ಅದ್ಯಕ್ಷ- ಉಪಾದ್ಯಕ್ಷರಾಗಿ ಲಕ್ಷ್ಮಮ್ಮ ನಾರಾಯಣಪ್ಪ ಹಾಗೂ ಮುರಳಿಮೋಹನ್ ಅಧಿಕಾರ ಸ್ವೀಕರಿಸಿದರು.
ಬಳಿಕ ಮಾತನಾಡಿದ ಅವರುಗಳು, ಪಂಚಾಯಿತಿಯ 16 ಸದಸ್ಯರ ಸಹಕಾರದಿಂದ ಪಕ್ಷ ಬೇದಬಾವ ತೋರದೆ ಸಹಕಾರ ಕೊಟ್ಟು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ ಹಾಗೂ ಕೆಜಿಎಫ್ ತಾಲ್ಲೂಕಿನ ಶಾಸಕಿ ರೂಪಕಲಾ ಮತ್ತು ಡಿಸಿಸಿ ಬ್ಯಾಂಕ್ ಅದ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ರವರು ಎಲ್ಲಾ ಸದಸ್ಯರನ್ನು ಒಂದುಗೂಡಿಸಿ ಪಕ್ಷಬೇಧ ತೋರದೆ ಸಹಕಾರ ಕೊಟ್ಟು ಒಮ್ಮತದಿಂದ ಅಧಿಕಾರ ಸ್ವೀಕರಿಸುವಂತೆ ಮಾಡಿದ್ದಾರೆ ಆದುದರಿಂದ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.
ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡಿ ಎನ್.ಜಿ. ಹುಲ್ಕೂರು ಗ್ರಾಪಂ ಯನ್ನು ಭ್ರಷ್ಟಾಚಾರ ಮುಕ್ತ ಆಡಳಿತ ಮಾದರಿ ಗ್ರಾಪಂಯನ್ನಾಗಿ ಮಾಡುತ್ತೇನೆ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಂಚಾಯತ್ ರಾಜ್ ವ್ಯವಸ್ಥೆ ಅಡಿಯಲ್ಲಿ ಬರುವ ಎಲ್ಲಾ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಿ ಜನರ ಪರ ನಿಂತು ಕೆಲಸ ಮಾಡುವುದಾಗಿತಿಳಿಸಿದರು.
ಗ್ರಾಪಂ ಮಾಜಿ ಅದ್ಯಕ್ಷ ಸುನೀಲ್ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಬರುವ 16 ಗ್ರಾಮಗಳಿಗೂ ಮೂಲಭೂತ ಸೌಲಭ್ಯಗಳು ಮತ್ತು ಅನೇಕ ಕಾಮಗಾರಿಗಳನ್ನು ಮಾಡಲಾಗಿದೆ. 2 ಎಕರೆ ಜಮೀನನ್ನು ಗ್ರಾಮೀಣ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಯುವಕರಿಗೆ ಕ್ರೀಡಾಂಗಣವನ್ನು ನಿರ್ಮಿಸಿ ಕೊಡಲು ಜಾಗವನ್ನು ಗುರುತಿಸಲಾಗಿದೆ. ಆಂಧ್ರ ಗಡಿಭಾಗದಲ್ಲಿ ಸಮುದಾಯ ಭವನ ನಿರ್ಮಿಸಲು ಮನವಿ ಮಾಡಿದ್ದೆವು. ಅದರಂತೆ 57 ಲಕ್ಷ ರೂ. ವೆಚ್ಚದಲ್ಲಿ ಅನುದಾನ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಅದ್ಯಕ್ಷ- ಉಪಾದ್ಯಕ್ಷರು ಈ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾದ್ಯಕ್ಷರಾದ ಮುರಳಿಮೋಹನ್, ಪಿಡಿಒ ವೆಂಕಟ್ರಾಮ್ರೆಡ್ಡಿ, ಸದಸ್ಯರಾದ ನಾರಾಯಣಸ್ವಾಮಿ, ಪ್ರಸಾದ್, ಪುರುಷೋತ್ತಮ್, ವೆಂಕಟೇಶ್, ಪ್ರಮಿಳಮ್ಮ, ನರಸಮ್ಮ, ಭವಾನಿ, ಹಂಸವೇಣಿ, ಸುಬ್ರಮಣಿ, ನೀಲಮ್ಮ ಸೇರಿದಂತೆ ಸಿಬ್ಬಂದಿ ವರ್ಗದವರು ಮತ್ತ ಉಪಸ್ಥಿತರಿದ್ದರು.