ಸುದ್ದಿಮೂಲ ವಾರ್ತೆ ಲಿಂಗಸುಗೂರು , ಜ.06:
ಮಕ್ಕಳಿಗೆ ಎದುರಾಗುತ್ತಿಿರುವ ಕಲಿಕಾ ತೊಡಕುಗಳನ್ನು ಪ್ರಾಾಥಮಿಕ ಶಿಕ್ಷಣ ಹಂತದಲ್ಲಿ ಗುರುತಿಸುವುದು ಅಗತ್ಯವಾಗಿದೆ ಎಂದು ಟೀಚರ್ಸ ಪತ್ರಿಿಕೆ ಸಹ ಸಂಪಾದಕ ಎ್.ಸಿ. ಚೆಗರೆಡ್ಡಿಿ ತಮ್ಮ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ವೀರಶೈವ ವಿದ್ಯಾಾವರ್ಧಕ ಸಂಘದ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಬೆಳ್ಳಿಿ ಹಬ್ಬದ ಪ್ರಯುಕ್ತ ಏರ್ಪಡಿಸಿದ ಪ್ರಾಾಥಮಿಕ ಶಿಕ್ಷಣದ ಕಲಿಕಾ ತೊಡಕುಗಳು ಹಾಗೂ ಕಲಿಕಾ ಪಠ್ಯ ಮತ್ತು ಭೋಧನಾ ಶೈಲಿಯ ಸ್ಮಧಾರಣಾ ಸಾಧ್ಯತೆ ಕುರಿತ ಚಿಂತನಾ ಗೋಷ್ಠಿಿ ಉದ್ದೇಶಿಸಿ ಮಾತನಾಡಿದ ಅವರು ಪ್ರಾಾಥಮಿಕ ಹಂತದಲ್ಲಿಯೇ ಮಕ್ಕಳ ಕಲಿಕಾ ತೊಡಕುಗಳನ್ನು ಗುರುತಿಸದಿದ್ದರೆ ಮುಂದಿನ ಹಂತದಲ್ಲಿ ಅದು ಮಕ್ಕಳ ಮುಂದಿನ ಭವಿಷ್ಯಕ್ಕೆೆ ದೊಡ್ಡ ಸಮಸ್ಯೆೆಯಾಗುತ್ತದೆ ಪ್ರತಿಯೊಬ್ಬ ಮಗುವಿನ ಕಲಿಕಾ ಸಾಮರ್ಥ್ಯ ವಿಭಿನ್ನವಾಗಿರುವುದರಿಂದ ಶಿಕ್ಷಕರು ಮಕ್ಕಳ ಮನಸ್ಥಿಿತಿ ಅರಿತು ಬೋಧನೆ ಮಾಡಬೇಕು ಇಂತಹ ಗೋಷ್ಠಿಿಗಳು ಪ್ರಾಾಥಮಿಕ ಶಿಕ್ಷಣದ ಗುಣಮಟ್ಟ ಹೆಚ್ಚಿಿಸಲು ಸಹಕಾರಿಯಾಗಲಿವೆ ಎಂದು ಆಶಯ ನುಡಿ ನುಡಿದರು.
ಗೋಷ್ಠಿಿ 1ಲ್ಲಿ ಶಿಕ್ಷಣ ಸಂಪನ್ಮೂಲ ವ್ಯಕ್ತಿಿಗಳಾದ ಡಿ. ರೇಷ್ಮಾಾ ರೇಷ್ಮಾಾ ಗೋಷ್ಠಿಿ 2ರಲ್ಲಿ ಮೂಡಬಿದರೆ ಶಿಕ್ಷಣ ಚಿಂತಕ ಡಾ, ಅರವಿಂದ ಚೊಕ್ಕಾಾಡಿ ಪ್ರೌೌಢ ಶಿಕ್ಷಣ ಒಂದು ಮರುಚಿಂತನೆ ಹಾಗೂ ಗುಣಮಟ್ಟ-ಪುನಶ್ಚೇತನದ ನಾವಿನ್ಯತೆಗಳು ಕುರಿತು ಮಾತನಾಡಿದರು.
ಸೋಮಶೇಖರ ಬಳಗಾನೂರ ಪ್ರೌೌಢ ಶಿಕ್ಷಣವು ವಿದ್ಯಾಾರ್ಥಿಗಳ ಜೀವನದ ದಿಕ್ಕನ್ನು ಬದಲಿಸುವ ಮಹತ್ವದ ಹಂತವಾಗಿದೆ ಎಂದು ತಿಳಿಸಿದರು. ಶಿಕ್ಷಣ ಕೇವಲ ಪಠ್ಯಾಾಧಾರಿತ ಜ್ಞಾಾನಕ್ಕೆೆ ಸೀಮಿತವಾಗದೇ ಜೀವನ ಮೌಲ್ಯಗಳು, ಸಾಮಾಜಿಕ ಹೊಣೆಗಾರಿಕೆ ಹಾಗೂ ಸ್ವಾಾವಲಂಬನೆಯ ಚಿಂತನೆ ಬೆಳೆಸುವಂತಾಗಬೇಕು. ಅಂಕಗಳಿಗೆ ಒತ್ತು ನೀಡದೆ ವಿದ್ಯಾಾರ್ಥಿಗಳ ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ ಮತ್ತು ವ್ಯಕ್ತಿಿತ್ವ ವಿಕಸನಕ್ಕೆೆ ಅವಕಾಶ ಕಲ್ಪಿಿಸಬೇಕು ಪಠ್ಯಕ್ರಮದ ಭಾರ, ನಿರಂತರ ಪರೀಕ್ಷೆಗಳು ಸ್ಪರ್ಧಾತ್ಮಕ ಒತ್ತಡಗಳಿಂದ ವಿದ್ಯಾಾರ್ಥಿಗಳು ಮಾನಸಿಕ ಒತ್ತಡದಿಂದ ಮುಕ್ತವಾಗಿ ನೈತಿಕಶಿಕ್ಷಣ, ಉದ್ಯೋೋಗಮುಖಿ ಕೌಶಲ್ಯಗಳು, ತಂತ್ರಜ್ಞಾಾನಜ್ಞಾಾನ, ಪರಿಸರ ಸಂವೇದನೆ, ಸಾಮಾಜಿಕ ಜಾಗೃತಿಗಳಿಗೆ ಪಠ್ಯಕ್ರಮದಲ್ಲಿ ಸ್ಥಾಾನ ದೊರಕಬೇಕು. ಶಿಕ್ಷಕರು ಮಾರ್ಗದರ್ಶಕರಾಗಿ ಗ್ರಾಾಮೀಣ ನಗರ ಪ್ರದೇಶಗಳ ಶಿಕ್ಷಣದ ನಡುವಿನ ಅಂತರ ಕಡಿಮೆ ಮಾಡಿ ವಿದ್ಯಾಾರ್ಥಿಗಳ ಪ್ರತಿಭೆ ಗುರುತಿಬೇಕೆಂದರು. ವಾಲ್ಮೀಕಿ ವಿ.ವಿ ಸಹಪ್ರಾಾಧ್ಯಪಕ ಡಾ. ಕೆ.ವೆಂಕಟೇಶ, ಕೇಂದ್ರ ಸಾಹಿತ್ಯ ಅಕಾಡಮಿ ಸದಸ್ಯ ಡಾ, ಚಿದಾನಂದ ಸಾಲಿ, ಉಪನ್ಯಾಾಸಕ ಮಹಾಂತೇಶ ಮಸ್ಕಿಿ ಡಾ, ಶರಣಗೌಡ, ಸಿದ್ದನಗೌಡ ಯರಡೊಓ ವೇದಿಕೆಯಲ್ಲಿದ್ದರು. ಉಪನ್ಯಾಾಸಕರಾದ ಮೌನೇಶ, ಬಸ್ಸಣ್ಣ, ದೊಡ್ಡನಗೌಡ, ಸುಧಾಕರ ನಿರ್ವಹಿಸಿದರು.
ಸಮಾರೋಪ ಸಮಾರಂಭ: ಕಾರ್ಮಿಕ ಸಚಿವ ಸಂತೋಷ ಲಾಡ ಮಾತನಾಡಿ ಸ್ವಾಾತಂತ್ಯ ನಂತರ ದೇಶದಲ್ಲಿ ಶಿಕ್ಷಣ ವ್ಯವಸ್ಥೆೆಯಲ್ಲಿ ಸಮಾನತೆ ತಂದವರು ಡಾ, ಅಂಬೇಡ್ಕರವರು ಇಂದು ನಾವು ಆರ್ಥಿಕ ವ್ಯವಸ್ಥೆೆಯಲ್ಲಿ ಮುಂಚೂಣಿಯಲ್ಲಿದ್ದೇವೆ ಎನ್ನುತ್ತಿಿದ್ದೇವೆ ಆದರೆ ಬೇರೆ ನಮ್ಮ ದೇಶದ ಜನಸಂಖ್ಯಗೆ ಹೊಲಿಸಿದರೆ ಅದು ಗೌಣವಾಗುತ್ತದೆ. ನಮ್ಮ ಮಕ್ಕಳನ್ನು ಶಿಕ್ಷಣವಂತರ ಜತೆಗೆ ಸಂಸ್ಕೃತಿ ಬಿಂಬಿಸುವ ದೇಶ ರಕ್ಷಣೆಯ ಮಕ್ಕಳಾಗಬೇಕೆಂದರು. ಹುಬ್ಬಳ್ಳಿಿ ಕಾನೂನು ವಿ.ವಿ ವಿಶ್ರಾಾಂತ ಕುಲಪತಿ ಡಾ, ಜೆಎಸ್ ಪಾಟೀಲ, ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಅನ್ವರಿ ಅಧ್ಯಕ್ಷತೆವಹಿಸಿದ ಸಂಸ್ಥೆೆ ಅಧ್ಯಕ್ಷ ಅಮರೇಗೌಡ ಪಾಟೀಲ್ ಭಯ್ಯಾಾಪೂರ ಮಾತನಾಡಿದರು. ಆಡಳಿತಾಧಿಕಾರಿ ಬಸವಂತರಾಯ ಕುರಿ ವೇದಿಕೆಯಲ್ಲಿದ್ದರು.
ಬೆಳ್ಳಿಿ ಹಬ್ಬದಂಗವಾಗಿ ನಡೆದ 3 ಗೋಷ್ಠಿಿಗಳಲ್ಲಿ ಗೋಷ್ಠಿಿಯಲ್ಲಿ ಭಾಗವಹಿಸಿದ ಶಿಕ್ಷಕರು ತಮ್ಮ ಅನುಭವಗಳನ್ನು ಹಂಚಿಕೊಂಡು, ಮಕ್ಕಳ ಕಲಿಕಾ ಸಮಸ್ಯೆೆಗಳ ಕುರಿತು ಚರ್ಚಿಸಿದರು. ಸುದೀರ್ಘ 25 ವರ್ಷಗಳ ಸೇವೆಗೈದ ಬಸವರಾಜ ಮೇಟಿ ಪ್ರಾಾಚಾರ್ಯರನ್ನು ಗೌರವಿಸಲಾಯಿತು. ಶಾಲಾ ಮಕ್ಕಳಿಂದ ದೇಶಿಯ ನೃತ್ಯಗಳು ನಾಟಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕುದ್ರೋಳಿ ಗಣೇಶ ಅವರಿಂದ ಜಾದು ಪ್ರದರ್ಶನ ನಡೆಯಿತು. ಬಸವರಾಜ, ಕಣ್ಮೇಶ ಸೂಗರೆಡ್ಡಿಿ ನಿರ್ವಹಿಸಿದರು.
ಪ್ರಾಥಮಿಕ ಶಿಕ್ಷಣದ ಕಲಿಕಾ ತೊಡಕುಗಳು ಚಿಂತನಾ ಗೋಷ್ಠಿ ಮಕ್ಕಳ ಕಲಿಕೆಯ ತೊಡಕುಗಳಿಗೆ ಪ್ರಾಾಥಮಿಕ ಹಂತದಲ್ಲಿಯೇ ಪರಿಹಾರ ಸಿಗಬೇಕು : ಎ್.ಸಿ ಚೇಗರೆಡ್ಡಿಿ

