ಸಗರನಾಡಿನ ಲೀಲಾ ಪುರುಷ ಧರ್ಮರಾಯ ಮುತ್ಯಾನವರು: ಸಿದ್ದಲಿಂಗ ಶ್ರೀಗಳು
ಜೇವರ್ಗಿ : ತಾಲೂಕಿನ ಮಾವನೂರು ಗ್ರಾಮದಲ್ಲಿ ಶ್ರೀ ಧರ್ಮರಾಯರ ಮಹಾತ್ಮೆ ಪುರಾಣ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಜರುಗಿತು. ಮಾವನೂರು ಗ್ರಾಮದಲ್ಲಿ 11 ದಿನಗಳ ಕಾಲ ಪುರಾಣ ಪೂಜ್ಯಶ್ರೀ ಮ.ನಿ.ಪು ಸಿದ್ದಲಿಂಗ ಸ್ವಾಮಿಗಳು ವಿರಕ್ತಮಠ ಯಡ್ರಾಮಿ ಶ್ರೀ ಧರ್ಮರಾಯ ಮುತ್ಯನವರ ಮಹಾತ್ಮೆ ಪುರಾಣ ಕಾರ್ಯಕ್ರಮ ನಡೆಸಿದರು.
ಸಗರನಾಡಿನ ಶರಣರು ಸಂತರು ಸಿದ್ದಿ ಪುರುಷರು ಮಹಾತ್ಮರು ಜನಿಸಿದ ಪುಣ್ಯಭೂಮಿ ಜೇವರ್ಗಿ ತಾಲೂಕಿನ ಸುಕ್ಷೇತ್ರ ಮಾವನೂರು ಗ್ರಾಮದಲ್ಲಿ ಶ್ರೀಮತಿ ಶಿವಮ್ಮಗೌಡ್ತಿ ಗಂಡ ಸಿದ್ದಪ್ಪಗೌಡ ಉದರದಲ್ಲಿ ಜನಿಸಿದ ಎರಡು ರತ್ನಗಳು ತಮ್ಮ ಬಾಲ್ಯ ಲೀಲೆಯ ಮೂಲಕ ಅನೇಕ ಪವಾಡ ಮಾಡಿದಂತಹ ಸಂಗತಿ ಮಾವನೂರು ಗ್ರಾಮದಲ್ಲಿ ಜರುಗಿದೆ. ಪವಾಡ ಪುರುಷರು ಧರ್ಮರಾಯ ಮುತ್ಯಾ ಮತ್ತು ಧೂಳಪ್ಪ ಮುತ್ಯಾ ಅಣ್ಣತಮ್ಮಂದಿರು. ಬಾಲ್ಯದಲ್ಲಿ ಅನೇಕ ಲೀಲೆಗಳ ಮಾಡಿತ್ತಾ ಬೆಳೆದ ಗುರುಗಳು ಮುಂದೆ ಮದುವೆಯಾಗಿ ಒಂದು ಗಂಡು ಮಗ ಎರಡು ಹೆಣ್ಣು ಮಕ್ಕಳಾದವು ಸಂಸಾರವನ್ನು ತ್ಯಾಗ ಮಾಡಿ ಶ್ರೀಹಂಗರಗಿ ನಿಂಗರಾಯನ ಶಿಶುಮನಾಗಿ ವಾಕ್ಯ ಸಿದ್ದಿ ಪುರುಷನಾಗಿ ಅನೇಕ ಪವಾಡಗಳು ಮಾಡುತ್ತಾ ಬೆಳೆದರು.
ಮುಂದೆ ಒಮ್ಮೆ ಸೋಮನಾಥ ಹಳ್ಳಿಯ ಶ್ರೀಮತಿ ಆನಂದಮಗೋಡ್ತಿ ಗಂಡ ಮಲ್ಲಪ್ಪ ಗೌಡರಿಗೆ ಮಕ್ಕಳಿಲ್ಲದೆ ಬಹಳ ಕಾಲದವರೆಗೆ ನೊಂದುಕೊಂಡಿದ್ದರು. ನಂತರ ಮಾವನೂರಿನ ಗ್ರಾಮಕ್ಕೆ ಬಂದು ಶ್ರೀ ಧರ್ಮರಾಯ ಮುತ್ತೇನವರಲ್ಲಿಗೆ ನಡೆದುಕೊಂಡರು ನಡೆದುಕೊಂಡ ಭಕ್ತಿಗೆ ದೇವರ ಆಶೀರ್ವಾದ ನಂತರ ಮಲ್ಲಪ್ಪಗೌಡನಂಬ ಗಂಡು ಮಗನಿಗೆ ಜನ್ಮ ನೀಡಿದರು.
ಮಾವನೂರು ಗ್ರಾಮದಿಂದ ಹೋತಪೇಠ ಗ್ರಾಮಕ್ಕೆ ಹೊರನೂರು ಸೀಮೆಯಲ್ಲಿ ಹಾದು ಹೋಗುವಾಗ ಹರನೂರು ಗ್ರಾಮದ ಭೀಮಪ್ಪ ಸುಬೇದಾರ್ ಎಂಬವರ ಹೊಲದಲ್ಲಿ ಭೀಮಪ್ಪನ ಜೊತೆಗೆ ನಾಲ್ಕು ಆಳುಗಳು ಕೂಡಿ ಈ ಮುತ್ಯಾರಲ್ಲಿ ಪರೀಕ್ಷೆ ಮಾಡಬೇಕೆಂದು ಮುತ್ಯಾ ಅವರನ್ನು ಹೊರಟಿರುವ ಸಮಯದಲ್ಲಿ ನಿರ್ಧರಿಸಿದರು. ಒಬ್ಬ ಮುತ್ಯಾನ ಎದುರಿಗೆ ಸುಮ್ಮ ಸುಮ್ಮನೆ ಒಟ್ಟೆ ಕಡಿಯುತ್ತದೆ ಎಂದು ಹೊರಳಾಡುತ್ತಿದ್ದನು. ಆಗ ಭೀಮಪ್ಪ ಸಂಗಡಿಗರು ಮುತ್ಯಾನವರಿಗೆ ದಾರಿಯಲ್ಲಿ ನಿಲ್ಲಿಸಿ ಹೊಟ್ಟೆ ಕಡಿಯುತ್ತದೆ ಎಂದು ಹೇಳಿದರು. ಆಗ ಶ್ರೀ ಧರ್ಮರಾಯ ಮುತ್ಯಾನವರು ಅವನು ಸತ್ತು ಹೋಗಿದ್ದಾನೆ ಹೋಗಿ ನೋಡಿರಿ ಎಂದರು. ಆಗ ಅವರು ನಗುತ್ತಾ ಸುಮ್ಮನ ಮಲಗಿದವನು ಮೇಲೆ ಹೇಳು ಎಂದರು. ಆ ವ್ಯಕ್ತಿ ನಿಜವಾಗಿಯೂ ಸತ್ತು ಹೋಗಿದ್ದನು. ಗಾಬರಿಗೊಂಡ ಸಂಗಡಿಗರು ತಪ್ಪಾಯ್ತು ನಮ್ಮನ್ನು ಕ್ಷಮಿಸಿ ಬಿಡಿ ಪೂಜ್ಯರೆಂದು ಪಾದ ಹಿಡಿದರು. ಆಗ ಧರ್ಮರಾಯ ಮುತ್ಯಾನವರು ಬಗಲಲ್ಲಿದ್ದ ಭಂಡಾರದ ಚೀಲದಲ್ಲಿರುವ ಬಂಡಾರ ತೆಗೆದು ಸತ್ತ ವ್ಯಕ್ತಿಗೆ ಭಂಡಾರ ಹಚ್ಚಿದರು. ಸತ್ತ ವ್ಯಕ್ತಿ ಎಂದು ಕುಳಿತು ಹಾಗೆ ಮುಂದೆ ನಡೆದರು. ಶ್ರೀ ಧರ್ಮರಾಯ ಅವರ ಕುಳಿತ ಜಾಗದಲ್ಲಿ ಒಂದು ಕಲ್ಲನ್ನು ಇಟ್ಟು ಪೂಜಿಸತೊಡಗಿದರು ಅದು ಇಲ್ಲಿವರೆಗೂ ಪೂಜಿಸುತ್ತಲೇ ಬಂದಿರುತ್ತಾರೆ. ಇದೇ ರೀತಿ ಅನೇಕ ಪವಾಡಗಳನ್ನು ಮಾಡುತ್ತಾ. ಮಾವನೂರಿನಲ್ಲಿ ನೆಲಸಿ ಸದ್ಭಕ್ತರನ್ನು ಉದ್ದರಿಸುತ್ತಿರುವ ಮಹಾನ್ ದೈವಿ ಪುರುಷರು.
ಈ ಸಂದರ್ಭದಲ್ಲಿ ಪರಮಪೂಜ್ಯ ಲಿಂಗ ಬೀರದೇವರು ಕನಕ ಗುರು ಪೀಠ ತಿಂಥಣಿ ಬ್ರಿಜ್, ಮಲಕಾರಿ ಸಿದ್ಧ ಒಡೆಯರು, ದೊಡ್ಡಪ್ಪ ಒಡೆಯರು ಕೆಳಗಿನಮಠ ಕೆಲ್ಲೂರ್, ಶರಣಪ್ಪ ನೀರಡಗಿ, ಶರಣು ಬಡಿಗೇರ್, ರಾಜು ವಕೀಲರು, ನಾಗರಾಜ, ಚಂದ್ರಕಾಂತ ಕುಲಕರ್ಣಿ ಹಾಗೂ ದೋಡ್ಡಪ್ಪಗೌಡ ಪೋಲಿಸ್ ಪಾಟಿಲ್ ಬಾಬು ಗೌಡ ಶರಣಪ್ಪ ತಳವರ ನಾಗಪ್ಪ ಖಾರ್ಜಿಗಿ ಲಕ್ಷಣ್ಣ ಕಿರಣಿಗೀ ಕಠೆಪ್ಪ ಹೇರ ಭಾಗಣ್ಣ ಕಿರಣಿಗಿ, ಮಾವನೂರು ಗ್ರಾಮದ ಗ್ರಾಮಸ್ಥರು ಭಕ್ತರು ಮುಂತಾದವರು ಉಪಸ್ಥಿತರಿದ್ದರು.