ಸುದ್ದಿಮೂಲ ವಾರ್ತೆ ಬೆಂಗಳೂರು, ಜ.22:
ಸದನದಲ್ಲಿ ರಾಜ್ಯಪಾಲರ ಉಪಸ್ಥಿಿತಿ ವೇಳೆ ಕಾಂಗ್ರೆೆಸ್ ಶಾಸಕರು ತೋರಿದ ಅನುಚಿತ ವರ್ತನೆ ಹೊಣೆ ಹೊತ್ತು ಮುಖ್ಯಮಂತ್ರಿಿ ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ಕೊಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಾಮಿ ಅವರು ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗೌರವಾನ್ವಿಿತ ರಾಜ್ಯಪಾಲರು ಬರುವ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಿಗಳು ಅವರನ್ನು ಗೌರವಪೂರ್ವಕವಾಗಿ ಕರೆತರಬೇಕು. ಅವರು ಹೋಗುವಾಗ ಅದೇ ಗೌರವದಿಂದ ಬೀಳ್ಕೊೊಡಬೇಕೆಂದು ಸಂವಿಧಾನದಲ್ಲಿದೆ. ಸರಕಾರದ ಸಾಧನೆಗಳು, ಸರಕಾರದ ನೀತಿ- ಸಿದ್ಧಾಾಂತಗಳು ಮತ್ತು ಭವಿಷ್ಯದಲ್ಲಿ ಮಾಡುವ ಕೆಲಸಗಳನ್ನು ಭಾಷಣದಲ್ಲಿ ತಿಳಿಸಬೇಕಿತ್ತು. ಆದರೆ, ಇವರು ಕೇಂದ್ರದ ವಿರುದ್ಧ ಅಸಾಂವಿಧಾನಿಕವಾಗಿ, ಸಂಘರ್ಷ ಮಾಡುವ ರೀತಿಯಲ್ಲಿ ಪ್ರೇೇರೇಪಣೆ ಮಾಡಲು ಹೊರಟಿದ್ದರು ಎಂದು ಆಕ್ಷೇಪಿಸಿದರು.

