ಸುದ್ದಿಮೂಲ ವಾರ್ತೆ ಬೆಂಗಳೂರು, ಜ.27:
ಆಡಳಿತ ಪಕ್ಷ ಕಾಂಗ್ರೆೆಸ್ ಹಾಗೂ ವಿರೋಧ ಪಕ್ಷಗಳು ಮಂಗಳವಾರ ಗಾಂಧಿ ಪ್ರತಿಮೆ ಹಾಗೂ ಸ್ವಾಾತಂತ್ರ್ಯ ಉದ್ಯಾಾನದ ಬಳಿ ಪ್ರತಿಭಟನೆ ಹಮ್ಮಿಿಕೊಂಡ ಹಿನ್ನೆೆಲೆಯಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್ ಕಲಾಪಗಳು ಸರಿಯಾದ ಸಮಯಕ್ಕೆೆ ಆರಂಭವಾಗಲಿಲ್ಲ.
ಬಿಜೆಪಿ ಸದಸ್ಯರು ಅಬಕಾರಿ ಸಚಿವ ಆರ್.ಬಿ. ತಿಮ್ಮಾಾಪುರ ಅವರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದರೆ ಕಾಂಗ್ರೆೆಸ್ ಸದಸ್ಯರು ಸ್ವಾಾತಂತ್ರ್ಯ ಉದ್ಯಾಾನದಲ್ಲಿ ಮನರೇಗಾ ಯೋಜನೆಯಿಂದ ಗಾಂಧಿ ಹೆಸರು ಕೈಬಿಟ್ಟಿಿರುವುದಕ್ಕೆೆ ಪ್ರತಿಭಟನೆ ನಡೆಸಿದರು. ಹೀಗಾಗಿ ಕಲಾಪ ಮಧ್ಯಾಾಹ್ನ 12 ಗಂಟೆ ಬಳಿಕ ಆರಂಭವಾಯಿತು.
ತಡವಾಗಿ ಅರಂಭವಾದ ವಿಧಾನಸಭೆ ಕಲಾಪದಲ್ಲಿ ಮೊದಲ ಸಾಲಿನಲ್ಲಿ ಕುಳಿತಿರುತ್ತಿಿದ್ದ ಸಚಿವರು ಕಾಣಿಸಲಿಲ್ಲ. ಇದರಿಂದ ಕೆರಳಿದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಪ್ರಶ್ನೆೆಗಳಿಗೆ ಉತ್ತರಿಸಬೇಕಾದ ಸಚಿವರೇ ಕಾಣಿಸುತ್ತಿಿಲ್ಲ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಪ್ರಶ್ನೋೋತ್ತರ ಕಲಾಪ ಆರಂಭಿಸಿ ಪ್ರಶ್ನೆೆ ಕೇಳಬೇಕಾದ ಶಾಸಕರು ಹೆಸರನ್ನು ಹೇಳಲಾರಂಭಿಸಿದರು. ಆಗ ಸಂಬಂಧಿತ ಸಚಿವರು ಇಲ್ಲದಿರುವುದನ್ನು ಗಮನಿಸಿದ ವಿರೋಧಪಕ್ಷದ ನಾಯಕ, ಸಚಿವರೇ ಇಲ್ಲ ಎಂದರೆ ಹೇಗೆ. ಜವಾಬ್ದಾಾರಿ ಬೇಡವೇ. ಇಂದು ಸದನದಲ್ಲಿ ಹಾಜರಿರಬೇಕಾದ ಹೆಸರುಗಳನ್ನು ವಾಚಿಸಿ, ಬರದೇ ಇರುವವರಿಗೆ ಛೀಮಾರಿ ಹಾಕಿ ಎಂದರು.
ಆಗ ಸಭಾಧ್ಯಕ್ಷರು ಇಂದು ಏಕೆ ಸದನ ಆರಂಭವಾಗಿದೆ. ಹಾಜರಾತಿ ಏಕೆ ಕಡಿಮೆ ಇದೆ ಎಂಬುದು ನಿಮಗೆ ಗೊತ್ತಿಿದೆ. ಅದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಎನ್ನುತ್ತಿಿದ್ದಂತೆ, ಅಶೋಕ್ ಅವರು ನೀವು ಕಾಂಗ್ರೆೆಸ್ ಪಕ್ಷದವರಲ್ಲ. ಇಂದು ಸದನದಲ್ಲಿ ಹಾಜರಿರಬೇಕಾದವರ ಪಟ್ಟಿಿಯನ್ನು ವಾಚಿಸಿ ಎಂದು ಒತ್ತಾಾಯಿಸಿದರು.
ಆಗ ಸಭಾಧ್ಯಕ್ಷರು ಪ್ರಶ್ನೋೋತ್ತರ ಅವಧಿಯಲ್ಲಿ ಮುಖ್ಯಮಂತ್ರಿಿ, ಉಪಮುಖ್ಯಮಂತ್ರಿಿ ಪರವಾಗಿ ಸಚಿವರು ಉತ್ತರ ಕೊಡುತ್ತಾಾರೆ. ಸದನದ ಕಾರ್ಯಕಲಾಪಗಳ ಸಮಿತಿ ಸಭೆಯಲ್ಲಿ ಸಚಿವರು ಬೆಳಿಗ್ಗೆೆ ಮತ್ತು ಮಧ್ಯಾಾಹ್ನ ಕಡ್ಡಾಾಯವಾಗಿ ಹಾಜರಿರುವ ಬಗ್ಗೆೆ ಹೇಳಲಾಗಿದೆ. ಅದರಂತೆ ಬರುತ್ತಾಾರೆ ಎಂದರು.
ಆಗ ಇಂದು ಹಾಜರಿರಬೇಕಾದ ಸಚಿವರ ಪಟ್ಟಿಿಯನ್ನು ಸಭಾಧ್ಯಕ್ಷರು ವಾಚಿಸಿ ಸಚಿವರಾದ ಕೆ.ಎಚ್.ಮುನಿಯಪ್ಪ, ದಿನೇಶ್ ಗುಂಡೂರಾವ್, ಡಾ.ಎಚ್.ಸಿ.ಮಹದೇವಪ್ಪ ಅವರ ಹೆಸರನ್ನು ಉಲ್ಲೇಖಿಸಿದರು. ಅವರು ಸದನದಲ್ಲಿ ಇಲ್ಲದಿರುವುದನ್ನು ಗಮನಿಸಿದ ಬಿಜೆಪಿ ಶಾಸಕರು ಇಲ್ಲ, ಇಲ್ಲ ಎಂಬ ಘೋಷಣೆಯನ್ನು ಕೂಗಿದರು.
ಕಂದಾಯ ಸಚಿವ ಕೃಷ್ಣ ಭೈರೇಗೌಡ, ಸದನದಲ್ಲಿ ಹಾಜರಿದ್ದರು. ಜಮೀರ್ ಅಹಮದ್ ಖಾನ್, ಈಶ್ವರ್ ಖಂಡ್ರೆೆ, ಸುಧಾಕರ್ ಸೇರಿದಂತೆ ಇನ್ನೂ ಕೆಲವು ಸಚಿವರು ಸದನದಲ್ಲಿ ಹಾಜರಿರಲಿಲ್ಲ. ಆಗ ಬಿಜೆಪಿ ಶಾಸಕ ಸುನಿಲ್ಕುಮಾರ್ ಇದು ಇಲ್ಲಗಳ ಸರ್ಕಾರ. ಮಂತ್ರಿಿಗಳೂ ಇಲ್ಲ, ಅನುದಾನವೂ ಇಲ್ಲ ಎಂದು ಛೇಡಿಸಿದರು.
ಆಗ ಪ್ರಶ್ನೋೋತ್ತರ ಕಲಾಪ ಕೈಗೆತ್ತಿಿಕೊಂಡ ಸಭಾಧ್ಯಕ್ಷರು ಎಚ್ಕೆ.ಸುರೇಶ್ನನ್ನು ಪ್ರಶ್ನೆೆ ಕೇಳುವಂತೆ ಆಹ್ವಾಾನಿಸಿದರು.ಆಗ ಶಾಸಕರು ಆ ಸಂದರ್ಭದಲ್ಲಿ ಸದನದಲ್ಲಿ ಹಾಜರಿರಲಿಲ್ಲ. ಇದನ್ನು ಗಮನಿಸಿದ ಸಭಾಧ್ಯಕ್ಷರು ನಿಮ್ಮ ಸದಸ್ಯರೂ ಇಲ್ಲ ಎಂದರು. ಪ್ರತಿಯಾಗಿ ಅಶೋಕ್ ಮಾತನಾಡಿ, ನಮವರು ಸದನದಲ್ಲಿ ಹೆಚ್ಚಾಾಗಿ ಇದ್ದಾರೆ, ಆಡಳಿತ ಪಕ್ಷದವರ ಕಡೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಹಲವು ಮಂದಿ ಸಚಿವರು ಹಾಜರಾಗದ ಹಿನ್ನೆಲೆಯಲ್ಲಿ ವಿಪಕ್ಷಗಳ ಆಕ್ರೋಶ ಪ್ರತಿಭಟನೆ ಹಿನ್ನೆಲೆಯಲ್ಲಿ ತಡವಾಗಿ ಆರಂಭವಾದ ವಿಧಾನಮಂಡಲ ಕಲಾಪ

