ಸುದ್ದಿಮೂಲ ವಾರ್ತೆ ಮಾನ್ವಿ, ಡಿ.28:
ಮಾನ್ವಿಿ ತಾಲೂಕಿನ ಚಾಪುಡಿ ಕ್ಯಾಾಂಪಿನಲ್ಲಿ ಸಿದ್ದಪ್ಪ ಎನ್ನುವವರು ತಮ್ಮ ಮನೆಯ ಮುಂದಿನ ಬಯಲು ಜಾಗದಲ್ಲಿ ಕಟ್ಟಿಿ ಹಾಕಿದ್ದ ಕೋಣಗರದ ಮೇಲೆ ಶನಿವಾರ ಬೆಳಗಿನ ಜಾವ ಚಿರತೆ ದಾಳಿ ಮಾಡಿ ತಿಂದು ಹಾಕಿರುವ ಶಂಕೆ ವ್ಯಕ್ತವಾಗಿದ್ದು, ಇದರಿಂದ ಗ್ರಾಾಮದ ಜನರು ಭಯಭೀತರಾಗಿದ್ದಾರೆ.
ಮಾಹಿತಿ ತಿಳಿಯುತ್ತಲೇ ಗ್ರಾಾಮಕ್ಕೆೆ ಆರಣ್ಯ ಇಲಾಖೆಯ ಉಪ ವಲಯ ಅರಣ್ಯಾಾಧಿಕಾರಿ ಮಹೇಶ ಭೇಟಿ ನೀಡಿ ಪರಿಶೀಲಿಸಿ ಕ್ಯಾಾಂಪಿನ ಸುತ್ತಮುತ್ತ ಕೃಷಿ ಜಮೀನಿ ಇದ್ದು ಹತ್ತಿಿರದಲ್ಲಿ ಗುಡ್ಡ ಪ್ರದೇಶವಿರುವುದರಿಂದ ಚಿರತೆ ಅಡಗಿರುವ ಬಗ್ಗೆೆ ಪರಿಶೀಲನೆ ನಡೆಸಲಾಗುವುದು. ರಾತ್ರಿಿ ವೇಳೆ ಗ್ರಾಾಮಸ್ಥರು ಒಂಟಿಯಾಗಿ ತಿರುಗಾಡುವುದು ಹಾಗೂ ತಮ್ಮ ಚಿಕ್ಕಮಕ್ಕಳನ್ನು ಹೊರಗಡೆ ಬಿಡುವುದನ್ನು ಮಾಡಬಾರದು. ಜಾನುವಾರುಗಳನ್ನು ಬಯಲಿನಲ್ಲಿ ಬಿಡದೇ ಸುರಕ್ಷಿತವಾದ ಪ್ರದೇಶದಲ್ಲಿ ಬಿಡಬೇಕು ಎಂದು ಅಗತ್ಯ ಮುನ್ನೆೆಚ್ಚರಿಕೆ ಕ್ರಮಗಳ ಬಗ್ಗೆೆ ಮಾಹಿತಿ ನೀಡಿದರು.
ಪಶುವೈದ್ಯಧಿಕಾರಿ ಡಾ.ಅಭಿ ಕೋಣಗರುವಿನ ಮರಣೋತ್ತರ ಪರೀಕ್ಷೆ ನಡೆಸಿ ಸಾವಿನ ಬಗ್ಗೆೆ ಖಚಿತವಾದ ಮಾಹಿತಿ ವರದಿಯನ್ನು ನೀಡುವುದಾಗಿ ತಿಳಿಸಿದರು.
ಅರಣ್ಯ ಇಲಾಖೆಯ ಗಸ್ತು ಅರಣ್ಯ ಪಾಲಕ ಕೆಂಚಪ್ಪ ಗ್ರಾಾಮಸ್ಥರು ಇದ್ದರು.

