ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಆ. 9 : ಶೋಷಿತ ಸಮುದಾಯಕ್ಕೆ ರಾಜಕೀಯ ಬಲನೀಡುವಲ್ಲಿ ಮೀಸಲಾತಿಯೂ ಮಹತ್ವದ ಪಾತ್ರ ಹೊಂದಿದ್ದು, ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಂವಿಧಾನದಿಂದ ಸಮ ಸಮಾಜ ನಿರ್ಮಾಣದತ್ತ ಎಲ್ಲರೂ ದಾಪುಗಾಲು ಇಡುತ್ತಿದ್ದೇವೆ ಎಂದು ಆದಿ ಜಾಂಭವ ಟ್ರಸ್ಟ್ ನ ಗೌರವಾಧ್ಯಕ್ಷ ಎಂ.ಎಂ.ಶ್ರೀನಿವಾಸ್ ಅಭಿಪ್ರಾಯಪಟ್ಟರು.
‘ಹಳ್ಳಿಗಳು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯಾದರೇ ಇಡೀ ದೇಶವೇ ಅಭಿವೃದ್ಧಿ ಹೊಂದಿದಂತೆ. ಗ್ರಾಮಪಂಚಾಯಿತಿಗಳ ಮುಖ್ಯಸ್ಥರಾಗಿ ನೀವುಗಳು ಮಾಡುವ ಕೆಲಸ ಶಾಶ್ವತವಾಗಿ ಜನರು ನೆನಪಿನಲ್ಲಿಟ್ಟಿಕೊಳ್ಳಬೇಕು. ದಲಿತ ನಾಯಕತ್ವದಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿಗಳಿನ್ನು ಅಪ್ಪುಕೊಳ್ಳುವಂತಹ ಆಡಳಿತ ವೈಖರಿ ನಿಮ್ಮದಾಗಲಿ’ ಪ್ರಭ ಆರ್ಥಿಕವಾಗಿ ಹಿಂದುಳಿತ ಕುಟುಂಬ ನವ ಯುವಕರಿಗೆ ಸಂವಿಧಾನದ ಆಶಯ ತಿಳಿಸಿ, ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡಿ, ನಿಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಬ್ಬೋಬ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ತಯಾರು ಮಾಡಿ, ದೇಶ ಸೇವೆಗೆ ಅಣಿಯಾಗುವಂತಹ ವಾತಾವರಣ ನಿರ್ಮಿಸಿ’ ಎಂದರು.
ಮಾಜಿ ಪುರಸಭಾ ಅಧ್ಯಕ್ಷ ಎಂ.ಮೂರ್ತಿ ಮಾತನಾಡಿ, ‘ರಾಜಕೀಯ ರಂಗದಲ್ಲಿಯೂ ಸೇವೆ ಮಾಡಲು ಸಾಕಷ್ಟು ವಿಫುಲ ಅವಕಾಶಗಳಿದ್ದು, ಯುವಕರು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ವಿದ್ಯಾವಂತರು ಸ್ಥಳೀಯ ಸರ್ಕಾರದ ಚುಕ್ಕಾಣಿ ಹಿಡಿದಾಗ ಭ್ರಷ್ಟಾಚಾರರಹಿತವಾಗಿ ಹಳ್ಳಿಗಳಲ್ಲಿ ಪ್ರಗತಿಯ ಶಕೆ ಪ್ರಾರಂಭವಾಗುತ್ತದೆ’ ಎಂದರು.
ಜಾಲಿಗೆ ಪಂಚಾಯಿತಿ ಅಧ್ಯಕ್ಷ ಎಸ್.ಎಂ.ಆನಂದ್ ಕುಮಾರ್ , ಯಲಿಯೂರು ಪಂಚಾಯಿತಿ ಅಧ್ಯಕ್ಷೆ ಆಂಜಿನಮ್ಮ, ಕನ್ನಮಂಗಲ ಪಂಚಾಯಿತಿಯ ಅಧ್ಯಕ್ಷೆ ಗೌರಮ್ಮ, ಅಣ್ಣೇಶ್ವರ ಗ್ರಾಪಂ ಉಪಾಧ್ಯಕ್ಷ ಮುನಿರಾಜಪ್ಪ, ಅಲೂರು ದುದ್ದನಹಳ್ಳು ಉಪಾಧ್ಯಕ್ಷ ಮುನಿರಾಜು, ಗೊಡ್ಲು ಮುದ್ದೇನಹಳ್ಳಿ ಅಧ್ಯಕ್ಷ ಜಗದೀಶ್ ರನ್ನು ಸಮುದಾಯದ ಮುಖಂಡರು ಅಭಿನಂದಿಸಿದರು.
ಇದೇ ವೇಳೆ ಹಿರಿಯ ಮುಖಂಡರಾದ ಗುರಪ್ಪ, ಕುಂದಾಣ ಮುನಿರಾಜು, ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂದ್ರು, ಉಪಾಧ್ಯಕ್ಷ ಎಲ್ ಮುನಿರಾಜು, ಸಂಘಟನಾ ಕಾರ್ಯದರ್ಶಿ ರಾಘವ, ನಿರ್ದೇಶಕರಾದ ಯಲ್ಲಪ್ಪ, ಮೂರ್ತಿ , ಚಿಕ್ಕತತ್ತಮಂಗಳ ನರಸಿಂಹಯ್ಯ, ಹೇಮಂತ್, ವೆಂಕಟಗಿರಿಕೋಟೆ ಹರೀಶ್ ಸೇರಿದಂತೆ ಇತರರು ಇದ್ದರು.