ಸುದ್ದಿಮೂಲ ವಾರ್ತೆ
ಮಾಲೂರು,ಜೂ.26: ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯ ಎಂದು
ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ವೈದ್ಯಕೀಯ ಘಟಕದ ರಾಜ್ಯಾಧ್ಯಕ್ಷ ಡಾ. ಕೆ. ನಾಗರಾಜು ತಿಳಿಸಿದರು.
ಪಟ್ಟಣ ಕಸ್ತೂರಿ ಕರ್ನಾಟಕ ತಮ್ಮ ಕಚೇರಿ ಯಲ್ಲಿ ಜನಪರ ವೇದಿಕೆ ಯ ಪದಧಿಕಾರಿಗಳ ಆಯ್ಕೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕನ್ನಡ ಭಾಷೆಯು ತನ್ನದೇ ಆದ ಇತಿಹಾಸ ಹೊಂದಿದೆ. ನಮ್ಮ ನಡೆ, ನುಡಿ, ನಾಡು ಚೆಂದ. ಕರ್ನಾಟಕದ ಪ್ರತಿಯೊಬ್ಬರು ಕನ್ನಡ ಭಾಷೆಯಲ್ಲಿ ವ್ಯವಹರಿಸಬೇಕು. ಕನ್ನಡ ಭಾಷೆ ತಿಳಿಯದವರಿಗೆ ಭಾಷೆ ಕಲಿಸಬೇಕು. ನಾವೆಲ್ಲರೂ ಕನ್ನಡದ ಉಳಿವಿಗಾಗಿ ಶ್ರಮಿಸಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ಕನ್ನಡವೇ ಮೇಲುಗೈ ಸಾಧಿಸಬೇಕು. ಹೀಗಾಗಿ, ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕೆಂದು ತಿಳಿಸಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಯುವ ಘಟಕದ ಕೋಲಾರ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಶ್ರೀನಿವಾಸ್ ರವರನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಭಿವೃದ್ಧಿಗೆ ಎಲ್ಲಾ ಪದಾಧಿಕಾರಿಗಳು ಪ್ರಮಾಣಿಕವಾಗಿ ಶ್ರಮಿಸಬೇಕು. ಜತೆಗೆ ನಾಡು, ನುಡಿ, ನೆಲ,ಜಲ ಗಡಿ ರಕ್ಷಣೆ ವಿಚಾರ ಬಂದಾಗ ಸ್ವಾಭಿಮಾನದಿಂದ ಮುಂದಾಗ ಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಎಂ.ಪಿ. ಬೈರೇಗೌಡ, ತಾಲೂಕು ಕಾರ್ಯದರ್ಶಿ ಅಂಬರೀಶ್, ತಾಲೂಕು ಪ್ರಧಾನ ಕಾರ್ಯದರ್ಶಿ, ಯಾರಬ್ ಬಾಬಾ, ತಾಲೂಕು ಕಾರ್ಯದರ್ಶಿ ದ್ಯಾಪಸಂದ್ರ ಮಣಿ, ತಾಲೂಕು ಸಂಘಟನಾ ಕಾರ್ಯದರ್ಶಿ ಆನಂದ್ ಯಾದವ್ ಹಾಗೂ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.