ಸುದ್ದಿಮೂಲ ವಾರ್ತೆ ಬಳ್ಳಾರಿ, ೆ.21:
ಮುಸ್ಲಿಿಂ ಖಬರಸ್ತಾಾನ್ನ 11.50 ಎಕರೆ ಭೂಮಿಯ ಅಕ್ರಮಪರಭಾರೆಯ ಜೊತೆಯಲ್ಲಿ ವಕ್ಫ್ಬೋರ್ಡ್ನ 103 ಎಕರೆ, ಟಿಪ್ಪುುಸುಲ್ತಾಾನ್ ಇನಾಂನ 33 ಎಕರೆ ಭೂಮಿ, ಕಪ್ಪಗಲ್ಲು ಭೂಮಿ ಮತ್ತು ಮಿಂಚೇರಿಯ ಭೂಮಿಗಳ ಬಗ್ಗೆೆಯೂ ಬಿಜೆಪಿಯ ಮುಖಂಡರು ಮಾತನಾಡಬೇಕು ಎಂದು ವಕ್ಫ್ಬೋರ್ಡ್ನ ಜಿಲ್ಲಾಾ ಮಾಜಿ ಅಧ್ಯಕ್ಷ ಹುಮಾಯೂನ್ ಖಾನ್ ಅವರು ಕೋರಿದ್ದಾಾರೆ.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ಬಳ್ಳಾಾರಿಯ ಬಂಡಿಮೋಟ್ ಬಳಿ 39.00.75.8 ಎಕರೆ ಭೂಮಿ ಖಬರಸ್ಥಾಾನ್ಗೆ ಸೇರಿದೆ. ಈ ಭೂಮಿಯಲ್ಲಿ 11.50 ಎಕರೆಯನ್ನು ಕಬಳಿಸುವ ಪ್ರಯತ್ನ ನಡೆದಿದ್ದು, ಇದನ್ನು ಬಿಜೆಪಿಯ ಮುಖಂಡರು ‘ದೊಡ್ಡ ಸುದ್ದಿ’ ಮಾಡಿದ್ದಕ್ಕೆೆ ಧನ್ಯವಾದಗಳು. ಇದೇ ರೀತಿಯಲ್ಲಿ ವಕ್ಫ್ಬೋರ್ಡ್ ಮತ್ತು ಮುಸ್ಲಿಿಂಮರಿಗೆ ಸೇರಿರುವ ಉಳಿದ ಭೂಮಿಗಳ ಕುರಿತು ಸ್ಪಂದಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ವಕ್ಫ್ ವ್ಯಾಾಪ್ತಿಿಯಲ್ಲಿಯ ಖಬರಸ್ತಾಾನದ 11.5 ಎಕರೆ ಭೂಮಿಯನ್ನು ತಮ್ಮದೇ ಎಂದು ಪಟೇಲ್ನಗರದ ಆರ್. ಪ್ರಭಾವತಿ ಎನ್ನುವವರು ಅಕ್ರಮವಾಗಿ ಾರಂ 2 ಅನ್ನು ಪಡೆದಿದ್ದು, ತಕ್ಷಣವೇ ರದ್ದುಪಡಿಸಬೇಕು ಎಂದು 28.01.2026 ರಂದೇ ಬಳ್ಳಾಾರಿ ಮಹಾನಗರ ಪಾಲಿಕೆಯ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಜನಪ್ರತಿನಿಧಿ ಮುನ್ನಾಾಭಾಯಿ ಅವರು ಜಿಲ್ಲಾಾ ಉಸ್ತುವಾರಿ ಸಚಿವರ ‘ಜನಸ್ಪಂದನ’ದಲ್ಲೂ ದೂರು ಸಲ್ಲಿಸಿದ್ದರು.
ಇದಕ್ಕೂ ಪೂರ್ವದಲ್ಲಿ ಎಡಿಎಲ್ಆರ್ (ಸರ್ವೇ ಇಲಾಖೆ)ನಲ್ಲಿ ದಾಖಲೆಗಳನ್ನು ತಿದ್ದಿ 1.50 ಎಕರೆ ಭೂಮಿಯ ಪರಭಾರೆ ಮಾಡಲಾಗಿತ್ತು. ಈ ಕುರಿತು ಜಿಲ್ಲಾಾಡಳಿತ – ಪೊಲೀಸ್ಗೆ ದೂರು ನೀಡಿದ ತಕ್ಷಣವೇ ಪರಭಾರೆ ರದ್ದಾಾಯಿತು. ಆದರೆ, ಈ ಪ್ರಕ್ರಿಿಯೆಯಲ್ಲಿ ಪಾಲ್ಗೊೊಂಡಿದ್ದವರ ವಿರುದ್ಧದ ವಿಚಾರಣೆಗೆ ಸಹಕರಿಸಲು ಹಿರಿಯ ಅಧಿಕಾರಿ ನರಸಪ್ಪ ಅವರು ಆಸಕ್ತಿಿ ತೋರಿಸುತ್ತಿಿಲ್ಲ. ನೆಪಗಳನ್ನು ಹೇಳುತ್ತಲೇ ತಪ್ಪಿಿಸಿಕೊಳ್ಳುತ್ತಿಿದ್ದಾಾರೆ. ಕಾರಣ ಭೂ ಕಬಳಿಕೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿಿವೆ ಎಂದು ಹೇಳಿದರು.
ಕಪ್ಪಗಲ್ಲು ಮತ್ತು ಮಿಂಚೇರಿ ವ್ಯಾಾಪ್ತಿಿಯಲ್ಲಿ ಇರುವ ಭೂಮಿಗಳ ವಿವಾದ, ಟಿಪ್ಪುುಸುಲ್ತಾಾನ್ ಇನಾಂ ಭೂಮಿ ಮತ್ತು 103 ಎಕರೆ ವಕ್ಫ್ ಭೂಮಿಗಳ ವಿವಾದಗಳು ನ್ಯಾಾಯಾಲಯದಲ್ಲಿವೆ. ಇವುಗಳನ್ನು ‘ಕಮ್ಯುನಲ್ ಗೂಂಡಾ’ಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾಾರೆ. ಈ ಬಗ್ಗೆೆ ಪಕ್ಷಾತೀತವಾಗಿ ಎಲ್ಲರೂ ಒಟ್ಟಾಾಗಿ ಹೋರಾಟ ಮಾಡೋಣ ಎಂದರು.
ಬಳ್ಳಾಾರಿ ಮಹಾನಗರ ಪಾಲಿಕೆ ವ್ಯಾಾಪ್ತಿಿಯಲ್ಲಿ ಇದೇ ರೀತಿಯಲ್ಲಿ ಅಕ್ರಮವಾಗಿ ಪರಭಾರೆ ಆಗಿರುವ – ಆಗುತ್ತಿಿರುವ ಭೂಮಿಗಳ ಕುರಿತು ಅಧಿಕಾರಿಗಳು ಎಚ್ಚೆೆತ್ತುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಮುಸ್ಲಿಿಂ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿಿತರಿದ್ದರು.
ಖಬರಸ್ತಾನ್ ಸೇರಿ ಎಲ್ಲಾ ಭೂ ಅಕ್ರಮಗಳ ಬಗ್ಗೆ ಬಿಜೆಪಿ ಧ್ವನಿ ಎತ್ತಲಿ

