ಸುದ್ದಿಮೂಲ ವಾರ್ತೆ ಮುದಗಲ್, ಜ.11:
ಜಾತಿ- ಮತ, ಪಂಥ, ಪಂಗಡಗಳನ್ನು ಮನೆಗೆ ಸೀಮಿತಗೊಳಿಸಿ, ಹೊರಗೆ ನಾವೆಲ್ಲರೂ ಹಿಂದೂ ಧರ್ಮೀಯರೆಂಬ ಭಾವನೆ ಪ್ರತಿಯೊಬ್ಬರಲ್ಲಿ ಮೂಡಲಿ ಎಂದು ಹಿಂದೂ ಧರ್ಮದ ಚಿಂತಕರು, ವಾಗ್ಮಿಿಗಳಾದ ಬೆಂಗಳೂರಿನ ಕು. ಹಾರಿಕಾ ಮಂಜುನಾಥ ಶನಿವಾರ ಅಭಿಪ್ರಾಾಯ ಪಟ್ಟರು.
ಸಮೀಪದ ಮಟ್ಟೂರು ಗ್ರಾಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾಾನದ ಆವರಣದಲ್ಲಿ ಹಿಂದೂ ಸಮಾಜೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು ಶತ ಶತಮಾನಗಳಿಂದ ಪರಕೀಯರಿಂದ ನಿರಂತರ ದಾಳಿಯಾದರೂ ಹಿಂದೂ ಧರ್ಮ ಇನ್ನೂ ಜೀವಂತವಾಗಿದೆ. ವೇದ, ಪುರಾಣ, ಉಪನಿಷತ್ ಗಳು, ಆದಿ ರೇಣುಕಾಚಾರ್ಯರ ಸಿದ್ದಾಂತ ಶಿಖಾಮಣಿ ಗ್ರಂಥದ ಜತೆಗೆ ಬಸವಾದಿ ಶರಣರ ವಚನಗಳು, ಸಾಧು-ಸಂತರು, ಋಷಿಮುನಿಗಳು, ದಾರ್ಶನಿಕರು ಕಾಲಕಾಲಕ್ಕೆೆ ಬಂದು ಸನಾತನ ಧರ್ಮದ ವೈಭವಿಸಿ ಪರಿಚಯಿಸಿದ್ದಾರೆ. ಕಲ್ಯಾಾಣದ ಅಲ್ಲಮಪ್ರಭು ಶರಣರು ನುಡಿದ ಭವಿಷ್ಯವಾಣಿ ಸತ್ಯವಾಯಿತು. ಕಾರಣ ನಮ್ಮ ಪೂರ್ವಜರು ಧರ್ಮ ಉಳಿವಿಗಾಗಿ ಸರ್ವಸ್ವವನ್ನೇ ತ್ಯಾಾಗ ಮಾಡಿದ್ದಾರೆ. ಮಕ್ಕಳಲ್ಲಿ ಜಾಗೃತಿ ಮೂಡಿಸಿ, ಹಿಂದೂ ಧರ್ಮ ಗ್ರಂಥಗಳನ್ನ ಪರಿಚಯಿಸಬೇಕು. ಧರ್ಮದ ತತ್ವ- ಸಿದ್ದಾಂತದ ಸಾರವನ್ನು ತಿಳಿಸಬೇಕು. ವಾರಕ್ಕೊೊಮ್ಮೆೆಯಾದರೂ ದೇವಸ್ಥಾಾನಕ್ಕೆೆ ಕುಟುಂಬದೊಂದಿಗೆ ತೆರಳಿ ಸಂಪ್ರದಾಯ, ಆಚಾರ- ವಿಚಾರ, ಸಂಸ್ಕೃತಿ, ಸಂಸ್ಕಾಾರಗಳನ್ನು ಎತ್ತಿಿ ಹಿಡಿಯಬೇಕು. ಸನಾತನ ಹಿಂದೂ ಧರ್ಮದ ಧಾರ್ಮಿಕ ಸಂಕೇತಗಳಾದ ವಿಭೂತಿ, ಕುಂಕುಮ, ಭಂಡಾರ, ಗಂಧಗಳನ್ನು ಧರಿಸುವ ಜತೆಗೆ ಮಕ್ಕಳಿಗೆ ತಿಳಿಸುವಂತ ಕೆಲಸವಾಗಬೇಕು. ಮನೆಯಲ್ಲಿ ತಾಯಂದಿರು ಹೆಣ್ಣು ಮಕ್ಕಳು ಹಣೆಗೆ ಕುಂಕುಮ ಧರಿಸುವಂತೆ ಪ್ರೇೇರೇಪಿಸಿ, ಸಂಸ್ಕಾಾರ ಕಲಿಸಬೇಕು. ಹಿರಿಯರು ಹಾಕಿಕೊಟ್ಟ ಪರಂಪರೆ, ಸಂಪ್ರದಾಯ, ಪದ್ದತಿ, ಆಚರಣೆಗಳನ್ನು ಉಳಿಸಿ ಬೆಳಸಬೇಕಿದೆ ಎಂದರು.
ಆರ್ ಎಸ್ಎಸ್ ದೇಶದ ಅತ್ಯಂತ ದೊಡ್ಡ ಹಿಂದೂ ಸಂಘಟನೆಯಾಗಿದೆ. ನೂರಾರು ವರ್ಷಗಳಿಂದ ಧರ್ಮ ಉಳಿವಿಗಾಗಿ ಸಂಘಟನೆ ಶ್ರಮಿಸುತ್ತ ಬಂದಿದೆ. ಶತಮಾನಗಳ ಹೋರಾಟದಿಂದ ಅಯೋಧ್ಯೆೆ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. ಸನಾತನ ಹಿಂದೂ ಧರ್ಮದ ಸಂಸ್ಕೃತಿ ರಕ್ಷಣೆ ಪ್ರತಿಯೊಬ್ಬರ ಕನಸಾಗಬೇಕು. ದೇಶದ ಹೆಮ್ಮೆೆಯ ಸೈನಿಕರು ಆಪರೇಶನ್ ಸಿಂಧೂರದ ಮೂಲಕ ಪರಂಪರೆಯ ಸಾರವನ್ನು ಸಾಕಾರಗೊಳಿಸಿದ್ದಾರೆ. ಧರ್ಮ ರಕ್ಷಣೆಗೆ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಹಿರಿಯರು ಹಿಂದೂ ಕಾರ್ಯಕರ್ತರಿಗೆ ನೈತಿಕ ಧೈರ್ಯ ನೀಡಬೇಕು. ಧರ್ಮ ರಕ್ಷಣೆ ಮಾಡಿ, ಧರ್ಮ ಸದಾ ನಮ್ಮ ರಕ್ಷಣೆ ನಿಲ್ಲುತ್ತೆೆ ಎಂದು ಹೇಳಿದರು.
ನಂದವಾಡಗಿ ಪರಮ ಪೂಜ್ಯ ಅಭಿನವ ಚೆನ್ನಬಸವ ಶಿವಾಚಾರ್ಯ ದೇವರು ಹಿಂದೂ ಧರ್ಮದ ಸಮಾಜೋತ್ಸವ ಕಾರ್ಯಕ್ರಮ ಉದ್ಘಾಾಟಿಸಿ ಆಶೀರ್ವಚನ ಮಾಡಿದರು.
ಕಾರ್ಯಕ್ರಮದಲ್ಲಿ ತಾಯಿ ಭಾರತಾಂಬೆಯ ಭಾವಚಿತ್ರಕ್ಕೆೆ ಯೋಗ ಗುರುಜೀ ಚಂದ್ರಯ್ಯಸ್ವಾಾಮೀ ಹಿರೇಮಠ ಮಟ್ಟೂರು ಪೂಜೆ ಸಲ್ಲಿಸಿ ಪುಷ್ಪಾಾರ್ಚನೆ ಮಾಡಿದರು.
ರ್ಆ ಎಸ್ ಎಸ್ ಸಂಘದ ಕುರಿತು ಲಿಂಗಸುಗೂರಿನ ಗಂಗಾಧರ ಮಾತನಾಡಿದರು.
ನಿರೂಪಣೆ ಬಸವರಾಜ ಗಸ್ತಿಿ ಬುದ್ದಿನ್ನಿಿ, ಬಸನಗೌಡ ಹುಡೇದ, ಗುಡಿಹಾಳ ನಾಗರಾಜ ನೆರವೇರಿಸಿದರು.
ಕಾರ್ಯಕ್ರಮಕ್ಕೆೆ ಪೋಲಿಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತು ನೀಡಲಾಗಿತ್ತು.
ಹಿಂದೂ ಸಮ್ಮೇಳನ ಸಮಿತಿ ಪದಾಧಿಕಾರಿಗಳು, ಮುದಗಲ್, ಮಟ್ಟೂರು, ಗುಡಿಹಾಳ, ಬುದ್ದಿನ್ನಿಿ, ಕುಣಿಕೆಲ್ಲೂರು, ಮಿಟ್ಟಿಿಕೆಲ್ಲೂರು, ತೆರಭಾವಿ ಸೇರಿದಂತೆ ಸುತ್ತಮುತ್ತಲಿನ ಗ್ರಾಾಮದ ಹಿರಿಯರು, ಮುಖಂಡರು, ಮಹಿಳೆಯರು, ಯುವಕರು, ಮಕ್ಕಳು ಇದ್ದರು.
ನಾವೆಲ್ಲರೂ ಹಿಂದೂಗಳೆಂಬ ಭಾವನೆ ಮೂಡಲಿ- ಕು. ಹಾರಿಕಾ ಮಂಜುನಾಥ

